ಆನ್ಲೈನ್ ನಲ್ಲೇ ಪೆಟ್ರೋಲ್-ಡೀಸೆಲ್ ಮಾರಾಟ ಆರಂಭಿಸಿ ಕೋಟಿಗಟ್ಟಲೆ ಸಂಪಾದಿಸಿ! ಹೇಗೆ ತಿಳಿದುಕೊಳ್ಳಿ
ಒಂದುವೇಳೆ ನೀವು ಬಿಜಿನೆಸ್ ನಲ್ಲಿ ನಿಮ್ಮ ಅದೃಷ್ಟವನ್ನು ಓರೆಗೆ ಹಚ್ಚುವ ಪ್ರಯತ್ನ ಮಾಡುತ್ತಿದ್ದರೆ ನಿಮಗಾಗಿ ಒಂದು ಸಖತ್ ಬಿಸಿನೆಸ್ ಐಡಿಯಾದ ಮಾಹಿತಿಯನ್ನು ಈ ಲೇಖನದಲ್ಲಿ ತಂದಿದ್ದೇವೆ.
ಈ ಉದ್ಯೋಗದಲ್ಲಿ ನೀವು ಆನ್ಲೈನ್ ಪೆಟ್ರೋಲ್ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ಲಕ್ಷ ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ.
ಈ ಬಿಸಿನೆಸ್ ಗಾಗಿ ನಿಮಗೆ ಭಾರತ ಪೆಟ್ರೋಲಿಯಂನ, ಪೆಟ್ರೋಲಿಯಂ ಪ್ರೋಸೆಸ್ ಇಂಜಿನಿಯರಿಂಗ್ ಸರ್ವಿಸ್ ನಂತಹ ಕಂಪನಿಗಳು ನಿಮಗೆ ಸಹಾಯ ಮಾಡುತ್ತವೆ. ಇದರ ಜೊತೆಗೆ ನಿಮಗೆ ಭಾರತ ಸರಕಾರವೂ ಸಹ ಸಹಾಯ ಮಾಡುತ್ತದೆ. ಇದರ ಹೆಚ್ಚುವರಿ ಮಾಹಿತಿ ನಿಮಗೆ ಪೇಪ್ ಫ್ಯುಲ್ ಡಾಟ್ ಕಾಮ್ ನಲ್ಲಿ ದೊರೆಯುತ್ತದೆ.
ಈ ಕಂಪನಿಯು ಆನ್ಲೈನ್ ಪೆಟ್ರೋಲ್ ಮಾರಾಟ ಮಾಡುತ್ತದೆ. ಇದರ ಸಹಾಯದ ಮುಖಾಂತರ ನೀವು ಡೋರ್ ಟು ಡೋರ್ ಪೆಟ್ರೋಲ್ ಮಾರಾಟ ಮಾಡಬಹುದಾಗಿದೆ. ಇಲ್ಲಿ ನೀವು ಮೆಸೇಜ್ ಮಾಡಿ ಪೆಟ್ರೋಲನ್ನು ಆನ್ಲೈನ್ ಖರೀದಿಸಬಹುದಾಗಿದೆ. ದೆಹಲಿ ಸಮೀಪದ ನೋಯಿಡಾದಲ್ಲಿಯ ಮೂವರು ಯುವಕರು ಕೂಡಿ ಈ ಸ್ಟಾರ್ಟಪ್ ಪ್ರಾರಂಭಿಸಿದ್ದಾರೆ. ಈ ಉದ್ಯೋಗವನ್ನು ಪ್ರಾರಂಭಿಸಿದ ನಂತರ ಕಂಪನಿಯ ಟರ್ನ್ ಓವರ್ ಕೆಲವೇ ದಿನಗಳಲ್ಲಿ ನೂರು ಕೋಟಿ ರೂಪಾಯಿಗಳಷ್ಟು ಆಗಿದೆ. ಕಂಪನಿಯ ಸಂಸ್ಥಾಪಕ ಮತ್ತು ಓನರ್ ಟಿಕೇಂದ್ರ ಅವರ ಪ್ರಕಾರ, ಈ ಕಂಪನಿಯನ್ನು ಪ್ರಾರಂಭಿಸುವ ಮುನ್ನ ಬಹಳವೇ ಅಭ್ಯಾಸ ಮಾಡಬೇಕಾಯಿತು. ಜೊತೆಗೆ ಮನೆಮನೆಗೆ ಹೋಗಿ ಜನರನ್ನು ಸಂಪರ್ಕಿಸಬೇಕಾಯಿತು.

ಸದ್ಯ 50 ಪಟ್ಟಣಗಳಲ್ಲಿ ಈ ಉದ್ಯೋಗವು ಪಸರಿಸಿದೆ. ಕೆಲವು ಜನ ಸಾಮಾನ್ಯರ ಪ್ರಕಾರ ಪೆಟ್ರೋಲಿನ ಆನ್ಲೈನ್ ಮಾರಾಟ ತುಂಬಾ ಅಪಾಯಕರವಾಗಿದೆ ಎಂದು ಮಾತುಗಳು ಬಂದವು. ಹೀಗಾಗಿ 2016 ರವರೆಗೆ ಇದಕ್ಕೆ ಸರಕಾರ ಮಾನ್ಯತೆ ಕೊಟ್ಟಿರಲಿಲ್ಲ. ಆದರೆ ಈಗ ಸರಕಾರ ಮಾನ್ಯತೆ ನೀಡಿದೆ.
ಇವರು ಅನೇಕ ಪೆಟ್ರೋಲಿಯಂ ಕಂಪನಿಗಳಿಗೆ ತಮ್ಮ ಪ್ರಸ್ತಾವವನ್ನು ಕಳುಹಿಸಿದ್ದರು. ಅದರ ಜೊತೆಗೆ ಇದೇ ಪ್ರಸ್ತಾವನೆಯ ಐಡಿಯಾವನ್ನು ಪ್ರಧಾನಮಂತ್ರಿ ಮೋದಿಯವರಿಗೂ ಕಳುಹಿಸಿದ್ದರು. ಈಗ ಅವರಿಂದಲೂ ಇದಕ್ಕೆ ಉತ್ತರ ಬಂದಿದೆ. ಹಾಗೆ ಈ ಪ್ರಸ್ತಾಪಕ್ಕೆ ಇಂಡಿಯನ್ ಆಯಿಲ್ ಸಹ ಹಸಿರು ನಿಶಾನೆಯನ್ನು ತೋರಿಸಿದೆ. ತದನಂತರ ಈ ಉದ್ಯೋಗದ ಬಗ್ಗೆ ಬ್ಲೂಪ್ರಿಂಟ್ ತಯಾರಿಸಿ ಇಂಡಿಯನ್ ಆಯಿಲ್ ನವರಿಗೆ ಒಪ್ಪಿಸಿದೆವು.
ಸಹ ಸಂಸ್ಥಾಪಕ ಸಂದೀಪ್ ಅವರ ಪ್ರಕಾರ ಈ ಉದ್ಯೋಗವನ್ನು ಪ್ರಾರಂಭಿಸಲು ಇವರಿಗೆ ಮೊದಲು 12 ಲಕ್ಷ ರೂಪಾಯಿಗಳ ಖರ್ಚು ತಗುಲಿತು. 12 ಲಕ್ಷ ರೂಪಾಯಿಗಳಲ್ಲಿ ಉದ್ಯೋಗಕ್ಕೆ ಬೇಕಾಗುವ ಡಿಸ್ಪೆನ್ಸಿಂಗ್ ಮಷೀನ್, ಬ್ರೌಸರ್ ಡೆವಲಪ್ಮೆಂಟ್, ಜೆರಿ ಕ್ಯಾನ್ ಹೀಗೆ ಅನೇಕ ಸಾಹಿತ್ಯಗಳನ್ನು ಖರೀದಿಸಿದರು. ಒಂದು ಆಪ್ ಮುಖಾಂತರ ಗ್ರಾಹಕರ ಆರ್ಡರ್ ಗಳನ್ನು ತೆಗೆದುಕೊಳ್ಳಲಾಗುತ್ತದೆ. ಅನಂತರ ಒಂದರಿಂದ ಎರಡು ಗಂಟೆಯಲ್ಲಿ ಪೆಟ್ರೋಲ್ ಡಿಲೇವರಿ ಮಾಡಲಾಗುತ್ತದೆ. ಮಹತ್ವದ ವಿಷಯವೆಂದರೆ ಇಲ್ಲಿ ಪೆಟ್ರೋಲ್ ಕಳ್ಳತನವಾಗುವದರಿಂದಲೂ ಬಚಾವ್ ಆಗುತ್ತದೆ.