Video: ಅಪಾಯ ಎದುರಾದ ಕೂಡಲೇ ಮಾಲೀಕನಿಗೆ ಸೂಚನೆ ನೀಡಿ, ಎಚ್ಚೆತ್ತುಕೊಳ್ಳುವಂತೆ ಮಾಡಿದ ನಾಯಿ!
ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಇವುಗಳನ್ನು ಅನೇಕ ಮಂದಿ ಇಷ್ಟಪಟ್ಟು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಕೆಲವರಂತೂ ಶ್ವಾನಗಳಿಗೂ ಕೂಡಾ ತಮ್ಮ ಮನೆಯ ಸದಸ್ಯರ ಹಾಗೆ ಸ್ಥಾನವನ್ನು ನೀಡಿರುತ್ತಾರೆ. ಅವುಗಳನ್ನು ಕುಟುಂಬದ ಸದಸ್ಯರಂತೆ ಬಹಳ ಪ್ರೀತಿ ಮತ್ತು ಆಪ್ಯಾಯತೆ ನೀಡಿ ಅವನ್ನು ಸಾಕಿ ಸಲಹುತ್ತಾರೆ. ಮನೆಯಲ್ಲಿ ಸಾಕುವ ನಾಯಿಗಳು ಮಾತ್ರವೇ ಅಲ್ಲ, ಬೀದಿಯಲ್ಲಿರುವ ನಾಯಿಗಳಿಗೂ ಸಹಾ ಒಂದು ತುತ್ತು ಅನ್ನ ಹಾಕಿದರೆ, ಆ ನಾಯಿಗಳು ತಮಗೆ ಅನ್ನ ಹಾಕಿದವನ ಪರವಾಗಿ ತಮ್ಮ ಪ್ರಾಮಾಣಿಕತೆ ಹಾಗೂ ನಿಯತ್ತನ್ನು ಸದಾ ತೋರಿಸುತ್ತಲೇ ಇರುತ್ತದೆ. ಮನುಷ್ಯ ಅದೆಷ್ಟೋ ಸಾಕು ಪ್ರಾಣಿಗಳನ್ನು ಸಾಕುತ್ತಿದ್ದರೂ ಅನಾದಿ ಕಾಲದಿಂದಲೂ ಮನುಷ್ಯನ ಸಂಗಾತಿಯಾಗಿರುವ ಪ್ರಾಣಿ ಎಂದರೆ ಅದು ನಾಯಿ ಎಂಬುದು ವಾಸ್ತವ.
ನಾಯಿಗಳು ತಮ್ಮ ನಿಯತ್ತನ್ನು ಅನೇಕ ಸಂದರ್ಭಗಳಲ್ಲಿ ಪ್ರದರ್ಶನ ಮಾಡಿರುವಂತಹ ವಿಶಿಷ್ಟ ಸನ್ನಿವೇಶಗಳ ವಿಡಿಯೋಗಳು ಹಾಗೂ ಸುದ್ದಿಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲಾಗಿದೆ. ಇಂತಹ ಘಟನೆಗಳು ಹಾಗೂ ದೃಶ್ಯಗಳನ್ನು ನೋಡಿದಾಗ ಆಶ್ಚರ್ಯ ಎನಿಸುವುದು ಮಾತ್ರವೇ ಅಲ್ಲದೇ, ತಮ್ಮನ್ನು ಸಾಕಿದವರ ಪ್ರಾಣವನ್ನು ಉಳಿಸುವುದಕ್ಕಾಗಿ ನಾಯಿಗಳು ಅನೇಕ ಸಂದರ್ಭಗಳಲ್ಲಿ ತಮ್ಮ ಪ್ರಾಣವನ್ನು ಸಹಾ ಲೆಕ್ಕಿಸದೇ ಮುಂದೆ ಬರುವುದನ್ನು ನೋಡಬಹುದು. ಅಲ್ಲದೇ ಕೆಲವು ಸಂದರ್ಭಗಳಲ್ಲಿ ಮನೆಯವರನ್ನು ಉಳಿಸುವುದಕ್ಕಾಗಿ ನಾಯಿಗಳು ತಮ್ಮ ಪ್ರಾಣವನ್ನು ಬಿಟ್ಟಿರುವ ಉದಾಹರಣೆಗಳು ಕೂಡಾ ಉಂಟು.
ಈಗ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಒಂದು ಹಳೆಯ ವಿಡಿಯೋ ಈಗ ಮತ್ತೊಮ್ಮೆ ವೈರಲ್ ಆಗಿದೆ. ಇದರಲ್ಲಿ ಹೇಗೆ ಅಪಾಯವೊಂದರಿಂದ ನಾಯಿಯು ತನ್ನ ಮಾಲಿಕನನ್ನು ಕಾಪಾಡಿದೆ ಎನ್ನುವ ದೃಶ್ಯವನ್ನು ನಾವು ನೋಡಬಹುದಾಗಿದೆ. ಸರಿಯಾದ ಸಂದರ್ಭದಲ್ಲಿ ನಾಯಿಯು ನೀಡಿದ ಸೂಚನೆಯಿಂದ ಅದರ ಮಾಲೀಕನು ಅಪಾಯದಿಂದ ಎಚ್ಚೆತ್ತುಕೊಂಡು ದೂರ ಸರಿಯಲು ಸಾಧ್ಯವಾಗಿದೆ. ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಜನ ವೀಕ್ಷಣೆಯನ್ನು ಮಾಡಿದ್ದು, ಅಸಂಖ್ಯಾತ ಮಂದಿ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ವಿಡಿಯೋದಲ್ಲಿನ ದೃಶ್ಯವನ್ನು ಗಮನಿಸಿದಾಗ ಒಬ್ಬ ವ್ಯಕ್ತಿಯು ಆರಾಮವಾಗಿ ಕುಳಿತು ಏನನ್ನೋ ಓದುತ್ತಾ ಇರುತ್ತಾರೆ.
ಅದೇ ಸಂದರ್ಭದಲ್ಲಿ ಒಂದು ಕಂದು ಬಣ್ಣದ ವಿಷಕಾರಿ ಹಾವು ಅಲ್ಲಿ ಹರಿಯುತ್ತಾ ಬರುವುದನ್ನು ನೋಡಿದ ನಾಯಿಯ ಅದನ್ನು ಹಿಡಿಯಲು ಹೋಗುತ್ತದೆ. ಹಾವು ಬಹಳ ವೇಗವಾಗಿ ಅಲ್ಲೇ ಇದ್ದ ಟೇಬಲ್ ನ ಕೆಳಗೆ ಹರಿಯುತ್ತಾ ಟೇಬಲ್ ನ ಸ್ವಲ್ಪ ಮುಂದೆ ಕುಳಿತು ಪೇಪರು ಓದುತ್ತಿದ್ದ ನಾಯಿಯ ಮಾಲೀಕನ ಕಡೆಗೆ ಹೋಗುತ್ತದೆ. ಆ ಕೂಡಲೇ ನಾಯಿಯು ಆ ಕಡೆ ಓಡಿ ಹೋಗಿ ತನ್ನ ಮಾಲಿಕನಿಗೆ ಅಪಾಯದ ಸೂಚನೆಯನ್ನು ನೀಡುತ್ತದೆ. ತಕ್ಷಣ ಎಚ್ಚೆತ್ತುಕೊಂಡ ಆತ ತಾನು ಕುಳಿತಿದ್ದ ಚೇರ್ ನ ಸಮೇತ ಹಿಂದಕ್ಕೆ ಬರುತ್ತಾರೆ. ಅಲ್ಲದೇ ಹಾವಿನ ಕಡೆ ಹೋಗುವ ತಮ್ಮ ನಾಯಿಯನ್ನು ಕೂಡಾ ಅವರು ಹಿಂದೆ ಎಳೆದು ತರುತ್ತಾರೆ.
ವಿಡಿಯೋ ನೋಡಿ
ಈ ವೀಡಿಯೋ ನೋಡಿದಾಗ ನಾಯಿಗಳ ಕುಶಲತನ ಮತ್ತೊಮ್ಮೆ ಎಲ್ಲರ ಮುಂದೆ ಬರುತ್ತದೆ. ಅಲ್ಲದೇ ಅದರ ಬಗ್ಗೆ ಒಂದು ಮೆಚ್ಚುಗೆಯನ್ನು ಖಂಡಿತ ನೀಡಬೇಕು ಎನಿಸುತ್ತದೆ. ಮೂಕ ಪ್ರಾಣಿಗಳು ನಿಜಕ್ಕೂ ತಮ್ಮನ್ನು ಸಾಕಿದವರ ಪರವಾಗಿ ಅಪಾರ ಪ್ರೀತಿಯನ್ನು ತೋರುವುದು ಸಹಜವಾದರೂ ನಾಯಿ ಈ ವಿಷಯದಲ್ಲಿ ಬೇರೆಲ್ಲಾ ಪ್ರಾಣಿಗಳಿಗಿಂತ ಒಂದು ಹೆಜ್ಜೆ ಮುಂದಿದ್ದು, ನಿಯತ್ತಿನ ವಿಚಾರದಲ್ಲಿ ಅದನ್ನು ಬೇರಾವ ಪ್ರಾಣಿಗಳು ಸ್ಪರ್ಧೆ ನೀಡಲಾರವು.