ಧನಾಶ್ರೀ ವರ್ಮಾ,ಕ್ರಿಕೆಟರ್ ಶಿಖರ್ ಧವನ್ ಬಾಂಗ್ಡಾ ಡಾನ್ಸ್ ನೋಡಿ ಅಭಿಮಾನಿಗಳು ಫಿದಾ: ವೈರಲ್ ಆಯ್ತು ಡಾನ್ಸ್ ವೀಡಿಯೋ

ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಪ್ರಸ್ತುತ ವಿವಿಧ ಫ್ರಾಂಚೈಸಿ ತಂಡಗಳ ತಂಡಗಳ ಜೊತೆಗೆ ಐಪಿಎಲ್ ನಲ್ಲಿ ತೊಡಗಿಕೊಂಡಿದ್ದು, ಸಾಕಷ್ಟು ಬ್ಯುಸಿಯಾಗಿದ್ದಾರೆ. ಭಾರತ ಇತ್ತೀಚೆಗೆ ಟೆಸ್ಟ್, ಟಿ-ಟ್ವೆಂಟಿ ಹಾಗೂ ಒನ್ ಡೇ ಸೇರೀಸ್ ಗಳಲ್ಲಿ ಇಂಗ್ಲೆಂಡನ್ನು ಸೋಲಿಸಿತ್ತು. ಈ ವೇಳೆ ಓಪನರ್ ಶಿಖರ್ ಧವನ್ ಉತ್ತಮ ಪ್ರದರ್ಶನವನ್ನು ನೀಡಿ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಶಿಖರ್ ಧವನ್ ಐಪಿಎಲ್ ಹದಿನಾಲ್ಕನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲೂ ಓಪನರ್ ಆಗಿರುವ ಶಿಖರ್ ಧವನ್ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವುದು ಕೂಡಾ ವಿಶೇಷ. ಇವರು ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ತಮ್ಮ ಹಲವು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದರು. ಅವರು ಹಂಚಿಕೊಂಡ ಈ ವಿಡಿಯೋಗಳು ಅವರ ಅಭಿಮಾನಿಗಳಿಗೆ ಬಹಳ ಖುಷಿ ನೀಡಿದ್ದವು.

ಈಗ ಅವರು ಮತ್ತೊಂದು ವೀಡಿಯೋ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಬಾರಿ ಸೋಶಿಯಲ್ ಮೀಡಿಯಾ ಗಳಲ್ಲಿ ಶಿಖರ್ ಧವನ್ ಅವರ ಡ್ಯಾನ್ಸ್ ವಿಡಿಯೋ ಒಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ಡಾನ್ಸ್ ವಿಡಿಯೋಗೆ ವಿಶೇಷ ಒಂದು ಸೇರಿದೆ. ಏನು ಆ ವಿಶೇಷ ಎನ್ನುವುದಾದರೆ, ಇದರಲ್ಲಿ ಶಿಖರ್ ಧವನ್ ಅವರ ಜೊತೆಗೆ ಮತ್ತೊಬ್ಬರು ಡ್ಯಾನ್ಸ್ ಸ್ಟೆಪ್ ಗಳನ್ನು ಹಾಕಿ ರಂಜಿಸಿದ್ದಾರೆ. ಹೌದು ವೈರಲ್ ವೀಡಿಯೋದಲ್ಲಿ ಶಿಖರ್ ಧವನ್ ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಯಜ್ವೇಂದ್ರ ಚಹಲ್ ಅವರ ಪತ್ನಿ, ಸೋಶಿಯಲ್ ಮೀಡಿಯಾ ಗಳಲ್ಲಿ ಈಗಾಗಲೇ ಡ್ಯಾನ್ಸಿಂಗ್ ಸೆನ್ಸೇಶನ್ ಎನ್ನುವ ಖ್ಯಾತಿಯನ್ನು ಗಳಿಸಿರುವ ಧನಶ್ರೀ ವರ್ಮಾ ಅವರ ಜೊತೆಗೆ ಹೆಜ್ಜೆ ಹಾಕಿದ್ದಾರೆ.

ಶಿಖರ್ ಧವನ್ ಹಾಗೂ ಧನಾಶ್ರೀ ವರ್ಮಾ ಇಬ್ಬರೂ ಕೂಡಾ ಪಂಜಾಬಿ ನೃತ್ಯವಾದ ಬಾಂಗ್ಡಾ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಧನಾಶ್ರೀ ವರ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು , ವೀಡಿಯೋದಲ್ಲಿ ಧನಾಶ್ರೀ ಹಾಗೂ ಶಿಖರ್ ಧವನ್ ಬಹಳ ಚೆನ್ನಾಗಿ ಬಾಂಗ್ಡಾ ಡಾನ್ಸ್ ಸ್ಟೆಪ್ಪು ಗಳನ್ನು ಹಾಕಿದ್ದಾರೆ. ವಿಡಿಯೋ ಶೇರ್ ಮಾಡುತ್ತಾ ಧನಾಶ್ರೀ ಆದರೆ ಶೀರ್ಷಿಕೆಯಲ್ಲಿ ಗಬ್ಬರ್ ಸ್ಟೈಲ್ ನಲ್ಲಿ ಬಾಂಗ್ಡಾ ಎಂದು ಬರೆದುಕೊಂಡಿದ್ದಾರೆ.
ಧನಾಶ್ರೀ ವರ್ಮ ಶೇರ್ ಮಾಡಿದ ಈ ವಿಡಿಯೋ ಅಭಿಮಾನಿಗಳಿಗೆ ಬಹಳಷ್ಟು ಇಷ್ಟವಾಗಿದೆ. ಧನಾಶ್ರೀ ವರ್ಮಾ ಅವರ ಡಾನ್ಸ್ ವೀಡಿಯೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗುತ್ತಲೇ ಇರುತ್ತವೆ. ಈಗ ಈ ವೀಡಿಯೋ ಸಹಾ ವೈರಲ್ ಆಗಿದೆ.

ಇಂಗ್ಲೆಂಡ್ ವಿರುದ್ಧ ನಡೆದ ಸರಣಿ ಕ್ರಿಕೆಟ್ ನಲ್ಲಿ ಧನಾಶ್ರೀ ವರ್ಮ ಯಜ್ವೇಂದ್ರ ಚಹಲ್ ಜೊತೆ ಇದ್ದರು. ಅನಂತರ ಅವರು ಕಳೆದ ಪುಣೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಲು ಚಹಲ್, ಧನಾಶ್ರೀ ಮತ್ತು ಪೇಸರ್ ಮೊಹಮ್ಮದ್ ಸಿರಾಜ್ ಅವರು ಮಂಗಳವಾರ ತಂಡವು ಉಳಿದುಕೊಂಡಿರುವ ಹೋಟೆಲ್ ಗೆ ಆಗಮಿಸಿದರು. ಚಹಲ್ ಮತ್ತು ಸಿರಾಜ್ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಇನ್ನು ಧನಾಶ್ರೀ ವರ್ಮಾ ಅವರು ಡಾನ್ಸ್ ನಿಂದಾಗಿಯೇ ಸೋಶಿಯಲ್ ಮೀಡಿಯಾಗಳ ಸ್ಟಾರ್ ಆಗಿದ್ದಾರೆ. ಅವರ ಒಂದೊಂದು ಡಾನ್ಸ್ ವೀಡಿಯೋ ಕೂಡಾ ಲಕ್ಷಗಟ್ಟಲೆ ವೀಕ್ಷಣೆ ಪಡೆಯುವುದು ಸಾಮಾನ್ಯವಾಗಿದೆ.

ವಿಡಿಯೋ ನೋಡಿ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಶಿಖರ್ ಧವನ್ 98 ಮತ್ತು 67 ರನ್ ಗಳನ್ನು ಗಳಿಸಿದ್ದರು. ಈಗ ಅವರು ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಮ್ಮ ಐಪಿಎಲ್ ಪಂದ್ಯದ ಮೊದಲ ಪಂದ್ಯದಲ್ಲಿ ಏಪ್ರಿಲ್ 10 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ ಎನ್ನಲಾಗಿತ್ತು. ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಗಾಯಗೊಂಡ ಕಾರಣದಿಂದಾಗಿ ಶ್ರೇಯಸ್ ಅಯ್ಯರ್ ಅವರು ಆ ಸ್ಥಾನದಲ್ಲಿ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.