Lockdown: ವಾಯಿನ್ ಶಾಪ್ ಓಪನ್ ಆಗುತ್ತಿದ್ದಂತೆಯೇ, ಗ್ರಾಹಕ ಮೊದಲು ಆರತಿ ಎತ್ತಿ ತೆಂಗಿನಕಾಯಿ ಒಡೆದ ದೃಶ್ಯ ವೈರಲ್!!

ಕೊರೊನ ಸಂಕ್ರಮಣದಿಂದ ಇಡೀ ಜಗತ್ತಿನ ಜನತೆಯೇ ರೋಸಿ ಹೋಗಿದೆ. ಅದರಲ್ಲೂ ಲಾಕ್ ಡೌನ್ ನಿಂದ ಅಂತೂ ಮನೆಯಲ್ಲಿ ಕುಳಿತು ಕುಳಿತು ಜನರಿಗೆ ಬೇಜಾರಾಗಿ ಬಿಟ್ಟಿದೆ.

ಇನ್ನು ಒಂದು ವಿಶೇಷ ಸಮುದಾಯದ ಬಗ್ಗೆ ಮಾತನಾಡುವದಾದರೆ ದೇಶದಲ್ಲಿರುವ ಎಣ್ಣೆ ಪ್ರೀಯರು. ಇವರ ಪಡುತ್ತಿರುವ ಕಷ್ಟ, ಬವಣೆ ಅಷ್ಟಿಟ್ಟಲ್ಲ. ಹಾಗೂ ಹೀಗೂ ಸರಕಾರ ರೆಡ್,ಆರೆಂಜ್ ಮತ್ತು ಗ್ರೀನ್ ಝೋನ್ ಅಂತ ವಿಂಗಡಿಸಿ ಕೆಲವು ಷರತ್ತು, ನಿಯಮಗಳೊಂದಿಗೆ ವೈನ್ ಶಾಪ್ ಓಪನ್ ಮಾಡಲು ಅನುಮತಿ ಕೊಟ್ಟಿದ್ದೇ ತಡ ಜನ ಒಂದೇ ಸಮನೆ ಮಧ್ಯ ಖರೀದಿಗೆ ಮುಗಿ ಬಿದ್ದಿದ್ದಾರೆ. ಇದರಲ್ಲಿ ಸರಕಾರದ ಬರಿದಾದ ಬೊಕ್ಕಸಕ್ಕೆ ಹೆಚ್ಚುವರಿ ಹಣ ಕರದ ರೂಪದಲ್ಲಿ ಬರುವದರಿಂದ ಖಾಲಿಯಾದ ಸರಕಾರದ ಖಜಾನೆ ತುಂಬಲು ಸಹಾಯವಾಗುವದು.

ಅಂಥದ್ದರಲ್ಲಿ ಇದಕ್ಕೆ ಸಂಬಂಧಪಟ್ಟ ಒಂದು ವೀಡಿಯೋ ತುಂಬಾ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವೈನ್ ಶಾಪ್ ತೆರೆದಿದ್ದೆ ತಡ ಗ್ರಾಹಕ ಖುಷಿಯಿಂದ ಅಂಗಡಿಯ ಆರತಿ ಮಾಡಿ ತೆಂಗಿನಕಾಯಿ ಒಡೆದ ಘಟನೆಯೊಂದು NDTV ಯವರು ತೋರಿಸಿದ್ದಾರೆ.

https://twitter.com/balajitech1/status/1257175763461132288?s=19

ಬಾಲಾಜಿ ಹೆಸರಿನ ಟ್ವಿಟರ್ ಯೂಜರ್ ನೊಬ್ಬ ಈ ವಿಡಿಯೋ ತನ್ನ ಅಕೌಂಟ್ ನಲ್ಲಿ ‘ಕುಡುಕನೊಬ್ಬ ಮಧ್ಯದಂಗಡಿಯ ಪೂಜೆ ಮಾಡುತ್ತಿರುವಾಗ’ ಎಂಬ ಕ್ಯಾಪ್ಶನ್ ದ ಅಡಿಯಲ್ಲಿ ಶೇರ್ ಮಾಡಿದ್ದಾನೆ.

ಅಂದ ಹಾಗೆ ಈ ವೀಡಿಯೋ ನಮ್ಮ ಕರ್ನಾಟಕದಲ್ಲಿಯದೇ ಆಗಿದೆ.