Video: ಗೆಳತಿಯೊಂದಿಗೆ ಪ್ಲ್ಯಾಂಕ್ ಎಕ್ಸರ್ ಸೈಜ್ ಮಾಡಿದ ಮಲೈಕಾ ಅರೋರಾ, ನಟಿಯ ಫಿಟ್ನೆಸ್ ನೋಡಿ ಫ್ಯಾನ್ಸ್ ಫುಲ್ ಫಿದಾ

ಬಾಲಿವುಡ್ ನಟಿ ಹಾಗೂ ಮಾಡೆಲ್ ಕೂಡಾ ಆಗಿರುವ ಮಲೈಕ ಅರೋರ ತಮ್ಮ ಡ್ಯಾನ್ಸ್ ಗಳಿಂದಲೇ ಸಿನಿಮಾಗಳನ್ನು ಸೂಪರ್ ಹಿಟ್ ಮಾಡಿರುವ ಉದಾಹರಣೆ ಉಂಟು. ಮಲೈಕಾ ಅರೋರಾ ಡ್ಯಾನ್ಸ್ ಗಳನ್ನು ಇಷ್ಟಪಡುವ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಶಾರುಖ್ ಖಾನ್ ಜೊತೆಗಿನ ಚೈಯ್ಯಾ, ಚೈಯ್ಯಾ ಹಾಗೂ ಸಲ್ಮಾನ್ ಖಾನ್ ಜೊತೆ ನಟಿಸಿರುವ ಮುನ್ನಿ ಬದ್ನಾಮ್ ಹುಯಿ ಹಾಡುಗಳಿಗೆ ಮಲೈಕ ಅರೋರಾ ಅವರ ಡ್ಯಾನ್ಸ್ ಸ್ಟೆಪ್ಪು ಗಳನ್ನು ಜನ ಇಂದಿಗೂ ಮರೆತಿಲ್ಲ. ಈ ಹಾಡುಗಳು ಇಂದಿಗೂ ಕೂಡ ಸೂಪರ್ ಹಿಟ್ ಹಾಡುಗಳ ಸಾಲಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ತಮ್ಮ ಡ್ಯಾನ್ಸ್ ಗಳ ಹೊರತಾಗಿ ಮಲೈಕ ಅರೋರ ತಮ್ಮ ಲುಕ್ಸ್ ಹಾಗೂ ಸ್ಟೈಲ್ ನಿಂದಾಗಿ ಕೂಡಾ ಮೀಡಿಯಾದ ಕ್ಯಾಮೆರಾಗಳ ದೃಷ್ಟಿಯನ್ನು ಸೆಳೆಯುತ್ತಲೇ ಇರುತ್ತಾರೆ. ಮಲೈಕಾ ಅವರ ಅಂದವಾದ ಫೋಟೋಗಳು, ವೀಡಿಯೋಯಳು ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ.

ಇನ್ನು ಫಿಟ್ನೆಸ್ ವಿಷಯಕ್ಕೆ ಬಂದರೆ ಬಾಲಿವುಡ್ ನಲ್ಲಿ ತಕ್ಷಣ ಕೇಳಿ ಬರುವ ಕೆಲವೇ ನಟಿಯರ ಹೆಸರುಗಳಲ್ಲಿ ಮಲೈಕ ಅರೋರ ಅವರ ಹೆಸರು ಮೊದಲು ಇರುತ್ತದೆ. ಈ ನಟಿಯ ವಯಸ್ಸು 45 ದಾಟಿದರೂ ಯುವತಿಯರನ್ನು ನಾಚಿಸುವಂತಹ ಮೈಮಾಟ ಹೊಂದಿದ್ದಾರೆ. ಮಲೈಕ ಅವರ ಫಿಟ್ನೆಸ್ ಸೀಕ್ರೇಟನ್ನು ಎಲ್ಲರೂ ತಿಳಿಯಲು ಬಯಸುತ್ತಾರೆ. ಮಲೈಕ ತಮ್ಮ ಫಿಟ್ನೆಸ್ ಫೋಟೋಗಳು ಹಾಗೂ ವೀಡಿಯೋಗಳನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವರ ಅಭಿಮಾನಿಗಳು ಈ ಫೋಟೋ ಹಾಗೂ ವಿಡಿಯೋಗಳಿಗೆ ಭರ್ಜರಿ ಮೆಚ್ಚುಗೆಯನ್ನು ಸೂಚಿಸುವುದು ಸದಾ ನಡೆದೇ ಇರುತ್ತದೆ. ಈಗ ಮಲೈಕ ಮತ್ತೊಮ್ಮೆ ಮಾಧ್ಯಮಗಳ ಮುಖ್ಯ ಸುದ್ದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಫಿಟ್ನೆಸ್ ಮಂತ್ರ.

ಮಲೈಕಾ ಶೇರ್ ಮಾಡಿರುವ ಹೊಸ ವಿಡಿಯೋ ಒಂದು ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಲೈಕ ಪ್ಲಾಂಕ್ಸ್ ಮಾಡುತ್ತಿರುವುದು ಕಂಡುಬರುತ್ತದೆ. ಅವರು ತಮ್ಮ ಗೆಳತಿ ಜಾಹ್ನವಿ ಪಟವರ್ಧನ್ ಜೊತೆ ಸೇರಿ ಪ್ಲಾಂಕ್ಸ್ ಮಾಡುತ್ತಿದ್ದಾರೆ. ವಿಡಿಯೋದ ಕ್ಯಾಪ್ಷನ್ ನಲ್ಲಿ ಪ್ಲಾಂಕ್ಸ್ ಮಾಡುವುದರಿಂದ ಮನರಂಜನೆ ಸಿಗುವುದಿಲ್ಲ ಎಂದು ಯಾರು ಹೇಳಿದ್ದು?? ನಿಮ್ಮ ಪ್ರೀತಿ ಪಾತ್ರರೊಡನೆ ಮಾಡಿನೋಡಿ ಆಗ ಮನರಂಜನೆ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ. ಮಲೈಕ ವಿಡಿಯೋ ಶೇರ್ ಮಾಡಿದ ಮೇಲೆ ಅವರ ಅಭಿಮಾನಿಗಳು ಭರ್ಜರಿ ಲೈಕ್ಸರ ಗಳನ್ನು ಒತ್ತುತ್ತಾ ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆಯನ್ನು ಹರಿಸುತ್ತಿದ್ದಾರೆ.

ಮಲೈಕ ಅರೋರ ಯೋಗದಿಂದ ಹಿಡಿದು ಜಿಮ್ ಮಾಡುವವರಿಗೆ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಪ್ರತಿ ವಿಡಿಯೋ ಕೂಡಾ ಬಹಳ ವೈರಲ್ ಆಗುತ್ತಲೇ ಇರುತ್ತದೆ. ಕೆಲವೇ ದಿನಗಳ ಹಿಂದೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಲೇ ಡ್ಯಾನ್ಸ್ ಕೌಶಲ್ಯವನ್ನು ಪ್ರದರ್ಶನ ಮಾಡಿದ್ದ ಅವರ ವಿಡಿಯೋ ವೈರಲ್ ಹಾಗೆ ಸಹಸ್ರಾರು ಸಂಖ್ಯೆಯಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿದ್ದು, ಲಕ್ಷಗಟ್ಟಲೆ ಜನರು ಅದನ್ನು ವೀಕ್ಷಣೆ ಪಡೆದುಕೊಂಡಿತ್ತು. ಅಲ್ಲದೇ ಇತ್ತೀಚೆಗೆ ಬಾಲಿವುಡ್‌ ನಟ ಸೋನು ಸೂದ್ ಅವರ ಜೊತೆ ಹಾಡಿಗೆ ನೃತ್ಯ ಮಾಡಿದ ವೀಡಿಯೋ ಸಹಾ ವೈರಲ್ ಆಗಿ ಗಮನ ಸೆಳೆದಿತ್ತು.

ವಿಡಿಯೋ ನೋಡಿ

ಸೋನು ಸೂದ್ ಜೊತೆ ಭರ್ಜರಿ ಸ್ಟೆಪ್ಪು ಗಳನ್ನು ಹಾಕುತ್ತಾ ಕುಣಿದ ಮಲೈಕಾ ಅವರ ವಿಡಿಯೋ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ರಿಯಾಲಿಟಿ ಡ್ಯಾನ್ಸ್ ಶೋ ಒಂದರಲ್ಲಿ ಮಾಡಿದ ಡ್ಯಾನ್ಸ್ ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದೆ. ಮಲೈಕಾ ಅರೋರಾ ಕೆಲವು ವರ್ಷಗಳ ಹಿಂದೆ ಪತಿ ಅರ್ಬಾಜ್ ಖಾನ್ ಅವರಿಂದ ವಿಚ್ಚೇದನ ಪಡೆದಿದ್ದು, ಪ್ರಸ್ತುತ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಆಗಾಗ ಸೋಶಿಯಲ್ ಮೀಡಿಯಾ ಗಳಲ್ಲಿ ಸದ್ದು ಮಾಡುತ್ತಲೇ ಇರುತ್ತದೆ.