ರಸ್ತೆಯಲ್ಲಿ ಹೊರಟಿದ್ದ ಬೈಕ್ ಚಾಲಕನನ್ನು ತಡೆದ ತಮಿಳುನಾಡಿನ ಪೋಲಿಸ್ ಅಧಿಕಾರಿ: ಘಟನೆಯ ವಿವರ ತಿಳಿದು ಹರಿದು ಬಂತು ಅಪಾರ ಮೆಚ್ಚುಗೆ

ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನೊಬ್ಬ ನನ್ನು ತಮಿಳುನಾಡಿನ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಯಲ್ಲಿ ನಿಲ್ಲಿಸಿದ್ದ ವಿಡಿಯೋ ಒಂದು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಾ ಸಾಗಿದೆ. ಈ ಘಟನೆಯ ಮಾಹಿತಿಯನ್ನು ತಿಳಿದ ನಂತರ ಸೋಶಿಯಲ್ ಮೀಡಿಯಾ ಗಳಲ್ಲಿ ನೆಟ್ಟಿಗರಿಂದ ಕೂಡಾ ದೊಡ್ಡ ಮಟ್ಟದಲ್ಲಿ ಬಹಳಷ್ಟು ಶ್ಲಾಘನೆಗಳು ಹರಿದು ಬರುತ್ತಿವೆ. ಬೆಂಗಳೂರಿನ ಐಟಿ ಉದ್ಯೋಗಿ ಅರುಣ್ ಮೂಲ್ಯ ಅವರು ತಮಿಳುನಾಡಿನ ರಸ್ತೆಯೊಂದರಲ್ಲಿ ತಮ್ಮ ಬೈಕ್ ನಲ್ಲಿ ಸಂಚರಿಸುವಾಗ ಅವರನ್ನು ದಾರಿ ಮಧ್ಯೆ ಪೊಲೀಸ್ ಅಧಿಕಾರಿಯೊಬ್ಬರು ತಡೆದು ನಿಲ್ಲಿಸಿದ್ದರು. ಆನಂತರ ನಡೆದ ಘಟನೆಯ ವಿವರ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಿದ್ದರೆ ಈ ಘಟನೆಯ ವಿವರ ಏನು ಎಂದು ತಿಳಿಯೋಣ ಬನ್ನಿ.

ಈ ವಿಡಿಯೋವನ್ನು ಅನ್ನಿ ಅರುಣ್ ಎನ್ನುವ ಯುಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಗಮನಿಸಿದಾಗ ಬೈಕ್ ಚಾಲಕ ತನ್ನ ಬೈಕ್ ನಲ್ಲಿ ಪ್ರಯಾಣ ಹೊರಟಿರುವಾಗ ಮಾರ್ಗ ಮಧ್ಯೆ ಪೊಲೀಸ್ ಅಧಿಕಾರಿ ಅವರನ್ನು ತಡೆದು ನಿಲ್ಲಿಸುತ್ತಾರೆ. ಆನಂತರ ಅವರು ಬೈಕ್ ಚಾಲಕನನ್ನು ಕರ್ನಾಟಕದಿಂದ ಬಂದಿರುವುದೇ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಬೈಕ್ ಚಾಲಕ ಹೌದು ಎಂದು ಹೇಳುತ್ತಾರೆ. ಆಗ ಪೊಲೀಸ್ ಅಧಿಕಾರಿ ಇದೇ ರಸ್ತೆಯಲ್ಲಿ ಸರ್ಕಾರಿ ಬಸ್ಸೊಂದು ಮುಂದೆ ಸಾಗಿ ಹೋಗುತ್ತಿದೆ, ಆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವ ಮಹಿಳೆಯೊಬ್ಬರು ಔಷಧಿ ಬಾಟಲ್ ಒಂದನ್ನು ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದಾರೆ ಎಂದು ವಿವರಿಸಿ, ಬೈಕ್ ಸವಾರನನ್ನು ಔಷಧಿ ಬಾಟಲನ್ನು ಮಹಿಳೆಗೆ ತಲುಪಿಸುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.

ಅರುಣ್ ಅವರು ಕಳೆದ ಹತ್ತು ವರ್ಷಗಳಿಂದಲೂ ತಮ್ಮ ಬೈಕ್ ನಲ್ಲಿ ಭಾರತವನ್ನು ಸುತ್ತುತ್ತಿದ್ದು, ತಮ್ಮ ಪ್ರಯಾಣದ ಅನುಭವಗಳನ್ನು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಈ ವಿಶೇಷ ವಿಡಿಯೋವನ್ನು ಶೇರ್ ಮಾಡಿಕೊಂಡ ಅರುಣ್ ಅವರು ವಿಡಿಯೋದ ಶೀರ್ಷಿಕೆಯಲ್ಲಿ, ನಾನು ಪೊಲೀಸ್ ಪೊಲೀಸ್ ಒಬ್ಬರು ನನ್ನ ಬೈಕ್ ಅನ್ನು ತಡೆದು ನಿಲ್ಲಿಸುವ ವೀಡಿಯೋ ರೆಕಾರ್ಡ್ ಮಾಡುತ್ತೇನೆಂದು ನಿರೀಕ್ಷೆಯನ್ನು ಮಾಡಿರಲಿಲ್ಲ ಆದರೆ ಅಂತಹದೊಂದು ಅನಿರೀಕ್ಷಿತ ವಿಡಿಯೋ ಪೋಸ್ಟ್ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅರುಣ್ ಅವರು ಈಗಾಗಲೇ ಗುಜರಾತ್, ರಾಜಸ್ಥಾನ, ಲೇಹ್,‌ಲಡಾಖ್ ,ಹಿಮಾಲಯ ಪರ್ವತ ಶ್ರೇಣಿಯಲ್ಲಿನ ಪ್ರದೇಶಗಳು ಹೀಗೆ ಹಲವು ಕಡೆ ಬೈಕ್ ನಲ್ಲಿ ಸಂಚಾರ ಮಾಡಿದ್ದಾರೆ.

ಅವರು ತಾನು ಬೈಕ್ ನಲ್ಲಿ ಪ್ರಯಾಣಿಸುವಾಗ ನಡೆಯುವ ಘಟನೆಗಳನ್ನು, ಅಲ್ಲಿನ‌ ಸ್ಥಳೀಯ ಜನರೊಂದಿಗೆ ನಡೆಯುವ ಸಂವಹನಗಳು ಹೀಗೆ ಎಲ್ಲ ವಿಷಯವನ್ನು ವಿಡಿಯೋಗಳಲ್ಲಿ ರೆಕಾರ್ಡ್ ಮಾಡಿ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಈ ಬಾರಿ ಅವರು ಹಂಚಿಕೊಂಡ ವಿಡಿಯೋ ಬಹಳ ವಿಶೇಷವಾಗಿದೆ. ಅರುಣ್ ತೆಂಕಾಶಿಗೆ ಹೋಗುವಾಗ ಈ ಘಟನೆಯು ನಡೆದಿದ್ದು, ಈ ಬಾರಿ ತಾನು ರೆಕಾರ್ಡ್ ಮಾಡಿದ ಘಟನೆ ಬಹಳ ವಿಶಿಷ್ಟವಾದುದು ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ನೋಡಿ

ಪೊಲೀಸ್ ಅಧಿಕಾರಿಯು ನೀಡಿದ ಔಷಧಿ ಬಾಟಲ್ ಪಡೆದು, ತನ್ನ ಬೈಕ್ ನ ವೇಗವನ್ನು ಹೆಚ್ಚಿಸಿಕೊಂಡು ಒಂದಷ್ಟು ದೂರ ಮುಂದೆ ಸಾಗಿ ಹೋಗಿದ್ದ ಬಸ್ಸನ್ನು ಬೆನ್ನಟ್ಟಿ ತಲುಪುವಲ್ಲಿ ಅರುಣ್ ಯಶಸ್ವಿಯಾಗಿ ಔಷಧಿ ಬಾಟಲನ್ನು ಬೆಳೆಸಿಕೊಂಡು ಹೋಗಿದ್ದ ಮಹಿಳೆಯ ಕೈಗೆ ಅದನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ 18 ಲಕ್ಷಕ್ಕಿಂತಲೂ ಅಧಿಕ ಜನ ವಿಡಿಯೋವನ್ನು ನೋಡಿದ್ದರೆ, 47 ಸಾವಿರ ಜನ ವಿಡಿಯೋಗೆ ಲೈಕ್ ನೀಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಗಳನ್ನು ಮಾಡಿ ಅರುಣ್ ಅವರ ಕಾರ್ಯವನ್ನು ಹಾಗೂ ಪೊಲೀಸ್ ಅಧಿಕಾರಿಯ ಕಾಳಜಿಯನ್ನು ಜನ ಶ್ಲಾಘಿಸಿದ್ದಾರೆ.