ಪಾತ್ರೆ ತೊಳೆಯುವ ಸಾಬೂನು ಕೊಳ್ಳಲು ಹೋದವನು ಗೆದ್ದಿದ್ದು 7.5 ಕೋಟಿ ರೂಪಾಯಿಗಳು: ಆತನ ಅದೃಷ್ಟ ಬದಲಾಗಿದ್ದು ಹೇಗೆ?

ಅನೇಕ ಸಂದರ್ಭಗಳಲ್ಲಿ ನಾವು ಯಾರೋ ಒಬ್ಬ ವ್ಯಕ್ತಿಯು ಇದ್ದಕ್ಕಿದ್ದಂತೆ ಕೋಟ್ಯಾಧಿಪತಿ ಆಗಿಬಿಟ್ಟ ಎನ್ನುವ ಮಾತನ್ನು ಕೇಳಿರುತ್ತೇವೆ, ಸುದ್ದಿಗಳಲ್ಲಿ ನೋಡಿ ತಿಳಿದುಕೊಂಡಿರುತ್ತೇವೆ. ಆದರೆ ಈ ರೀತಿ ರಾತ್ರಿ ಕಳೆದು ಹಗಲಾಗುವುದರೊಳಗೆ ಕೋಟ್ಯಾಧೀಶರಾಗಲು ಅಂತಹವರ ಅದೃಷ್ಟವು ಚೆನ್ನಾಗಿರಬೇಕು. ಪ್ರತಿ ವರ್ಷ ಭಾರತದಿಂದ ಯುಎಇ ಹಾಗೂ ಯುಎಇಯಿಂದ ಅಮೇರಿಕಾ ವರೆಗೆ ಬಹಳಷ್ಟು ಜನರ ಅದೃಷ್ಟವನ್ನು ಲಾಟರಿ ಟಿಕೆಟ್ ಗಳು ಬದಲಾಯಿಸುತ್ತಿವೆ. ಪ್ರತಿ ವರ್ಷವೂ ಲಾಟರಿ ಟಿಕೆಟ್ ನಲ್ಲಿ ಜಾಕ್ ಪಾಟ್ ಗೆಲ್ಲುವ ಮೂಲಕ ವಿಶ್ವದ ಅನೇಕ ಜನರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಭಾರತದಲ್ಲಿಯೂ ಪ್ರತಿದಿನ ದೇಶದ ಎಲ್ಲೋ ಒಂದು ಕಡೆ, ಯಾರೋ ಒಬ್ಬ ವ್ಯಕ್ತಿಯು ಲಾಟರಿ ಮೂಲಕ ಕೋಟ್ಯಾಧೀಶ ಆದ ಎನ್ನುವ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ.

ಈಗ ಇದೇ ಸರಣಿಯಲ್ಲಿ ಅಮೆರಿಕಾದ ವ್ಯಕ್ತಿಯೊಬ್ಬರು ಲಾಟರಿಯಲ್ಲಿ ಬರೋಬ್ಬರಿ 7.5 ಕೋಟಿ ರೂಪಾಯಿಗಳನ್ನು ಗೆದ್ದುಕೊಂಡಿದ್ದಾರೆ. ಹಾಗಾದರೆ ಆ ವ್ಯಕ್ತಿಯ ಕಥೆ ಏನು ಎಂಬುದನ್ನು ತಿಳಿಯೋಣ ಬನ್ನಿ. ವರ್ಜಿನಿಯಾ ಲಾಟರಿ ವರದಿಯ ಪ್ರಕಾರ ಬ್ರಯಾನ್ ಜೈಸ್ಪರ್ ಅವರಿಗೆ ತಮ್ಮ ವ್ಯವಹಾರಕ್ಕಾಗಿ ಪಾತ್ರೆ ತೊಳೆಯುವ ಸಾಬೂನುಗಳ ಅಗತ್ಯವಿತ್ತು. ಬ್ರಯಾನ್ ಫ್ರೆಡರಿಕ್ ಬರ್ಗ್ ನ ಜಫರ್ಸನ್ ಡೇವಿಸ್ ಎನ್ನುವ ಹೆದ್ದಾರಿಯಲ್ಲಿ ಕೆಲಸವನ್ನು ಮಾಡುತ್ತಿದ್ದರು. ಪಾತ್ರೆ ತೊಳೆಯುವ ಸಾಬೂನುಗಳ ಅಗತ್ಯ ಇದ್ದ ಕಾರಣ ಅವರು ಹತ್ತಿರದಲ್ಲೇ ಇದ್ದಂತಹ ರಾಯಲ್ ಫಾರ್ಮ್ಸ್ ಎನ್ನುವ ಅಂಗಡಿಗೆ ಹೋಗಿ ಸಾಬೂನುಗಳನ್ನು ಖರೀದಿಸುವಾಗ ಜೊತೆಗೆ ಲಾಟರಿ ಟಿಕೆಟ್ ಗಳನ್ನು ಕೂಡಾ ಖರೀದಿ ಮಾಡಿದ್ದಾರೆ‌.

ಲಾಟರಿ ಖರೀದಿ ಮಾಡಿದ ಸ್ವಲ್ಪ ಹೊತ್ತಿನ ನಂತರ ಅವರು ಲಾಟರಿ ಟಿಕೆಟ್ ಅನ್ನು ಸ್ಕ್ರಾಚ್ ಮಾಡಿದ್ದಾರೆ. ಆ ವೇಳೆ ಅದರ ಮೇಲೆ ಕಂಡುಬಂದ ಸಂಖ್ಯೆಗಳನ್ನು ನೋಡಿ ಅವರು ಶಾ ಕ್ ಆಗಿದ್ದು ಮಾತ್ರವೇ ಅಲ್ಲದೆ, ಅದು ಸಾಮಾನ್ಯ ಲಾಟರಿ ಟಿಕೆಟ್ ಅಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ಅರ್ಥಮಾಡಿಕೊಂಡಂತೆ ಅದು ಅವರ ಅದೃಷ್ಟ ಬದಲಿಸುವ ಲಾಟರಿ ಟಿಕೆಟ್ ಆಗಿತ್ತು. ಕೇವಲ ಶೂನ್ಯ ಗಳನ್ನು ಸಂಖ್ಯೆಯಾಗಿ ಹೊಂದಿದ್ದ ಲಾಟರಿ ಟಿಕೆಟ್ ನಿಂದಾಗಿ ಬ್ರಯಾನ್ ಹತ್ತು ಲಕ್ಷ ಡಾಲರ್ ಅಂದರೆ ಸುಮಾರು 7.5 ಕೋಟಿ ರೂಪಾಯಿಗಳ ಬಹುಮಾನ ಪಡೆದುಕೊಂಡಿದ್ದಾರೆ. ತನ್ನ ಜೀವನದಲ್ಲಿ ಎಷ್ಟು ದೊಡ್ಡ ಮೊತ್ತದ ಬಹುಮಾನವನ್ನು ಹಿಂದೆ ಎಂದೂ ಕೂಡ ಪಡೆದಿರಲಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ವರ್ಜಿನಿಯ ಲಾಟರಿಯಲ್ಲಿ $30 ಗಳಿಂದ ಹಿಡಿದು 10 ಲಕ್ಷ ಡಾಲರ್ ಗಳವರೆಗೆ ಬಹುಮಾನವನ್ನು ಪಡೆಯುವ ಅವಕಾಶವಿರುತ್ತದೆ. ಬ್ರಯಾನ್ ಗೆ ಗೆದ್ದ ಹತ್ತು ಲಕ್ಷ ಡಾಲರ್ ಗಳನ್ನು ಪಡೆಯಲು ಎರಡು ಆಯ್ಕೆಗಳಿದ್ದವು. ಮೊದಲನೆಯದು ಮುಂದಿನ 30 ವರ್ಷಗಳ ಕಾಲ ಸ್ವಲ್ಪ ಸ್ವಲ್ಪ ಹಣವನ್ನು ಪಡೆದುಕೊಳ್ಳುವುದು. ಎರಡನೆಯ ಆಯ್ಕೆ ಒಂದೇ ಸಮಯದಲ್ಲಿ 640,205 ಡಾಲರ್ ಗಳ ಹಣವನ್ನು ಸ್ವೀಕರಿಸುವುದು. ಈ ಹಣವು ತೆರಿಗೆ ವಿಧಿಸುವುದಕ್ಕೂ ಮುನ್ನ ನೀಡುವ ಹಣ ಎನ್ನಲಾಗಿತ್ತು. ಆದ್ದರಿಂದಲೇ ಬ್ರಯಾನ್ ಎರಡನೇ ಆಯ್ಕೆಯನ್ನು ತಮ್ಮದಾಗಿಸಿಕೊಂಡು ಹಣವನ್ನು ಪಡೆದುಕೊಂಡಿದ್ದಾರೆ.

ಈ ಲಾಟರಿಯಲ್ಲಿ ಒಂದು ಮಿಲಿಯನ್ ಡಾಲರ್ ಗಳನ್ನು ಪಡೆಯುವ ಅವಕಾಶ 1,060,800 ರಲ್ಲಿ ಒಂದು ಮಾತ್ರ ಇರುತ್ತದೆ ಎನ್ನಲಾಗಿದ್ದು, ಆ ಒಂದು ಅವಕಾಶ ಬ್ರಯಾನ್ ಪಾಲಿಗೆ ದಕ್ಕಿದೆ. ಬ್ರಯಾನ್ ಲಾಟರಿಯಲ್ಲಿ ತಾನು ಗೆದ್ದಿರುವ ಹಣವನ್ನು ತನ್ನ ಸಣ್ಣ ವ್ಯವಹಾರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ಇದಕ್ಕೂ ಮೊದಲು ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ಓರ್ವ ದಂಪತಿಗೆ ಎರಡು ಬಾರಿ ಲಾಟರಿಯಲ್ಲಿ ಜಾಕ್ ಪಾಟ್ ಹೊಡೆದಿತ್ತು ಎನ್ನಲಾಗಿದೆ. ಆದರೆ ಮೊದಲನೆಯ ಲಾಟರಿ ಬಹುಮಾನ ಬಂದ ಹತ್ತು ವರ್ಷಗಳ ನಂತರ ಎರಡನೇ ಬಾರಿ ಅವರಿಗೆ ಜಾಕ್ ಪಾಟ್ ಹೊಡೆದಿತ್ತು. ಮೊದಲ ಬಾರಿ ಅವರು ಲಾಟರಿಯಲ್ಲಿ 15 ಲಕ್ಷ ರೂಪಾಯಿ ಗೆದ್ದರೆ ಹತ್ತು ವರ್ಷಗಳ ನಂತರ 75 ಲಕ್ಷ ರೂಪಾಯಿಗಳನ್ನು ಗೆದ್ದುಕೊಂಡಿದ್ದರು. ಈ ದಂಪತಿ ಪ್ರತಿ ದಿನ ಲಾಟರಿ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ.