ನಿಷ್ಠೆ ಇದ್ದರೆ ಹೀಗಿರಬೇಕು! ವಿಷಕಾರಿ ಕೋಬ್ರಾದೊಂದಿಗೆ ಹೋರಾಡಿ ರೈತನ ಪ್ರಾಣ ಉಳಿಸಿದ ಜ್ಯುಲಿ!

ಮಹಾರಾಷ್ಟ್ರದ ನಾಸಿಕ ಜಿಲ್ಲೆಯಿಂದ ಒಂದು ದುರದೃಷ್ಟಕರ ಘಟನೆ ವರದಿಯಾಗಿದೆ. ಇಲ್ಲಿ ರೈತ ಸಾಕಿದ ಜೂಲಿ ಹೆಸರಿನ ನಾಯಿಯು ತನ್ನ ಮಾಲೀಕನ ಮಕ್ಕಳನ್ನು ಕೋಬ್ರಾದಿಂದ ಉಳಿಸಲು ಹೋರಾಟ ಮಾಡಿ ತನ್ನ ಪ್ರಾಣವನ್ನು ತೆತ್ತಿದೆ.

ನಾಸಿಕ್ ಜಿಲ್ಲೆಯ ಬಾಲಗಾನ ತಾಲೂಕಿನಲ್ಲಿರುವ ಅಂಬಾಸನ ಊರಿನ ನಿವಾಸಿಯಾದ ಸಚಿನ್ ಮೋಕಾಸರೆ ಹೆಸರಿನ ರೈತನು ಸಾಕಿದ ಜೂಲಿ ಹೆಸರಿನ ನಾಯಿಯು ತನ್ನ ಮಾಲಿಕನ ಜೀವ ಉಳಿಸಲು ಕೋಬ್ರಾ ಜೊತೆಗೆ ಹೋರಾಟ ಮಾಡಿದೆ. ಈ ಹೋರಾಟದಲ್ಲಿ ಮಾಲೀಕರಿಗಾಗಿ ನಾಯಿಯು ತನ್ನ ಜೀವವನ್ನೇ ಅರ್ಪಿಸಿದೆ.

ಮನೆಯ ಮುಂದೆ ಮಕ್ಕಳು ಆಟ ಆಡುವಾಗ ಒಮ್ಮೆಲೇ ನಾಗರಹಾವು ಅಲ್ಲಿ ಎಂಟ್ರಿ ಮಾಡಿದೆ. ಸರಿಯಾಗಿ ಅದೇ ಸಮಯಕ್ಕೆ ನಾಯಿಯು ನಾಗರಹಾವಿಗೆ ಅಡ್ಡಲಾಗಿದೆ. ನಾಯಿ ಮತ್ತು ನಾಗ ಇವೆರಡರಲ್ಲಿ ಸುಮಾರು ಅರ್ಧ ಗಂಟೆಯವರೆಗೆ ಹೋರಾಟ ಸಾಗಿದೆ. ಎರಡು ಒಂದರಮೇಲೊಂದು ಅಟ್ಯಾಕ್ ಮಾಡಿವೆ.

ಈ ಕಾಳಗವನ್ನು ನೋಡಿದ ಮಕ್ಕಳು ಅಲ್ಲಿಯೇ ಮನೆಯ ಕಡೆಗೆ ಓಡಿಹೋಗಿವೆ. ಆ ನಂತರ ಮನೆಯ ಮಾಲೀಕ ಬಂದಾಗ ನಡೆದ ಪ್ರಸಂಗವು ತಿಳಿದುಬಂದಿದೆ. ಈ ಘಟನೆಯ ವಿಡಿಯೋ ಸಹ ವೈರಲ್ ಆಗಿದೆ.

ಈ ಹೋರಾಟದಲ್ಲಿ ನಾಗರಹಾವು ನಾಯಿಗೆ ಅನೇಕ ಭಾಗಗಳಲ್ಲಿ ಕಚ್ಚಿದೆ. ಕೊನೆಗೆ ಹಾವು ಸತ್ತ ನಂತರವೇ ಈ ಜಗಳ ನಿಂತಿದೆ. ಸ್ವಲ್ಪ ಸಮಯದ ನಂತರ ಜೂಲಿಯ ಸಾವು ಸಹ ಸಂಭವಿಸಿತು. ಆದರೆ ಜೂಲಿಯು ಮಕ್ಕಳ ಕಡೆ ಬರುತ್ತಿದ್ದ ನಾಗರಹಾವನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಇದಕ್ಕಾಗಿ ಅದು ತನ್ನ ಪ್ರಾಣವನ್ನೇ ನೀಡಿತು. ಜೂಲಿಯ ಸಾವಿಗೆ ಊರವರು ಸಹ ತುಂಬಾ ದುಃಖ ವ್ಯಕ್ತ ಮಾಡುತ್ತಿದ್ದಾರೆ.