ಕುಡಿದ ಮತ್ತಿನಲ್ಲೇಕೆ ಜನ ಇಂಗ್ಲೀಷ್ ಮಾತನಾಡುತ್ತಾರೆ? ಸಂಶೋಧನೆಯಲ್ಲಿ ತಿಳಿದು ಬಂತು ರೋಚಕ ಸತ್ಯ!
ಸಾಮಾನ್ಯವಾಗಿ ಯಾರಾದರೂ ಮ ದ್ಯ ಪಾನ ಮಾಡಿದಾಗ, ಕುಡಿದಿದ್ದು ಹೆಚ್ಚಾದಾಗ ಅವರು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ಹಾಗೂ ಮನಬಂದಂತೆ ವರ್ತಿಸುವುದು, ಮೈಮೇಲೆ ಹಿಡಿತವಿಲ್ಲದೇ ವರ್ತಿಸುವುದನ್ನು ನಾವೆಲ್ಲರೂ ಕೂಡಾ ಗಮನಿಸಿಯೇ ಇರುತ್ತೇವೆ. ಇನ್ನೂ ಕೆಲವರಿಗಂತೂ ಮತ್ತು ಹೆಚ್ಚಿದಾಗ, ಕಿಕ್ ಏರಿದಾಗ ಅವರ ಬಾಯಿಂದ ಆಂಗ್ಲ ಭಾಷೆ ಕೂಡಾ ಬರಲಾರಂಭಿಸುತ್ತದೆ. ಅದೇ ಸಾಮಾನ್ಯ ಪರಿಸ್ಥಿತಿಯಲ್ಲಿ ಇರುವಾಗ ಇವರು ಇಂಗ್ಲೀಷ್ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಕುಡಿದ ಮತ್ತಿನಲ್ಲಿ ಇಂಗ್ಲೀಷ್ ಮಾತನಾಡಲು ಹಿಂಜರಿಯುವುದೂ ಇಲ್ಲ ಹಾಗೂ ನಾಚಿಕೆ ಅಂತೂ ಮೊದಲೇ ಪಡುವುದಿಲ್ಲ. ಅವರ ಬಾಯಿಂದ ಸುಲಲಿತವಾಗಿ ಆಂಗ್ಲ ಪದಪುಂಜಗಳು ಹರಿದು ಬರಲು ಆರಂಭಿಸಿಬಿಡುತ್ತದೆ. ಶರಾಬಿನ ನಶೆ ಏರಿದಾಗ ಒಬ್ಬ ಸಾಮಾನ್ಯ ವ್ಯಕ್ತಿಗಿಂತ ಹೆಚ್ಚಾಗಿಯೇ ಬಾಯಲ್ಲಿ ಆಂಗ್ಲ ಪದಗಳನ್ನು ಹರಿಸಲು ಆರಂಭಿಸಿ ಬಿಡುತ್ತಾರೆ.
ಒಂದು ಸಂಶೋಧನೆಯ ಪ್ರಕಾರ ವ್ಯಕ್ತಿಯು ಕುಡಿದಾಗ ನಶೆಯಲ್ಲಿದ್ದಾಗ ಅನ್ಯ ಭಾಷೆಗಳನ್ನು ಬಹಳ ಬೇಗ ಕಲಿತು ಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾನೆ ಎನ್ನಲಾಗಿದೆ. ಇದು ವಿಚಿತ್ರ ಎನಿಸಿದರೂ ಕೂಡಾ ಕುಡಿತದ ನಶೆ ಏರಿದವರು ಅನ್ಯ ಭಾಷೆ ಮಾತನಾಡುವುದು ನೋಡಿದಾಗ ಹೌದು ಎನಿಸಬಹುದು. ಯೂನಿವರ್ಸಿಟಿ ಆಫ್ ಲಿವರ್ ಪೂಲ್ ಬ್ರಿಟನ್ ನ ಒಂದು ಕಾಲೇಜು ಹಾಗೂ ನೆದರ್ಲೆಂಡ್ಸ್ ನ ಯೂನಿವರ್ಸಿಟಿ ಆಫ್ ಮ್ಯಾಸ್ಟ್ರಿಚ್ ನ ಸಂಶೋಧಕರು ಇಂತಹುದೊಂದು ವಿಷಯವಾಗಿ ಸಂಶೋಧನೆಯನ್ನು ನಡೆಸಿದ್ದರು. ಸಂಶೋಧನೆಯಲ್ಲಿ ತಿಳಿದು ಬಂದ ವಿಷಯ ಏನೆಂದರೆ ಆಲ್ಕೋಹಾಲ್ ಸೇರಿರುವ ಪಾನೀಯ ಸೇವನೆಯಿಂದ ಲಿಂಗ್ವಿಸ್ಟಿಕ್ ಪ್ರೊಫೆಷಿಯನ್ಸಿ ಅಥವಾ ಭಾಷಾ ದಕ್ಷತೆಯ ಪ್ರಮಾಣ ಹೆಚ್ಚುತ್ತದೆ.
ಸಂಶೋಧನೆಯ ಸಮಯದಲ್ಲಿ ಡಚ್ ಭಾಷೆಯನ್ನು ಕಲಿಯುತ್ತಿದ್ದ ಐವತ್ತು ಜನ ಜರ್ಮನ್ ಪ್ರಜೆಗಳ ಸಮೂಹವನ್ನು ಆರಿಸಿಕೊಳ್ಳಲಾಯಿತು. ಇವರಲ್ಲಿ ಕೆಲವರಿಗೆ ಅವರು ಕುಡಿಯುವ ಪಾನೀಯದಲ್ಲಿ ಆಲ್ಕೋಹಾಲನ್ನು ಮಿಶ್ರಣ ಮಾಡಿ ನೀಡಲಾಗಿತ್ತು. ಕೆಲವರಿಗೆ ಆಲ್ಕೋಹಾಲ್ ಮಿಶ್ರಣ ಇಲ್ಲದಂತಹ ಪಾನೀಯವನ್ನು ಸೇವಿಸಲು ನೀಡಲಾಗಿತ್ತು. ಇದಾದ ನಂತರ ತಿಳಿದು ಬಂದ ವಿಷಯವೇನೆಂದರೆ ಆಲ್ಕೋಹಾಲ್ ಮಿಶ್ರಿತ ಪಾನೀಯ ಸೇವನೆ ಮಾಡಿದವರಿಗೆ ನೆದರ್ಲೆಂಡ್ಸ್ ನ ಜನರೊಂದಿಗೆ ಡಚ್ ಭಾಷೆಯಲ್ಲಿ ಮಾತನಾಡುವಂತೆ ತಿಳಿಸಲಾಯಿತು. ಆಗಲೇ ನಡೆದಿತ್ತು ಊಹೆಗೂ ಮೀರಿದ ಘಟನೆ ಎಂದರೆ ತಪ್ಪಾಗಲಾರದು.
ಹೌದು, ಯಾವಾಗ ಸಂಶೋಧನೆ ಭಾಗವಾಗಿ ಆಲ್ಕೋಹಾಲ್ ಮಿಶ್ರಿತ ಪಾನೀಯ ಸೇವನೆಯನ್ನು ಮಾಡಿದವರಿಗೆ ಡಚ್ ಭಾಷೆಯನ್ನು ಬಳಸುವಂತೆ ಹೇಳಲಾಯಿತೋ ಅವರು ಆ ಭಾಷೆಯ ಪದಗಳನ್ನು ಬಹಳ ಸ್ಪಷ್ಟವಾಗಿ ಉಚ್ಛಾರಣೆ ಮಾಡುವ ಮೂಲಕ ಆಶ್ಚರ್ಯವನ್ನುಂಟು ಮಾಡಿದ್ದರು. ಅಲ್ಲದೇ ಹೊಸ ಭಾಷೆಯನ್ನು ಪ್ರಯೋಗ ಮಾಡುವ ವೇಳೆಯಲ್ಲಿ ಅವರು ಯಾವುದೇ ರೀತಿಯಲ್ಲೂ ಕೂಡಾ ಹಿಂಜರಿಯಲಿಲ್ಲ ಹಾಗೂ ಪದಗಳ ಉಚ್ಛಾರಣೆಯಲ್ಲಿ ಕೂಡಾ ಯಾವುದೇ ರೀತಿಯ ತಪ್ಪುಗಳನ್ನು ಮಾಡದೇ ಭಾಷೆಯನ್ನು ಬಳಸಿಕೊಂಡರು ಎನ್ನಲಾಗಿದೆ. ಇದು ನಿಜಕ್ಕೂ ಒಂದು ಅಚ್ಚರಿಯ ವಿಷಯವಾಗಿತ್ತು.
ಅವರು ಕುಡಿದ ಅಮಲಿನಲ್ಲಿ ಡಚ್ ಭಾಷೆಯನ್ನು ಬಹಳ ಸರಾಗವಾಗಿ ಬಳಸಿಕೊಳ್ಳುತ್ತಿದ್ದರು, ಪದಗಳ ಉಚ್ಛಾರಣೆಯನ್ನು ಕೂಡಾ ಮಾಡುತ್ತಿದ್ದರು. ಇವರಿಗೆ ಅವರ ದೇಹದ ತೂಕದ ಆಧಾರದಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರವೇ ಆಲ್ಕೋಹಾಲನ್ನು ನೀಡಲಾಗಿತ್ತು ಎನ್ನಲಾಗಿದೆ. ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ನೀಡಿದ ಪರಿಣಾಮ ಸಂಶೋಧನೆಯಲ್ಲಿ ಇಂತಹುದೊಂದು ಫಲಿತಾಂಶವು ಹೊರ ಬಂದಿತ್ತು. ಸಾಮಾನ್ಯವಾಗಿ ಜನರಿಗೆ ಅರಿಯದ ಅನ್ಯ ಭಾಷೆಯನ್ನು ಮಾತನಾಡುವುದು ಕಷ್ಟವಾಗಿರುತ್ತದೆ. ಇನ್ನು ಕುಡಿತವು ಮನುಷ್ಯನ ನೆನಪಿನ ಶಕ್ತಿ ಮಾತ್ರವೇ ಅಲ್ಲದೇ ಏಕಾಗ್ರತೆಯ ಮೇಲೆ ಕೂಡಾ ದು ಷ್ಪರಿಣಾಮ ಬೀರುತ್ತದೆ ಎನ್ನುವುದು ಕೂಡಾ ವಾಸ್ತವ.