Viral Video: ಬೇಟೆಯೇ ಬಂದು ಬಲೆಗೆ ಬಿದ್ದ ಹಾಗೆ, ತಾನಾಗಿಯೇ ಬಂದು ಸಿಂಹದ ಕೈಗೆ ಸಿಕ್ಕಿ ಕೊಂಡ ಜಿಂಕೆ!

ಸಿಂಹ ಕಾಡಿನ ರಾಜ. ಅದು ಯಾವಾಗ , ಯಾವ ಪ್ರಾಣಿಯನ್ನು ಆದರೂ ಬೇಟೆಯಾಡಿ, ಹಿಡಿದು ತಿನ್ನಬಹುದು. ಸಿಂಹಕ್ಕೆ ಯಾವುದೇ ಪ್ರಾಣಿಯನ್ನು ಆದರೂ ಹಿಡಿದು ತಿನ್ನುವ ಸಾಮರ್ಥ್ಯವಿದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಒಂದು ವಿಡಿಯೋ ಈಗ ನೆಟ್ಟಿಗರಿಗೆ ನೋಡಲು ಲಭ್ಯವಾಗಿದೆ. ಅಸಂಖ್ಯಾತ ಮಂದಿ ಈಗಾಗಲೇ ಈ ವಿಡಿಯೋವನ್ನು ವೀಕ್ಷಣೆ ಮಾಡಿರುವುದು ಮಾತ್ರವೇ ಅಲ್ಲದೆ ಆದರೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕೂಡ ಹೊರಹಾಕಿದ್ದಾರೆ‌. ಈ ವಿಡಿಯೋದಲ್ಲಿ ಗಮನಿಸಿದಾಗ ಸಿಂಹವು ಜಿಂಕೆಯೊಂದು ರಸ್ತೆಯನ್ನು ದಾಟುವಾಗ ಅದರ ಮೇಲೆ ಆಕ್ರಮಣವನ್ನು ಮಾಡಿ ಹಿಡಿದುಕೊಂಡಿದ್ದು, ವಿಶೇಷ ಎಂದರೆ ಸಿಂಹಕ್ಕೆ ಆಗ ಯಾವುದೇ ಬೇಟೆಯ ಅವಶ್ಯಕತೆ ಇರಲಿಲ್ಲ ಎನ್ನಲಾಗಿದ್ದು, ಅದು ಬಹಳ ಆರಾಮವಾಗಿ ರಸ್ತೆಯಲ್ಲಿ ತಿರುಗಾಡಿಕೊಂಡಿತ್ತು. ಆದರೆ ಜಿಂಕೆಯ ಅದೃಷ್ಟವೇ ಸರಿ ಇರಲಿಲ್ಲ ಎನ್ನುವಂತೆ ಅದು ಸಿಂಹದ ಮುಂದೆ ರಸ್ತೆ ದಾಟುವ ಪ್ರಯತ್ನ ಮಾಡಿ ಸಿಂಹದ ಕೈಗೆ ಸಿಕ್ಕಿ ಹಾಕಿಕೊಂಡಿದೆ.

ಮುಂದೇನಾಯಿತು? ಎನ್ನುವುದಾದರೆ ಸಹಜವಾಗಿಯೇ ತಾನು ಬಯಸದೇ ಹೋದರೂ ತನ್ನ ಮುಂದೆ ಬಂದ ಆತಿಥ್ಯವನ್ನು ಹೇಗೆ ತಾನೆ ಬಿಡಲು ಸಾಧ್ಯ ಎನ್ನುವಂತೆ ಸಿಂಹವು ಜಿಂಕೆಗೆ ಒಂದು ಗತಿಯನ್ನು ಕಾಣಿಸಿದೆ. ಈ ವಿಡಿಯೋವನ್ನು ಕ್ರುಗರ್ ಸೈಟಿಂಗ್ಸ್ ಎನ್ನುವ ಒಂದು ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿದೆ. ಜಿಂಕೆಯನ್ನು ಬೇಟೆಯಾಡಿದ ಸಿಂಹದ ಈ ವಿಡಿಯೋವನ್ನು 65 ಲಕ್ಷ 33 ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ವಿಡಿಯೋದಲ್ಲಿನ ದೃಶ್ಯವನ್ನು ಗಮನಿಸಿದಾಗ ಯಾವುದೋ ಒಂದು ಕಾಡಿನ ಮಧ್ಯೆ ಸಾಗುವ ರಸ್ತೆಯಲ್ಲಿ ಸಿಂಹವೊಂದು ಆರಾಮವಾಗಿ ಅಡ್ಡಾಡಿಕೊಂಡಿರುವುದು ಕಾಣುತ್ತದೆ.

ರಸ್ತೆಯಲ್ಲಿ ಸಿಂಹವು ಬಂದಿದ್ದನ್ನು ನೋಡಿ ವಾಹನ ಚಾಲಕರು ತಮ್ಮ ತಮ್ಮ ವಾಹನಗಳನ್ನು ಅಲ್ಲೇ ನಿಲ್ಲಿಸಿ ಸುಮ್ಮನಾಗಿದ್ದಾರೆ. ಇದರಿಂದ ಇಡೀ ರಸ್ತೆಯು ವಾಹನಗಳಿಂದ ಜಾಮ್ ಆಗುತ್ತದೆ. ಹೀಗೆ ಇಡೀ ರಸ್ತೆಯು ವಾಹನಗಳು ಜಾಮ್ ಆಗ ತೊಂದರೆ ಅನುಭವಿಸುತ್ತಿದ್ದರೆ, ಕಾಡಿನ ರಾಜ ಸಿಂಹ ಮಾತ್ರ ತನ್ನ ಗತ್ತು ಹಾಗೂ ಗಾಂಭೀರ್ಯದಿಂದ ರಸ್ತೆಯಲ್ಲಿ ಮುಂದೆ ಚಲಿಸುತ್ತದೆ. ಸಿಂಹದ ನಡಿಗೆಯನ್ನು ಗಮನಿಸಿದಾಗ ಅದು ಬಹುಶಃ ಬೇಟೆಯನ್ನು ಆಡಲು ಬಂದಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಒಂದು ವೇಳೆ ಬೇಟೆಯಾಡಲು ಬಂದಿದ್ದರೆ ಆದರೆ ನಡಿಗೆಯಲ್ಲಿ ಬೇರೊಂದು ವಿಶೇಷತೆ ಇರುತ್ತಿತ್ತು.

ಜಾಗೆ ಸಿಂಹ ನಿಧಾನವಾಗಿ ಮುಂದೆ ಸಾಗುತ್ತಿದ್ದರೆ ವಾಹನಗಳು ನಿಧಾನವಾಗಿ ಅದರ ಹಿಂದೆ ಸಾಗುತ್ತಾ ಬರುತ್ತಿರುವುದು ಕಾಣುತ್ತದೆ. ವಾಹನಗಳಲ್ಲಿ ಕುಳಿತಿದ್ದ ಜನರು ಅದೇ ಸುಸುಮನ ಎಂದು ಕೊಂಡು ಸಿಂಹದ ಫೋಟೋಗಳನ್ನು ತೆಗೆದುಕೊಳ್ಳುವುದು, ಹಾಗೂ ವಿಡಿಯೋಗಳನ್ನು ಮಾಡಿಕೊಳ್ಳುವುದರಲ್ಲಿ ತೊಡಗಿಕೊಂಡಿದ್ದಾರೆ. ಇದೇ ವೇಳೆ ಹತ್ತಿರದ ಪೊದೆಗಳಿಂದ ಒಂದು ಜಿಂಕೆಯು ರಸ್ತೆಗೆ ನಡೆದುಕೊಂಡು ಬರುತ್ತದೆ‌‌. ತನ್ನನ್ನು ಬೇಟೆಯಾಡುವ ಬೇಟೆಗಾರರನೂ ಅದೇ ರಸ್ತೆಯಲ್ಲೇ ಇರುವನೆಂಬ ಊಹೆ ಕೂಡಾ ಮಾಡಿರದ ಜಿಂಕೆ ರಸ್ತೆಗೆ ಕಾಲಿಟ್ಟಿದೆ. ಈ ವೇಳೆ ಅನಿರೀಕ್ಷಿತವಾಗಿ ಕಂಡಂತಹ ಅತಿಥಿಯನ್ನು ಸಿಂಹ ಸುಮ್ಮನೆ ಬಿಟ್ಟಿಲ್ಲ.

ವಿಡಿಯೋ ನೋಡಿ

ಜಿಂಕೆಯನ್ನು ನೋಡಿದ ಕೂಡಲೇ ಸಿಂಹವು ತಡ ಮಾಡದೆ ಅದರ ಮೇಲೆ ನೆಗೆದು ಅದನ್ನು ಹಿಡಿದುಕೊಳ್ಳುತ್ತದೆ. ಅನಿರೀಕ್ಷಿತವಾಗಿ ಮೈಮೇಲೆ ಎರಗಿದ ಶ ತ್ರು ವಿನಿಂದ ತಪ್ಪಿಸಿಕೊಳ್ಳಲು ಜಿಂಕೆ ಬಹಳಷ್ಟು ಪ್ರಯತ್ನ ಪಡುತ್ತದೆ. ಆದರೆ ಸಿಂಹ ಅದರ ಹಿಂದಿನ ಎರಡು ಕಾಲುಗಳನ್ನು ಗಟ್ಟಿಯಾಗಿ ಹಿಡಿದಿರುತ್ತದೆ. ಆದರೂ ಜಿಂಕೆ ತನ್ನ ಕಾಲುಗಳಿಂದ ಪಟಪಟನೆ ಹೊಡೆಯುವ ಮೂಲಕ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತದೆಯಾದರೂ ಅದು ಸಾಧ್ಯವಾಗುವುದಿಲ್ಲ. ಸಿಂಹವು ತನ್ನ ಹರಿತವಾದ ಹಲ್ಲುಗಳಿಂದ ಜಿಂಕೆಯ ಕುತ್ತಿಗೆಯ ಮೇಲೆ ಗಟ್ಟಿಯಾಗಿ ಕಚ್ಚುತ್ತದೆ. ಸಿಂಹದ ಧಾ ಳಿ ಗೆ ಸಿಕ್ಕು ಪ್ರಾಣಬಿಟ್ಟ ಜಿಂಕೆಯನ್ನು ತಿಂದು ಮುಗಿಸುತ್ತದೆ.