ಇದಪ್ಪ ಲಾಟರಿ ಅಂದ್ರೆ! ಬಂಜರು ಜಮೀನು ಅಗೆಯುವಾಗ ರೈತನಿಗೆ ಸಿಕ್ಕಿತು 5 ಕಿಲೋ ಚಿನ್ನ! ಬೆಲೆ ಕೋಟಿಗಳಲ್ಲಿ
ಭಗವಂತ ಮನಸ್ಸು ಮಾಡಿದರೆ ಶ್ರೀಮಂತ ಬಡವನಾಗಲು ಮತ್ತು ಬಡವ ಶ್ರೀಮಂತನಾಗಲು ಸಮಯ ಬೇಕಾಗುವುದಿಲ್ಲ. ಇಂಥದ್ದೇ ಒಂದು ಘಟನೆ ತೆಲಂಗಾಣದ ರೈತನ ಜೊತೆಗೆ ನಡೆದಿದೆ. ಇಲ್ಲಿಯ ರೈತನೊಬ್ಬ ಒಂದು ತಿಂಗಳ ಹಿಂದೆ ಬಂಜರು ಭೂಮಿಯನ್ನು ಖರೀದಿಸಿದ್ದನು. ಖರೀದಿಸಿದ ಭೂಮಿಯನ್ನು ಅಗೆಯುವಾಗ ಅದೇ ಭೂಮಿಯಲ್ಲಿ ರೈತನಿಗೆ 5 ಕಿಲೋ ಚಿನ್ನ ದೊರಕಿದೆ.
ಪ್ರಸ್ತುತ ವರದಿ ತೆಲಂಗಾಣದ ಜನಗಾವ್ ಜಿಲ್ಲೆಯಿಂದ ವರದಿಯಾಗಿದೆ. ಈ ರೈತನ ಹೆಸರು ನರಸಿಂಗ ಇದ್ದು 1 ತಿಂಗಳ ಹಿಂದೆಯೇ 11 ಎಕರೆ ಬಂಜರು ಭೂಮಿಯನ್ನು ಖರೀದಿಸಿದ್ದನು. ನಂತರ ಈ ಭೂಮಿಯ ಲೆವೆಲ್ ಮಾಡುವ ಕೆಲಸ ಕೈಗೆತ್ತಿಕೊಂಡನು. ಇದೇ ಕೆಲಸ ಮಾಡುವ ಸಂದರ್ಭದಲ್ಲಿ ಭೂಮಿಯಲ್ಲಿ ಹುಗಿದಿಟ್ಟ ಸುಮಾರು 5 ಕಿಲೋ ಚಿನ್ನದ ಖಜಾನೆ ದೊರಕಿದೆ. ಬಂಗಾರದ ಸ್ವರೂಪದಲ್ಲಿ ದೊರಕಿದ ಈ ಆಭರಣಗಳ ಬೆಲೆ ಕೋಟಿ ರೂಪಾಯಿಗಳಲ್ಲಿ ಇದೆ.
ಈ ರೈತನಿಗೆ ದೊರಕಿದ ಚಿನ್ನದ ಆಭರಣಗಳ ಮಾರ್ಕೆಟ್ ಮೌಲ್ಯ ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಇದೆ ಎಂದು ಅಂದಾಜಿಸಲಾಗಿದೆ. ಈ ಎಲ್ಲ ಆಭರಣಗಳು ತುಂಬಾ ಆಂಟಿಕ್ ಇರುವುದರಿಂದ ಇವುಗಳ ಮೌಲ್ಯ ಖಚಿತಪಡಿಸುವುದು ತುಂಬಾ ಕಷ್ಟದ ಕೆಲಸವಾಗಿದೆ.
ಈ ನರಸಿಂಗ ರೈತನಿಗೆ ಭೂಮಿಯಲ್ಲಿ ಚಿನ್ನ ದೊರೆತ ಸುದ್ದಿಯು ಊರಲ್ಲಿ ಗಾಳಿಯಂತೆ ಪಸರಿಸಿದ್ದೇ ತಡ ಊರಿನ ಜನರು ಈ ಆಭರಣಗಳನ್ನು ನೋಡಲು ಜಮಾಯಿಸಿದರು. ಸುದ್ದಿಯನ್ನು ಕೇಳಿದ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಹಾಜರಾಗಿ ಆಭರಣಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಇತಿಹಾಸಕಾರರ ಸಂಶೋಧನೆಯ ಪ್ರಕಾರಗಳು ಈ ಆಭರಣಗಳು ಕಾಕತೀಯ ಸಾಮ್ರಾಜ್ಯ ಕಾಲದಲ್ಲಿಯದು ಎಂದು ಗುರುತಿಸಲಾಗಿದೆ. ರೈತನಿಗೆ ದೊರೆತ ಈ ಖಜಾನೆಯು ಒಂದು ವೇಳೆ ಐತಿಹಾಸಿಕವಾಗಿದ್ದರೆ, ನರಸಿಂಗನಿಗೆ ಇದರಲ್ಲಿಯ ಸ್ವಲ್ಪ ಭಾಗ ಬಹುಮಾನದ ಸ್ವರೂಪದಲ್ಲಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.