ಇರ್ಫಾನ್ ಪತ್ನಿಯ ಹೇಳಿಕೆ – “ನನಗೆ ಅವರ ಮೇಲೆ ಸಿಟ್ಟಿದೆ, ಅವರು ನನ್ನನ್ನು ಹಾಳು ಮಾಡಿದ್ದಾರೆ!”
ಮುಂಬೈ – ನಟ ಇರ್ಫಾನ್ ಖಾನ್ ಅವರ ವಿದಾಯ ಜಗತ್ತಿಗೆ ಆಘಾತ ನೀಡಿದೆ. 54 ವರ್ಷದ ಇರ್ಫಾನ್ ದೀರ್ಘಕಾಲದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಇರ್ಫಾನ್ ನಿಧನದ ನಂತರ, ಅವರ ಕುಟುಂಬದ ಮೇಲೆ ದುಃಖದ ಹೊಳೆಯೇ ಹರಿದಂತಾಗಿದೆ. ಅದೇ ಸಮಯದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ಜನರು ಇರ್ಫಾನ್ ಖಾನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೆಯೇ ಅವರ ಕುಟುಂಬಕ್ಕೆ ಧೈರ್ಯವನ್ನು ನೀಡುವಂತೆ ದೇವರನ್ನು ಪ್ರಾರ್ಥಿಸುತ್ತಿರುವುದು ಕಂಡುಬಂತು. ಜನರ ಈ ಬೆಂಬಲ ಅವರ ಕುಟುಂಬವನ್ನು ಮತ್ತಷ್ಟು ಬಲಪಡಿಸಿದೆ. ಇತ್ತೀಚೆಗೆ, ಇರ್ಫಾನ್ ಖಾನ್ ಅವರ ಪತ್ನಿ ಸುತಪಾ, ಮಗ ಬಾಬಿಲ್ ಮತ್ತು ಅಯಾನ್ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯಲ್ಲಿ, ಅವರು ಅಭಿಮಾನಿಗಳ ಬೆಂಬಲದೊಂದಿಗೆ ಇರ್ಫಾನ್ ಖಾನ್ ಗೆ ಸಂಬಂಧಿಸಿದ ಅನೇಕ ನೆನಪುಗಳನ್ನು ಮರಳಿ ತಂದಿದ್ದಾರೆ.
ಇದನ್ನು ಈ ಹೇಳಿಕೆಯಲ್ಲಿ ಬರೆಯಲಾಗಿದೆ- ‘ಇಡೀ ಜಗತ್ತು ಇರ್ಫಾನ್ ಖಾನ ಅವರ ನಿಧನ ಇದನ್ನು ವೈಯಕ್ತಿಕ ನಷ್ಟವೆಂದು ನೋಡುತ್ತಿರುವಾಗ ಇದು ಬರೀ ನಮ್ಮ ಕುಟುಂಬಕ್ಕಷ್ಟೇ ನಷ್ಟವಾಗಿದೆ ಎಂದು ಹೇಗೆ ಹೇಳಲಿ? ಇರಫಾನ್ ಅವರ ಅಗಲಿಕೆ ಕೇವಲ ನಂಗಷ್ಟೇ ದುಃಖ ಆಗುತ್ತಿಲ್ಲ ನನ್ನ ಜೊತೆಗೆ ಇಡೀಜಗತ್ತೇ ದುಃಖ ಪಡುತ್ತಿರುವಾಗ ಅವರ ಮೇಲೆ ಹೆಮ್ಮೆ ಪಡುತ್ತೇನೆ, ಅವರು ನನನ್ನು ಒಬ್ಬಂಟಿಯಾಗಿ ಬಿಟ್ಟಿಹೋಗಿದ್ದು ಅಲ್ಲದೆ ನನಗೆ ಅವರು ನನ್ನನ್ನು ಹಿಂದೆ ಬಿಟ್ಟು ತಾವು ಮುಂದೆ ಹೋಗಿದ್ದಾರೆ ಎಂದುಸಹ ತಿಳಿಸಿದ್ದಾರೆ. ಮುಂದೆ ಅವರು ಹೇಳಿದ್ದು ಏನೆಂದರೆ, ನನ್ನ ಪತಿಯ ಕುರಿತು ಇನ್ನಷ್ಟು ಮಾಹಿತಿ ಜನರಿಗೆ ಇಲ್ಲ ಅದನ್ನು ಜನರ ಎದುರಿಗೆ ತರಲು ಪ್ರಯತ್ನ ಮಾಡುತ್ತೇನೆ, ಅವರುನಡೆದ ಬಂದ ದಾರಿಯಲ್ಲಿಯೇ ನನ್ನ ಇಬ್ಬರು ಮಕ್ಕಳನ್ನು ನಡೆಸುವೆ, ಅವರ ಪ್ರತಿಯೊಂದು ಕಟ್ಟುನಿಟ್ಟಿನ ಕೆಲಸ, ಇತರರಿಗೆ ಮಾಡುವ ಸಹಾಯ ನಾನು ಹಾಗೆ ಮುಂದು ವರೆಸುವೆ.

ಇರಫಾನ್ ಖಾನ್ ಅವರ ಪತ್ನಿಯು ಲೇಖನದಲ್ಲಿ,
‘ಅವರಿಗೆ ನನ್ನ ಏಕೈಕ ದೂರು ಎಂದರೆ, ಅವರು ನನ್ನನ್ನು ಜೀವಮಾನವಿಡೀ ಹಾಳು ಮಾಡಿದರು. ಏಕೆಂದರೆ ಅವರು ಪ್ರತಿಯೊಂದು ವಸ್ತುವಿನಲ್ಲಿ ಬೇರೆ ಪ್ರಕಾರದ ದೃಷ್ಟಿಯಿಂದ ವೀಕ್ಷಣೆಮಾಡುತ್ತಿದ್ದರು. ಎಂತಹ ಕೆಟ್ಟ ಪರಸ್ಥಿತಿಯಲ್ಲಿ ಹಾಗೂ ಅವ್ಯವಸ್ಥೆಯ ಪರಸ್ಥಿತಿಯಲ್ಲಿಯೂ ಸಹ ಅವರು ಎದೆಗುಂದದೆ ಧೈರ್ಯದಿಂದ ಮುನ್ನುಗ್ಗುತ್ತಿದ್ದರು ಆದ ಕಾರಣದಿಂದಾಗಿ ನಾನು ಸಹ ಅವರ ರಾಗ ತಾಳ ದಂತೆಯೇ ಕುಣಿಯುತ್ತಿದ್ದೇ ಆದರೆ ಇನ್ನು ಮುಂದೆ ನಾನು ಒಬ್ಬಳೇ ನಿರ್ಣಯ ತಗೆದುಕೊಳ್ಳುವದು ತುಂಬಾ ಕಷ್ಟವಾಗುವದು ಆದುದರಿಂದ ಅವರು ನನ್ನ ಜೀವಮಾನ ವಿಡಿ ಹಹಾಳು ಮಾಡಿದ್ದಾರೆ”. ಮುಂದೆ ಲೇಖನದಲ್ಲಿ, ” ಡಾಕ್ಟರ್ ಗಳ ರಿಪೋರ್ಟ್ ಒಂದು ಸಿನಿಮಾ ಸ್ಕ್ರಿಪ್ಟ್ ತರ ಇದ್ದಿತ್ತು, ಅದಕ್ಕೆ ನಾನು ಸರಿ ಮಾಡಲು ಬಯಸಿದ್ದೆ ಆದ್ದರಿಂದ ಅದರಲ್ಲಿಯೇ ಯಾವುದೇ ಪ್ರಕಾರದ ಸ್ಕ್ರಿಪ್ಟ್ ಡಿಲೀಟ್ ಅಥವಾ ಮಿಸ್ ಮಾಡಲಿಲ್ಲ.
ಈ ಸ್ಟೇಟ್ ಮೆಂಟ್ ನಲ್ಲಿ ಅವರನ್ನು ಉಪಚಾರ ಮಾಡುತ್ತಿದ್ದ ಡಾಕ್ಟರ್ಗಳ ಹೆಸರನ್ನು ತಗೆದುಕೊಳ್ಳುತ್ತ, ” ಈ ಒಂದು ಪ್ರವಾಸ ಬಹಳಷ್ಟು ಸುಂದರವಾದಹಾಗೂ ದುಃಖತುಂಬಿದ ಪ್ರವಾಸ ವಾಗಿದೆ ಅದನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಾಗುವದಿಲ್ಲ. ನಾವಿಬ್ಬರೂ ಜೊತೆಗೂಡಿಕಳೆದ 35 ವರ್ಷಗಳಿಗಿಂತ ಕೊನೆಯ ಎರಡು ವರೆ ವರ್ಷಗಳ ಪ್ರವಾಸ ತುಂಬಾ ದುಃಖದಾಯಕ ವಾಗಿತ್ತು. ಈ ಪ್ರವಾಸದಲ್ಲಿ ನಾಯಕ ಇರಫಾನ್ ಇದ್ದರು ಸಹಿತ ನಾನು ಅವರ ನಾಯಕಿಯಾಗಿ ನಟನೆ ಮಾಡುತ್ತಿದೆ. ನಮ್ಮಿಬ್ಬರ ಮದುವೆ ಇದೊಂದು ದೈವ ಸಂಕಲ್ಪದ ಬೆಸುಗೆಯಾಗಿತ್ತು. ಇಂದು ನಮ್ಮ ಚಿಕ್ಕ ಕುಟುಂಬವಾಗಿದೆ ಅದರಲ್ಲಿ ಇಬ್ಬರು ಮಕ್ಕಳು ಹಾಗೂ ನಾನು ಅವರಿಬ್ಬರನ್ನು ನಾನು ಇರಫಾನ್ ನಡೆದು ಬಂದ ದಾರಿಯಲ್ಲಿಯೇ ನಮ್ಮ ಪ್ರವಾಸ ಮುಂದೆ ವರೆಸುವೆ. ಆದರೆ ಜೀವನ ಇದು ಸಿನಿಮಾ ತರ ಅಲ್ಲ 5 ನಿಮಿಷಗಳ ಕಾಲದಲ್ಲಿ ಬದಲಾವಣೆ ಮಾಡುವದಕ್ಕೆ ಆದರೆ ನನಗೆ ಸಂಪೂರ್ಣ ಭರವಸೆ ಇದೆ ನನ್ನ ಮಕ್ಕಳ ಮೇಲೆ ಅವರು ಸಹ ಅವರ ತಂದೆಯ ಹೆಸರು ಮುಂದು ವರೆಸುವರು. ಅವರ ಫ್ಯಾನ್ಸ್ ಗಳು ಸಹ ನನ್ನ ದೊಡ್ಡ ಕುಟುಂಬ ವಾಗಿದೆ ಅವರು ಸದಾ ನಮ್ಮೊಂದಿಗೆ ಇರುವರುಎಂಬುದು ನನ್ನಾಸೆ ಯಾಗಿದೆ.
ಈ ರೀತಿಯಾಗಿ ಇರಫಾನ್ಖಾನ್ ಅವರ ಪತ್ನಿ ತಮ್ಮ ಸ್ಟೇಟ್ ಮೆಂಟ್ ನಲ್ಲಿ ಬರೆದಿದ್ದಾರೆ.