ಬಿಡುಗಡೆ ಆದ ದಿನವೇ ಮಾರಾಟವಾಯ್ತು ಎಲ್ಲಾ ಎಲೆಕ್ಟ್ರಿಕ್ ಕಾರುಗಳು: 1600 ಕಿಮೀ ರೇಂಜ್, ಜಾರ್ಜಿಂಗ್ ನ ಅವಶ್ಯಕತೆ ಇಲ್ಲ.

ದಕ್ಷಿಣ ಕ್ಯಾಲಿಫೋರ್ನಿಯಾ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ ಅಪ್ ಅಪ್ಟೇರಾ ಮೋಟಾರ್ಸ್ ಒಂದು ಅದ್ಭುತವಾದ ಬ್ಯಾಟರಿ ಚಾಲಿತ ತ್ರಿ ಚಕ್ರ ವಾಹನ ವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರಿನ ವೈಶಿಷ್ಟ್ಯಗಳು ಸಾಕಷ್ಟು ಜನಪ್ರಿಯವಾಗುತ್ತಿದ್ದು, ಇದ‌ನ್ನು ಹಗಲಿನ ವೇಳೆಯಲ್ಲಿ ಬಿಸಿಲು ಇದ್ದರೆ ಚಾರ್ಜ್ ಮಾಡುವ ಅಗತ್ಯವೇ ಇಲ್ಲ ಎನ್ನಲಾಗಿದ್ದು, ಬಹಳ ವಿಶೇಷವಾದ ಸುದ್ದಿಯೇನೆಂದರೆ ಈ ಕಾರನ್ನು ಬಿಡುಗಡೆ ಮಾಡಿದ 24 ಗಂಟೆಗಳಲ್ಲಿ ಎಲ್ಲಾ ಕಾರುಗಳು ಕೂಡಾ ಮಾರಾಟವಾಗಿದೆ. ಅಪ್ಟೇರಾ ಮೋಟಾರ್ಸ್ ಈ ಹೊಸ ಮೂರು ಚಕ್ರದ ಯುವಿ ಕಾರ್ ಪ್ರತಿದಿನ 40 ಮೈಲಿಗಳ ಉಚಿತ ಡ್ರೈವಿಂಗ್ ಅನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದು, ಕಂಪನಿಯು  ದೈನಂದಿನ ಬಳಕೆಯಲ್ಲಿ ಇಂಧನದ ಅಗತ್ಯವಿಲ್ಲದೆ ಚಲಾಯಿಸ ಬಲ್ಲ ವಿಶ್ವದ ಮೊಟ್ಟ ಮೊದಲ ಕಾರು ಇದು ಹೇಳಿದೆ.

ಅಪ್ಟೇರಾ ಕಂಪನಿಯ ಸಹಸಂಸ್ಥಾಪಕ ಸ್ಟೀವ್ ಫ್ಯಾಂಬ್ರೋ ಮಾತನಾಡುತ್ತಾ 40 ಮೈಲಿ ನಿಮಗೆ ಕಡಿಮೆ ಅನ್ನಿಸಬಹುದು. ಆದರೆ ಇದು ನೀವು ನಿಮ್ಮ ಕಾರನ್ನು ಪಾರ್ಕಿಂಗ್ ಮಾಡುವುದಕ್ಕೆ ಸಮಾನವಾಗಿದ್ದು. ಇದು ರಾತ್ರಿಯ ವೇಳೆಯಲ್ಲಿ ಜಾದು ಎನ್ನುವಂತೆ ಎರಡು ಗ್ಯಾಲನ್ ಅನಿಲವನ್ನು  ತುಂಬಿಸುತ್ತದೆ ಎಂದು ಹೇಳಿದ್ದಾರೆ. ಇವಿ ಯ ನಿರ್ಮಾಣ ಮಾಡಿರುವ ಕಂಪನಿಯು ಈ ಕಾರಿನ ಹುಡ್ ಮತ್ತು ಹ್ಯಾಚ್ ನಲ್ಲಿ ಹೆಚ್ಚುವರಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಕಾರಿನ ರೇಂಜ್ ಅನ್ನು (35 ಮೈಲುಗಳವರೆಗೆ) ವಿಸ್ತರಿಸುವ ಆಯ್ಕೆ ಕೂಡ ಇದೆ ಎಂದು ಹೇಳಿದ್ದಾರೆ. ಫ್ಯಾಂಬ್ರೋ ಅವರು ಮಾತನಾಡುತ್ತಾ ಈ ಕಾರಿನ ಮತ್ತೊಂದು ವಿಶೇಷವನ್ನು ತಿಳಿಸಿದ್ದಾರೆ.

ಕಾರನ್ನು ಬಳಕೆದಾರರು ತಾವು ಕೆಲಸಕ್ಕೆ ಹೋಗುವ ಕಡೆ ಅಥವಾ ಇನ್ನೆಲ್ಲಾದರೂ ನಿಲ್ಲಿಸಬಹುದು. ನೀವು ಕಾರನ್ನು ನಿಲ್ಲಿಸಿ ಹೋಗುವಾಗ ಅದರಲ್ಲಿ ಎಷ್ಟು ಶಕ್ತಿಯನ್ನು ಉಳಿಸಿ ಹೋಗಿರುತ್ತೀರೋ, ನೀವು ಮರಳಿ ಬರುವ ವೇಳೆಗೆ ಅದಕ್ಕಿಂತ ಹೆಚ್ಚಿನ ಶಕ್ತಿಯನ್ನು ಅದರ ಟ್ಯಾಂಕ್ ನಲ್ಲಿ ಪಡೆಯುತ್ತೀರಿ. ಇದನ್ನು ಪ್ರತಿದಿನ ಚಲಾಯಿಸಲು ಚಾರ್ಜ್ ಮಾಡಲು ಒಂದು ರೂಪಾಯಿಯ ಅಗತ್ಯ ಕೂಡ ಇಲ್ಲ. ಏಕೆಂದರೆ ಕಾರು ತನ್ನಷ್ಟಕ್ಕೆ ತಾನೇ ಚಾರ್ಜ್ ಆಗುತ್ತದೆ. ಇಂತಹ ಒಂದು ಸ್ವಾತಂತ್ರ್ಯವನ್ನು ಬಹಳಷ್ಟು ಜನ ಕಾರು ಚಾಲಕರು ಇಷ್ಟಪಟ್ಟೇ ಪಡುತ್ತಾರೆ ಎಂದಿದ್ದಾರೆ. ಈ ಕಾರಿಗೆ ಅಶ್ವ ಶಕ್ತಿಯನ್ನು ನೀಡಲು ಕೇವಲ ಸೋಲಾರ್ ಚಾರ್ಜಿಂಗ್ ಸಾಕಾಗುವುದಿಲ್ಲ, ಆದ್ದರಿಂದಲೇ ಎಲೆಕ್ಟ್ರಿಕ್ ಮೋಟರ್ ಅನ್ನು ಪ್ರಾಥಮಿಕವಾಗಿ ಅಂದರೆ 100 ಕಿಲೋವ್ಯಾಟ್ ನ ಮೋಟಾರ್ ಅನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಲ್ಪಟ್ಟಿದೆ.

ಇದು 1,000 ಮೈಲಿ (1609 ಕಿಮೀ) ವ್ಯಾಪ್ತಿಯನ್ನು ತಲುಪುತ್ತದೆ ಎಂದು ಹೇಳಲಾಗಿದ್ದು, ಇದು ಎಸಿ ರೇಂಜ್ ಅನ್ಯ ಯುವಿ ಗಳಿಗಿಂತ ಉತ್ತಮವಾಗಿರುವ ವಿಶ್ವದ ಮೊದಲ ಇವಿ ಆಗಲು ಸಿದ್ಧವಾಗಿದೆ.  ಈ ಕಾರಿನಲ್ಲಿನ ವೈಜ್ಞಾನಿಕ ವಿನ್ಯಾಸದಿಂದಾಗಿ ಪ್ರತಿ ಮೈಲಿಗೆ 100 ವ್ಯಾಟ್ ಗಂಟೆಗಳ ಶಕ್ತಿಯನ್ನು ಮಾತ್ರ ಬಳಸುತ್ತದೆ ಎಂದು ಅಪ್ಟೇರಾ ಕಂಪನಿ ಹೇಳುತ್ತದೆ. ಇದರಲ್ಲಿ ಸಾಂಪ್ರದಾಯಿಕವಾಗಿ 100 V ಔಟ್ಲೆಟ್ ಇದ್ದು ಇದು ಮ್ಯಾನ್ಯುಯಲ್ ಚಾರ್ಜಿಂಗ್ ಗೆ ಉಪಯೋಗ ಆಗುತ್ತದೆ.

ವಿಡಿಯೋ ನೋಡಿ

ಲಿಕ್ವಿಡ್ ಗೊಲ್ಡ್ ಎಲೆಕ್ಟ್ರಿಕ್ ಮೋಟಾರ್ ಈ ಮೂಲಕ ಕೇವಲ 3.5 ಸೆಕೆಂಡುಗಳಲ್ಲಿ, ಈ ಕಾರು ಸೊನ್ನೆಯಿಂದ 60 ಮೈಲಿ ವೇಗವನ್ನು ಪ್ರತಿ ಗಂಟೆಗೆ ಸಾಧಿಸಬಹುದು ಎನ್ನಲಾಗಿದ್ದು, ಇದರ ಟಾಪ್ ಸ್ಪೀಡ್ ಅಥವಾ ಗರಿಷ್ಠ ವೇಗದ ಮಿತಿ ಪ್ರತಿ ಗಂಟೆಗೆ 110 ಮೈಲಿ ಎನ್ನಲಾಗಿದೆ. ಆಪ್ಟೆರಾ ಇವಿ ಫ್ರಂಟ್-ವೀಲ್ ಮತ್ತು ಆಲ್-ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಿದೆ. ಫ್ರಂಟ್ ವೀಲ್- ಡ್ರೈವ್ ಇವಿ ಗರಿಷ್ಠ 134 ಎಚ್‌ಪಿ ಶಕ್ತಿಯನ್ನು ಉತ್ಪಾದಿಸಬಲ್ಲದು, ಆಲ್-ವೀಲ್-ಡ್ರೈವ್ ಆವೃತ್ತಿಯು 201 ಎಚ್‌ಪಿ ಉತ್ಪಾದಿಸಬಲ್ಲದು.
ಈ ಕಾರು ಕಪ್ಪು-ಬಿಳಿ ಹಾಗೂ ಸಿಲ್ವರ್ ಈ ಮೂರು ಬಣ್ಣಗಳಲ್ಲಿ ಲಭ್ಯವಿದೆ ಇದರ ಆರಂಭಿಕ ಬೆಲೆಯು 25900 $ ಎನ್ನಲಾಗಿದೆ ಅಂದರೆ ಭಾರತೀಯ ಮಾರುಕಟ್ಟೆಯ ಮೌಲ್ಯ ಸುಮಾರು 19.10 ಲಕ್ಷ ರೂಪಾಯಿಗಳು ಎನ್ನಲಾಗಿದೆ.