ಕಾಡಿನ ರಾಜನಿಗೆ ಭಯ ಹುಟ್ಟಿಸಿದ ಕಾಡು ಹಂದಿ: ವೈರಲ್ ವೀಡಿಯೋ ನೋಡಿ ಭಯ ಯಾರನ್ನೂ ಬಿಟ್ಟಿಲ್ಲ ಎಂದ ನೆಟ್ಟಿಗರು

ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಕೂಡಾ ಒಂದಲ್ಲಾ ಒಂದು ಕ್ಷಣದಲ್ಲಿ ಭಯವಾಗಿರುತ್ತದೆ. ಯಾವುದೋ ಒಂದು ವಿಷಯಕ್ಕೆ ಖಂಡಿತವಾಗಿ ಭಯ ಪಟ್ಟಿರುತ್ತಾರೆ. ಯಾರೊಬ್ಬರೂ ಎಂದೂ ಭಯವೇ ಪಟ್ಟಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ.‌ ಈ ಮಾತು ಕಾಡಿನ ರಾಜನಾದ ಎನಿಸಿರುವ ಸಿಂಹಕ್ಕೂ ಕೂಡ ಅನ್ವಯಿಸುತ್ತದೆ ಸಿಂಹವು ಕಾಡಿನ ಬೇರೆ ಎಲ್ಲ ಪ್ರಾಣಿಗಳಿಗಿಂತಲೂ ಹೆಚ್ಚು ಬಲಿಷ್ಠವಾಗಿರಬಹುದು. ಆದರೂ ಕೂಡ ಸಿಂಹವು ಭಯ ಪಡುತ್ತದೆ ಎನ್ನುವುದು ವಾಸ್ತವ. ನಾವು ಈ ವಿಷಯವನ್ನು ಏಕೆ ಹೇಳುತ್ತಿದ್ದೇವೆ ಎನ್ನುವುದಾದರೆ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಗಳಲ್ಲಿ ಒಂದು ವಿಡಿಯೋ ಭರ್ಜರಿಯಾಗಿ ವೈರಲ್ ಆಗಿದ್ದು ಈ ವಿಡಿಯೋ ನೋಡಿದಾಗ ನೀವು ಕೂಡ ಹೌದು ಖಂಡಿತಾ ಭಯ ಎಲ್ಲರಿಗೂ ಕೂಡಾ ಆಗುತ್ತದೆ ಎಂದು ಒಪ್ಪಿಕೊಳ್ಳುವಿರಿ.

ವಿಡಿಯೋದಲ್ಲಿ ಸಿಂಹವು ಬಹಳ ಆರಾಮವಾಗಿ ನಿದ್ರಿಸುವ ವೇಳೆಯಲ್ಲಿ ನಡೆಯುವ ಒಂದು ಘಟನೆಯ ಪರಿಣಾಮ ಸಿಂಹವು ಭಯದಿಂದ ಎದ್ದು ಕೂರುತ್ತದೆ. ಅಲ್ಲದೇ ಆ ಭಯದ ಕಾರಣದಿಂದ ಅದೆ ನಿದ್ದೆಯು ಹಾರಿ ಹೋಗುತ್ತದೆ. ಈ ವೀಡಿಯೊವನ್ನು ನೋಡಿದ ನಂತರ ಸೋಶಿಯಲ್ ಮೀಡಿಯಾ ಗಳಲ್ಲಿ ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದಾರೆ, ಮತ್ತೆ ಕೆಲವರು ಕಾಡಿನಲ್ಲಿ ಬದುಕಬೇಕಾದರೆ ಕಣ್ಣು, ಮೂಗು ಮತ್ತು ಕಿವಿ ಎಲ್ಲವೂ ಕೂಡ ಸದಾ ತೆರೆದಿರಬೇಕು ಹಾಗೂ ಎಚ್ಚರವಾಗಿರಬೇಕು ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಗಮನಿಸಿದಾಗ ಕಾಡಿನಲ್ಲಿ ಒಂದು ಮರದ ನೆರಳಿನಲ್ಲಿ ಮೂರು ಸಿಂಹಗಳು ಬಹಳ ಆರಾಮವಾಗಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು.

ಅವುಗಳಿಗೆ ತಮ್ಮ ಶಕ್ತಿಯ ಮೇಲೆ ಎಷ್ಟು ನಂಬಿಕೆ ಇದೆ ಎಂದರೆ ತಮ್ಮನ್ನು ಬೇರೆ ಯಾವುದೇ ಪ್ರಾಣಿಗಳು ಅಥವಾ ಮನುಷ್ಯ ತೊಂದರೆ ಕೊಡುವುದಿಲ್ಲ ಎಂದು ಆರಾಮವಾಗಿ ಮಲಗಿರುವಂತೆ ಕಂಡುಬರುತ್ತದೆ. ಹಾಗೆ ಸಿಂಹಗಳು ಹಾಯಾಗಿ ವಿಶ್ರಾಂತಿ ಪಡೆಯುವಾಗ ಕಾಡಿನಲ್ಲೊಂದು ಹಂದಿಯು ಬಹಳ ವೇಗವಾಗಿ ಓಡಿ ಬರುತ್ತಾ, ಈ ಸಿಂಹಗಳು ಮಲಗಿರುವ ಜಾಗಕ್ಕೆ ಬರುತ್ತದೆ. ಆದರೆ ಬಂದಷ್ಟೇ ವೇಗವಾಗಿ ಸಿಂಹಗಳನ್ನು ನೋಡಿ ಅವು ಅಲ್ಲಿಂದ ಓಡಿ ಹೋಗುತ್ತದೆ ಹಾಗೂ ಅದು ಬಂದ ವೇಗಕ್ಕೆ ನಿದ್ರಿಸುತ್ತಿದ್ದ ಸಿಂಹಗಳು ಏಕಾ ಏಕೀ ಭಯದಿಂದ ನಿದ್ರೆಯಿಂದ ಹೊರ ಬರುತ್ತವೆ. ಅಲ್ಲಿ ನಡೆದಿದ್ದೇನು? ತಾವು ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ತಿಳಿಯದೇ ಕಕ್ಕಾಬಿಕ್ಕಿಯಾಗುತ್ತವೆ.

ಈ ಆಶ್ಚರ್ಯಕರ ವೀಡಿಯೋ ವನ್ನು ಭಾರತೀಯ ಅರಣ್ಯಾಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅದರ ಕ್ಯಾಪ್ಷನ್ ನಲ್ಲಿ ಯಾರ ನೆನಪಾಯಿತು? ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ಈಗಾಗಲೇ 21 ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಸುಮಾರು ಎರಡು ಸಾವಿರಕ್ಕಿಂತ ಅಧಿಕ ಜನರು ವೀಡಿಯೋ ವನ್ನು ಇಷ್ಟ ಪಟ್ಟಿದ್ದು, ನೂರಾರು ಜನರು ವೀಡಿಯೋ ರೀಟ್ವೀಟ್ ಮಾಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಗಳಲ್ಲಿ ಚಿತ್ರ ವಿಚಿತ್ರ ಎನ್ನಿಸುವಂತಹ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ಈ ಘಟನೆಯ ವಿಮರ್ಶೆ ಮಾಡಿದ್ದಾರೆ.

ವಿಡಿಯೋ ನೋಡಿ

ಟ್ವಿಟರ್ ಬಳಕೆದಾರರೊಬ್ಬರು, ಒಂದು ಕಡೆ ನಿದ್ದೆಯನ್ನು ಹಾಳು ಮಾಡಿ, ಮತ್ತೆ ಅಲ್ಲಿಂದ ಓಡಿ ಹೋಗಿದ್ದು ಸರಿಯಲ್ಲ ಎಂದು ಹಂದಿಗೆ ಬುದ್ಧಿ ಹೇಳಿದ್ದಾರೆ. ಮತ್ತೊಬ್ಬರು ಹಂದಿಯ ಅದೃಷ್ಟ ಚೆನ್ನಾಗಿತ್ತು ಅದಕ್ಕೆ ಪ್ರಾಣ ಉಳಿಯಿತು ಎಂದಿದ್ದಾರೆ. ಬಹುಶಃ ಹಂದಿ ಓಡಿ ಹೋದ ಮೇಲೆ ತಮ್ಮ ಸ್ಥಿತಿ ನೋಡಿ ಸಿಂಹಗಳು ತಾವೇ ನಗುತ್ತಿರುವಂತೆ ಕಂಡು ಬಂದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.‌ ಹಂದಿಯು ಓಡಿ ಬಂದ ವೇಗ ನೋಡಿದರೆ ಬಹುಶಃ ಅದು ಈ ವೇಳೆಗೆ ಚಂದ್ರನ ಮೇಲೆ ತಲುಪಿರಬಹುದು ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ಸಿಂಹಗಳಿಗೆ ಕನ್ಪ್ಯೂಸ್ ಮಾಡಿದ ಹಂದಿ ಎಂದು ಒಂದಿಬ್ಬರು ಹೇಳಿದ್ದಾರೆ.