ಭಾರತದ ಎಸ್ಯುವಿ ಕಾರುಗಳಿಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ವಿನ್ಯಾಸದ, ವಿಶಿಷ್ಠವಾದ ಹುಂಡೈನ ಆಲ್ಕಜರ್ 7 ಸೀಟರ್ ಎಸ್ಯುವಿ ಕಾರು

ಒಂದು ದೀರ್ಘಕಾಲದ ನಿರೀಕ್ಷೆಯ ನಂತರ ಹುಂಡೈ ತನ್ನ ಏಳು ಆಸನಗಳ ಹುಂಡೈ ಆಲ್ಕಜರ್ ಎಸ್ ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಮೂರು ಸಾಲಿನ ಆಸನಗಳನ್ನು ಉಳ್ಳಂತಹ ವಿಶೇಷವಾದ ಲಕ್ಷುರಿ ಕಾರಾಗಿದ್ದು, ಈ ಎಸ್ಯುವಿ ಕಾರನ್ನು ಹುಂಡೈ ಅತಿ ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ. ಹುಂಡೈ ಕಂಪನಿಯು ಈಗ ನೀಡಿರುವ ಮಾಹಿತಿಯ ಪ್ರಕಾರ ಈ ಹೊಸ ಕಾರಿನಲ್ಲಿ 6 ಮತ್ತು 7 ಆಸನಗಳ ಆಯ್ಕೆಯನ್ನು ನೀಡಲಾಗಿದೆ. 6 ಸೀಟುಗಳ ವರ್ಷನ್ ನಲ್ಲಿ ಎರಡು ಸಾಲಿನ ಆಸನ ಗಳಿದ್ದು ಇದರಲ್ಲಿ ಕ್ಯಾಪ್ಟನ್ ಸೀಟ್ ಇರುತ್ತದೆ. ಏಳು ಆಸನಗಳ ವರ್ಷನ್ ನಲ್ಲಿ ಬೆಂಚ್ ಸೀಟನ್ನು ನೀಡಲಾಗಿದೆ. ಈ ಎಸ್ಯುವಿ ಕಾರನ್ನು ಕ್ರೇಟಾ ಆಧಾರಿತ ಫ್ಲಾಟ್ ಫಾರ್ಮ್ ನಲ್ಲಿ ಸಿದ್ಧಪಡಿಸಲಾಗಿದೆ.

ಹುಂಡೈ ಆಲ್ಕಜರ್ ನ ವಿನ್ಯಾಸ : ಕಂಪನಿಯು ಇದರಲ್ಲಿ 2760 ಎಂ ಎಂ ಉದ್ದದ ವೀಲ್ ಬೇಸನ್ನು ನೀಡಿದೆ. ಇದರಿಂದಾಗಿ ಕ್ಯಾಬಿನ್ ನಲ್ಲಿ ಮೂರನೇ ಸಾಲಿನ ಸೀಟುಗಳನ್ನು ಅಳವಡಿಸಲು ಕೂಡ ಸಾಕಷ್ಟು ಅವಕಾಶ ಅಥವಾ ಸ್ಥಳ ಇರಲು ಸಾಧ್ಯವಾಗಿದೆ. ಕಂಪನಿಯು ಇದರಲ್ಲಿ ಹೊಸ ವಿನ್ಯಾಸದ ಡೈಮಂಡ್ ಪ್ಯಾಟರ್ನ್ ಗ್ರಿಲ್, ನವೀಕರಿಸಿದ ಬಂಪರ್ ಗಳು, ಹೊಸ ವಿನ್ಯಾಸದ ಎಲಾಯ್ ವೀಲ್ ಗಳು, ಹಿಂಭಾಗದಲ್ಲಿ ಕ್ವಾರ್ಟರ್ ಗ್ಲಾಸ್ ಗಳನ್ನು ನೀಡಿದೆ. ಈ ಎಸ್ಯುವಿಯ ಹಿಂಭಾಗದಲ್ಲಿ ಕಂಪನಿಯು ಫಾಕ್ಸ್ ಡ್ಯುಯಲ್ ಎಕ್ಸಾಸ್ಟ್ (ಸೈಲೆನ್ಸರ್) ಮತ್ತು ಹೊಸ ಶೈಲಿಯ ಹೊದಿಕೆ ಟೈಲ್‌ಲೈಟ್‌ಗಳನ್ನು ನೀಡಿದೆ.

ಹುಂದೈ ಆಲ್ಕಜರ್ ನ ಒಳಾಂಗಣ ವಿನ್ಯಾಸ : ಕಂಪನಿಯು ಈ ಕಾರಿನ ಒಳಾಂಗಣ ವಿನ್ಯಾಸವನ್ನು ಬಹಳ ವಿಶೇಷವಾಗಿ ಇರಿಸುವ ಸಲುವಾಗಿ ಆಟೋ ಕನೆಕ್ಟಿವಿಟಿ ಟೆಕ್ನೋಲಜಿ, ಪನೋರಮಿಕ್ ಸನ್ ರೂಫ್, ಐಸೋಫಿಕ್ಸ್ ಸೀಟ್ ಮೌಂಟ್ಸ್, ವಯರ್ಲೆಸ್ ಫೋನ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ನೀಡಿದೆ. ಇದನ್ನು ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಜೊತೆ ಸಂಪರ್ಕಿಸಲಾಗಿದೆ. ಇದರ ಒಳಾಂಗಣಕ್ಕೆ ಡಸೂಲ್ ಟೋನ್ ಕಲರ್ ಸ್ಕೀಮನ್ನು ಅಳವಡಿಸಲಾಗಿದೆ. ಇದರ ಕ್ಯಾಪ್ಟನ್ ಆಸನ್ ವರ್ಷನ್ ನಲ್ಲಿ ವಿಶಿಷ್ಟವಾದ ಸೆಂಟ್ರಲ್ ಆರ್ಮ್‌ರೆಸ್ಟ್, ಕಪ್ ಹೋಲ್ಡರ್ ಮತ್ತು ಹೆಚ್ಚುವರಿ ಸ್ಥಳವನ್ನು ಸಹ ಹೊಂದಿದೆ.

ಹುಂಡೈ ನ ಆಲ್ಕಜರ್ ಇಂಜಿನ್ : ಕಂಪನಿಯು ಈ ಹೊಸ ಎಸ್ಯೂವಿ ಕಾರನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯನ್ನು ಮಾಡಿದೆ. ಡೀಸೆಲ್ ಆವೃತ್ತಿಯು 1.5 ಲೀಟರ್ ಟರ್ಬೊ ಚಾರ್ಜ್ಡ್ ಎಂಜಿನ್ ಅನ್ನು 1.5 ಲೀಟರ್ ಸಾಮರ್ಥ್ಯ, 115 ಎಚ್‌ಪಿ ಮತ್ತು 250 ಶಕ್ತಿಯನ್ನು ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಆವೃತ್ತಿಯು 2.0-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಅದು 159 ಎಚ್‌ಪಿ ಶಕ್ತಿಯನ್ನು ಮತ್ತು 192 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಇಂಜಿನ್ ರೂಪಾಂತರಗಳು 6 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ ಆಟೋಮೆಟಿಕ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಅನ್ನು ಹೊಂದಿದೆ.

ಈ ಕಾರಿನ ಮಾರುಕಟ್ಟೆ ಬೆಲೆಯು ಎಷ್ಟು ಇರಲಿದೆ ಎನ್ನುವ ಕುರಿತಾಗಿ ಇನ್ನೂ ಕೂಡಾ ಕಂಪನಿಯು ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡದ ಕಾರಣ ಅದರ ಬೆಲೆಯ ಮಾಹಿತಿಯು ಇನ್ನೂ ಹೊರ ಬಂದಿಲ್ಲ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೆಟಾ ಕಾರುಗಳಿಗಿಂತ ಈ ಹೊಸ ವಿನ್ಯಾಸದ ಎಸ್ ಯು ವಿ ಕಾರುಗಳ ಬೆಲೆ ದುಬಾರಿಯಾಗಲಿವೆ ಎನ್ನಲಾಗಿದೆ. ಈ ಹೊಸ ಎಸ್ಯುವಿ ಕಾರು ಮಾರುಕಟ್ಟೆಯಲ್ಲಿ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ ನಂತಹ ಎಸ್ಯುವಿ ಕಾರುಗಳಿಗೆ ಕಠಿಣವಾದ ಸ್ಪರ್ಧೆಯನ್ನು ನೀಡಬಹುದು ಎನ್ನಲಾಗುತ್ತಿದೆ.