ಗರ್ಭದಲ್ಲಿ 3 ತಿಂಗಳ ಮಗು ಇರುವಾಗಲೇ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ: ವೈದ್ಯಲೋಕದಲ್ಲೊಂದು ವಿಸ್ಮಯ ಇದು
ಅದಾಗಲೇ ಗರ್ಭಿಣಿಯಾಗಿದ್ದ ಮಹಿಳೆಯು ಮತ್ತೊಮ್ಮೆ ಗರ್ಭ ಧರಿಸಿ, ಆಕೆ ಇಬ್ಬರು ಅವಳಿ ಮಕ್ಕಳಿಗೆ ಏಕ ಕಾಲದಲ್ಲಿ ಜನ್ಮ ನೀಡುತ್ತಾಳೆ ಎಂದರೆ ಇದು ಬಹಳ ಆಶ್ಚರ್ಯ ಮತ್ತು ವಿಚಿತ್ರ ಎನಿಸುತ್ತದೆ. ಇಲ್ಲಿ ಆಶ್ಚರ್ಯಕರ ಸಂಗತಿಯೆಂದರೆ ಇಬ್ಬರ ಮಕ್ಕಳು ಒಟ್ಟಿಗೆ ಜನಿಸಿದರೂ ಆಕೆ ಗರ್ಭ ಧರಿಸಿದ ಅವಧಿ ಮಾತ್ರ ಬೇರೆ ಬೇರೆಯಾಗಿದೆ. ಈ ಘಟನೆ ಸ್ವಲ್ಪ ವಿಚಿತ್ರ ಎನಿಸಿದರೂ ವಾಸ್ತವವಾಗಿದೆ. ಇಲ್ಲಿ ಅದಾಗಲೇ ಗರ್ಭಿಣಿಯಾಗಿದ್ದ ಮಹಿಳೆ ಮತ್ತೊಮ್ಮೆ ಗರ್ಭಿಣಿಯಾಗಿದ್ದು ಮಾತ್ರವಲ್ಲದೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಒಂದು ಪವಾಡ ಕ್ಕಿಂತ ಕಡಿಮೆ ಏನಿಲ್ಲ ಎನ್ನಬಹುದಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಮಹಿಳೆ ಎರಡು ವಿಭಿನ್ನ ಸಮಯಗಳಲ್ಲಿ ಗರ್ಭಿಣಿಯಾದರೂ ಎರಡು ಮಕ್ಕಳು ಒಂದೇ ಸಮಯದಲ್ಲಿ ಜನಿಸಿವೆ. ರೆಬೆಕಾ ರಾಬರ್ಟ್ ಹಾಗೂ ಆಕೆಯ ಪತಿ ರೈಸ್ ವಿವೋ ಕಳೆದ ಕೆಲವು ವರ್ಷಗಳಿಂದಲೂ ಸಂತಾನವನ್ನು ಪಡೆಯುವ ಇಚ್ಛೆಯನ್ನು ಹೊಂದಿದ್ದರು.
ಕಳೆದ ವರ್ಷ ಈ ದಂಪತಿ ಒಂದು ಫರ್ಟಿಲಿಟಿ ಮೆಡಿಕೇಶನ್ ಪಡೆದ ನಂತರ, ವೈದ್ಯರು ಅವರಿಗೆ ಅತಿ ಶೀಘ್ರದಲ್ಲೇ ಮಗುವಿನ ತಂದೆ-ತಾಯಿ ಆಗುವಿರಿ ಎನ್ನುವ ಶುಭ ಸುದ್ದಿಯನ್ನು ನೀಡಿದ್ದರು. ಆದರೆ ಈ ಜೋಡಿಯು ವೈದ್ಯರು ನೀಡಿದ ಶುಭ ಸುದ್ದಿ ಅತಿ ಶೀಘ್ರದಲ್ಲೇ ತಮ್ಮ ಸಂತೋಷವನ್ನು ದುಪ್ಪಟ್ಟು ಮಾಡಲಿದೆ ಎಂದು ಊಹೆಯನ್ನು ಕೂಡಾ ಮಾಡಿರಲಿಲ್ಲ. ವೈದ್ಯರು ರೆಬೆಕಾ ಅವರಿಗೆ ಮೂರನೇ ಅಲ್ಟ್ರಾಸೌಂಡ್ ಟೆಸ್ಟ್ ಮಾಡುವಾಗ ಆಕೆಯ ಗರ್ಭದಲ್ಲಿ ಇನ್ನೊಂದು ಮಗುವಿರುವ ವಿಷಯವನ್ನು ತಿಳಿಸಿದರು. ಇದನ್ನು ಕೇಳಿ ರೆಬೆಕಾ ಬಹಳ ಆಶ್ಚರ್ಯಪಟ್ಟರು. ಏಕೆಂದರೆ ಅದಾಗಲೇ ಆಕೆಯ ಗರ್ಭದಲ್ಲಿ 12 ವಾರಗಳ ಮಗು ಬೆಳೆದಿತ್ತು. ಅಂದರೆ ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು.

ರೆಬೆಕಾ ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ, ಗುಡ್ ಮಾರ್ನಿಂಗ್ ಅಮೇರಿಕಾ.. ವಾಸ್ತವವಾಗಿ ಇದು ಬಹಳ ಆಶ್ಚರ್ಯವನ್ನುಂಟು ಮಾಡುವ ವಿಷಯವಾಗಿತ್ತು, ಏಕೆಂದರೆ ಗರ್ಭದಲ್ಲಿ ಒಂದಲ್ಲ ಎರಡು ಶಿಶುಗಳು ಇವೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಇವುಗಳ ನಡುವೆ ಮೂರು ತಿಂಗಳ ವಯಸ್ಸಿನ ಅಂತರವಿದ್ದು, ಇದು ಹೇಗಾಯಿತು? ಎಂದು ವೈದ್ಯರಿಗೂ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ರೆಬೆಕಾ ಅವರ ಈ ಅಪರೂಪದ ಗರ್ಭಧಾರಣೆಯ ಬಗ್ಗೆ ಸ್ವತಃ ವೈದ್ಯರು ಕೂಡ ಆಶ್ಚರ್ಯ ಪಟ್ಟಿದ್ದಾರೆ.
ರಾಯಲ್ ಯುನೈಟೆಡ್ ಆಸ್ಪತ್ರೆಯ ‘ಪ್ರೆಗ್ನೆನ್ಸಿ ಮತ್ತು ಸ್ತ್ರೀ ಸಂತಾನೋತ್ಪತ್ತಿ’ ತಜ್ಞ ಮತ್ತು ರೆಬೆಕಾ ಅವರ ವೈದ್ಯ ಡೇವಿಡ್ ವಾಕರ್ ಇದೊಂದು ಅಪರೂಪದ ಘಟನೆಯಾಗಿದೆ. ಇಂತಹ ಗರ್ಭಧಾರಣೆ ಇದಕ್ಕಿಂತ ಮುಂಚೆ ಎಷ್ಟು ನಡೆದಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ. ರೆಬೆಕಾ ಅವರ ಗರ್ಭಧಾರಣೆಯನ್ನು ಸೂಪರ್ಪೇಟೇಶನ್ ಎಂದು ಅರ್ಥೈಸಲಾಗಿದೆ. ಇದು ಎಂತಹ ಪರಿಸ್ಥಿತಿ ಎಂದರೆ ಮೊದಲ ಗರ್ಭಧಾರಣೆಯ ಅವಧಿಯಲ್ಲಿ ಎರಡನೇ ಗರ್ಭದ ಬಗ್ಗೆ ತಿಳಿದು ಬಂದಿದ್ದು, ಓವರಿಯಿಂದ ಭ್ರೂಣವು ಗರ್ಭದಲ್ಲಿ ಎರಡು ವಿವಿಧ ಸಮಯಗಳಲ್ಲಿ ಬಿಡುಗಡೆಯಾಗಿದೆ ಎಂದಿದ್ದಾರೆ. ಡಾಕ್ಟರ್ ಡೇವಿಡ್ ವಾಕರ್ ಆರಂಭದಲ್ಲಿ ಗರ್ಭದಲ್ಲಿ ಇನ್ನೊಂದು ಮಗು ಇರುವುದು ಪರೀಕ್ಷೆಯಲ್ಲಿ ತಾನೇಕೆ ಗುರ್ತಿಸಲಿಲ್ಲ ಎಂದು ಆಶ್ಚರ್ಯಪಟ್ಟಿದ್ದರಂತೆ.
ಆದರೆ ಆನಂತರ ಅದು ನನ್ನ ತಪ್ಪಲ್ಲ ಇದೊಂದು ಅಪರೂಪದ ಗರ್ಭದಾರಣೆ ಎಂದು ತಿಳಿದು, ರೆಬೆಕಾ ಜನ್ಮ ನೀಡಿದ ಅವಳಿ ಮಕ್ಕಳ ವಯಸ್ಸಿನಲ್ಲಿ ಮೂರು ತಿಂಗಳ ಅಂತರವಿದ್ದು ಜನ್ಮದ ನಂತರ ಕೂಡ ಒಂದು ಮಗು ದೊಡ್ಡದಾಗಿ, ಇನ್ನೊಂದು ಚಿಕ್ಕದಾಗಿ ಇರುವುದನ್ನು ನೋಡಬಹುದು ಎಂದಿದ್ದಾರೆ. ಇನ್ನು ವೈದ್ಯರು ರೆಬೆಕಾ ಅವರಿಗೆ ಎರಡನೇ ಬಾರಿ ಗರ್ಭ ಧರಿಸಿದ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಚಮತ್ಕಾರ ಎನ್ನುವಂತೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ರೆಬೇಕಾ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಎರಡು ಮಕ್ಕಳು ಆರೋಗ್ಯವಾಗಿದ್ದಾರೆ.

ಗಂಡು ಮಗನಿಗೆ ನೂಹ್ ಎಂದು ಮಗಳಿಗೆ ರೆಸೀಲ್ ಹರಿಸಿದ ಎಂದು ಹೆಸರನ್ನು ಇಟ್ಟಿದ್ದು, ಹೆಣ್ಣು ಮಗು ಚಿಕ್ಕದು ಎನ್ನಲಾಗಿದೆ. ಈ ಮಗುವನ್ನು ಹುಟ್ಟಿದ ನಂತರ 95 ದಿನಗಳವರೆಗೆ NICU ನಲ್ಲಿ ನೀಡಲಾಗಿತ್ತು ಎನ್ನಲಾಗಿದೆ. ರೆಬೆಕಾ ತನ್ನ ಮಕ್ಕಳನ್ನು ಸೂಪರ್ ಟ್ವಿನ್ಸ್ ಎಂದು ಕರೆಯುತ್ತಾರೆ. ಇವರಿಬ್ಬರು ನನ್ನ ಅದೃಷ್ಟದ ಮಕ್ಕಳು ಎನ್ನುವ ರೆಬೆಕಾ ಅವರ ಈ ಅಪರೂಪದ ಕಥೆಯು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.