ದೇಶದ 5 ಅಗ್ಗದ ಬೆಲೆಯ 100 ಸಿಸಿ ಬೈಕ್ ಗಳು: 49 ಸಾವಿರದಿಂದ ಆರಂಭ,ಮೈಲೇಜ್ ಕೂಡಾ ಭರ್ಜರಿಯಾಗಿದೆ!
ಏಪ್ರಿಲ್ ಒಂದರಿಂದ ದೇಶದಲ್ಲಿ ಬಹುತೇಕ ಎಲ್ಲಾ ದ್ವಿಚಕ್ರ ವಾಹನಗಳ ಉತ್ಪಾದಕ ಕಂಪನಿಗಳು ತಮ್ಮ ಬೈಕುಗಳ ಬೆಲೆಯನ್ನು ಏರಿಕೆ ಮಾಡಿದೆ. ಈ ಏರಿಕೆಯಿಂದಾಗಿ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡುವವರೆಗೆ ಸ್ವಲ್ಪ ಕಷ್ಟ ಎನಿಸತೊಡಗಿದೆ. ಆದರೂ ಇಂದಿಗೂ ಮಾರುಕೊ ಕೆಲವು ಬೈಕುಗಳು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಲಭ್ಯವಿದೆ. ಅದು ಮಾತ್ರವೇ ಅಲ್ಲದೆ ಇವು 100 ಸಿಸಿ ಸ್ಟ್ರಾಂಗ್ ಇಂಜಿನ್ ಗಳನ್ನು ಹಿಂದಿರುವ ಬೈಕುಗಳು ಎನ್ನುವುದು ವಿಶೇಷವಾಗಿದೆ. ಹೀರೋಸ್ ಸ್ಪ್ಲೆಂಡರ್ + ನಿಂದ ಬಜಾಜ್ ಪ್ಲಾಟಿನಾದವರೆಗಿನ ದೇಶದಲ್ಲಿ ಪ್ರಸ್ತುತ ಲಭ್ಯವಿರುವ 5 ಅಗ್ಗದ 100 ಸಿಸಿ ಬೈಕ್ಗಳ ಬಗ್ಗೆ ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ.
1 ) ಬಜಾಜ್ ಸಿಟಿ 100 (ಬೆಲೆ ₹ 49,152):

ಇದು ದೇಶದ ಅತಿ ಕಡಿಮೆ ಬೆಲೆಯ 100 ಸಿಸಿ ಮೋಟಾರ್ ಸೈಕಲ್ ಆಗಿದೆ. ಈ ಬೈಕ್ ನ ಬೆಲೆ ಎಕ್ಸ್ ಶೋರೂಮ್ ದೆಹಲಿಯ ಪ್ರಕಾರ 49,152 ರೂಪಾಯಿಗಳಿಂದ ಆರಂಭವಾಗುತ್ತದೆ. ಈ ಬೈಕ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಹಸಿರು, ಕಪ್ಪು ಹಾಗೂ ಕೆಂಪು ಬಣ್ಣಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳುವ ಅವಕಾಶವಿದೆ. ಬೈಕಿನಲ್ಲಿ 102 ಸಿಸಿ ಎಂಜಿನ್ ಅಳವಡಿಸಲಾಗಿದೆ. ಇದು 7.9 ಪಿಎಸ್ ಶಕ್ತಿಯನ್ನು ಹಾಗೂ 8.3 4 ಎಂ ಎಂ ಟಾರ್ಕನ್ನು ಉತ್ಪಾದನೆ ಮಾಡುತ್ತದೆ. ಬೈಕ್ 10.5 ಲೆಟರ್ ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.
2 ) ಹೀರೋ ಎಚ್ಎಫ್ ಡಿಲಕ್ಸ್ (ಬೆಲೆ ₹ 50,700) :
ಈ ಬೈಕು ಕಡಿಮೆ ಬೆಲೆಯ ಬೈಕುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದರ ಮೂಲ ಮಾದರಿ ಕಿಕ್ ಸ್ಟಾರ್ಟ್, ಡ್ರಮ್ ಬ್ರೇಕ್, ಸ್ಪೋಕ್ ವೀಲ್. ಇದರ ಬೆಲೆ 50,700 ರೂಪಾಯಿಗಳಿಂದ ಆರಂಭವಾಗುತ್ತದೆ. ಬೈಕು 97.2 ಸಿಸಿ ಎಂಜಿನ್ ಹೊಂದಿದ್ದು, ಇದು 8.02 ಪಿಎಸ್ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 5 ಬಣ್ಣಗಳಲ್ಲಿ ಲಭ್ಯವಿದ್ದು ಇದರಲ್ಲಿ i3s ತಂತ್ರಜ್ಞಾನವನ್ನು ಬಳಸಲಾಗಿದ್ದು ಇದು ಮೈಲೇಜ್ ಅನ್ನು 9% ಹೆಚ್ಚಿಸುತ್ತದೆ.
3) ಟಿವಿಎಸ್ ಸ್ಪೋರ್ಟ್ (ಬೆಲೆ ₹ 56,130):
ಟಿವಿಎಸ್ ಸ್ಫೋರ್ಟ್ಸ್ 110 ಸಿಸಿ ಯಲ್ಲಿ ಬಂದರೂ ಕೂಡಾ ಅದರ ಬೆಲೆ ಕಡಿಮೆ ಇರುವುದರಿಂದ ಅದನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಬೈಕ್ನ ಕಿಕ್ ಸ್ಟಾರ್ಟ್, ಅಲಾಯ್ ವೀಲ್ ಮಾದರಿಯ ಬೆಲೆ ₹ 56,130 (ಎಕ್ಸ್ ಶೋ ರೂಂ, ದೆಹಲಿ) ರೂಗಳಿಂದ ಆರಂಭವಾಗುತ್ತದೆ. ಕಂಪನಿಯ ಪ್ರಕಾರ ಇದು 110.12 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇದು 109.7 ಸಿಸಿ ಎಂಜಿನ್ ಅನ್ನು ಹೊಂದಿದ್ದು 8.29 ಪಿಎಸ್ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 8.2 ಎಂಎಂ ಟಾರ್ಕನ್ನು ಉತ್ಪಾದಿಸುತ್ತದೆ.
4 ) ಬಜಾಜ್ ಪ್ಲಾಟಿನಾ 100 (ಬೆಲೆ ₹ 59,859) :

ಕಡಿಮೆ ಬೆಲೆಯ ಬೈಕುಗಳ ಪಟ್ಟಿಯಲ್ಲಿ ಇದು ಬಜಾಜ್ ಕಂಪನಿಯ ಎರಡನೇ ಬೈಕ್ ಆಗಿದೆ. ಈ ಬೈಕಿನ ಬೆಲೆಯು 59,859 ರೂಪಾಯಿಗಳಿಂದ ಆರಂಭವಾಗುತ್ತದೆ. ಡಿಸ್ಕ್ ಬ್ರೇಕ್ ಗಳೊಂದಿಗೆ ಬರುವ 100 ಸಿಸಿ ಬೈಕ್ ಇದಾಗಿದೆ. ಬೈಕ್ನಲ್ಲಿ ಎಲ್ಇಡಿ ಡಿಆರ್ಎಲ್ಗಳಿವೆ. ಇದು 102 ಸಿಸಿ ಎಂಜಿನ್ ಹೊಂದಿದ್ದು, 7.9 ಪಿಎಸ್ ಶಕ್ತಿಯನ್ನು ಮತ್ತು 8.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
5 ) ಹೀರೋ ಸ್ಪ್ಲೆಂಡರ್ + (ಬೆಲೆ ₹ 62,535):

ಇದು ಅಗ್ಗದ ಬೆಲೆಯಲ್ಲಿ ದೊರೆಯುವ 100 ಸಿಸಿ ಬೈಕುಗಳಲ್ಲಿ ಒಂದಾಗಿದೆ. ಬೈಕ್ ನಲ್ಲಿ ಕಿಕ್ ಸ್ಟಾರ್ಟ್ ಡ್ರಮ್ ಬ್ರೇಕ್ ರೂಪಾಂತರದ ಬೆಲೆಯು 62, 535 ರೂಪಾಯಿಗಳಿಂದ ಆರಂಭವಾಗುತ್ತದೆ. ಈ ಬೈಕು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಇದು 97.2 ಸಿಸಿ ಎಂಜಿನ್ ಹೊಂದಿದ್ದು, ಇದು 8.01 ಪಿಎಸ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಎಲೆಕ್ಟ್ರಿಕ್ ಮತ್ತು ಕಿಕ್ ಸ್ಟಾರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಬರುತ್ತದೆ..