ಚಾರ್ಜ್ ಮಾಡದೆಯೇ ಬ್ಯಾಟರಿ ಫುಲ್ ಆಗುವ ವಿಶೇಷ ಎಲೆಕ್ಟ್ರಿಕ್ ಕಾರು: ಒಂದು ಸಲಕ್ಕೆ 1600 ಕಿಮೀ ರೇಂಜ್ ನೀಡಬಲ್ಲುದು!
ದಿನಗಳು ಕಳೆದಂತೆ ನಿಧಾನವಾಗಿ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣವೇನೆಂದರೆ ಎಲೆಕ್ಟ್ರಿಕ್ ಕಾರುಗಳದ್ದು ಒನ್ ಟೈಮ್ ಇನ್ವೆಸ್ಟ್ಮೆಂಟ್ ಎಂದರೆ ತಪ್ಪಾಗಲಾರದು. ಎಲೆಕ್ಟ್ರಿಕ್ ಕಾರುಗಳನ್ನು ಚಲಾಯಿಸುವುದು ಬಹಳ ಲಾಭದಾಯಕ ಮಾತ್ರವಲ್ಲದೇ ಇದರ ಖರ್ಚು ಕಡಿಮೆ. ಇದರಿಂದ ಪರಿಸರಕ್ಕೆ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ. ಅದರಲ್ಲೂ ಪೆಟ್ರೋಲ್ ಬೆಲೆಗಳು ಏರುತ್ತಿರುವ ಈ ಕಾಲದಲ್ಲಿ ಈ ಕಾರುಗಳು ಬಹಳ ಸೂಕ್ತ ಎನ್ನುವುದು ಅನೇಕರ ಅಭಿಪ್ರಾಯವೂ ಹೌದು. ಆದರೂ ಕೂಡಾ ಒಂದೊಂದು ಸಲ ಚಾರ್ಜಿಂಗ್ ಮುಗಿದ ಮೇಲೆ ಈ ಕಾರುಗಳು ಮತ್ತೆ ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುವುದರಿಂದ ದೂರ ಪ್ರಯಾಣ ಮಾಡುವಾಗ ಚಾರ್ಜಿಂಗ್ ಮುಗಿದು ಹೋದರೆ ಹೇಗೆ? ಎನ್ನುವ ಪ್ರಶ್ನೆ ಸಹಜವಾಗಿಯೇ ಮನಸ್ಸಿನಲ್ಲಿ ಮೂಡುತ್ತದೆ.
ಅಲ್ಲದೇ ಚಾರ್ಜಿಂಗ್ ಸರಿಯಾದ ಸಮಯದಲ್ಲಿ ದಕ್ಕದೆ ಹೋದರೆ, ಕಾರು ನಿಂತು ಹೋದ ಜಾಗದಲ್ಲಿ ಚಾರ್ಜಿಂಗ್ ಸೌಲಭ್ಯ ಇಲ್ಲದೇ ಹೋದರೆ ಆಗ ಪ್ರಯಾಣ ಮಾಡುವುದು ಅಸಾಧ್ಯವಾಗುತ್ತದೆ ಎನ್ನುವ ಸಮಸ್ಯೆ ಕೂಡಾ ಕಣ್ಮುಂದೆ ಬರುತ್ತದೆ. ಆದರೆ ಇಂತಹ ಸಮಸ್ಯೆ ಇಲ್ಲದೇ ಎಲೆಕ್ಟ್ರಿಕ್ ಕಾರನ್ನು ಚಾರ್ಜಿಂಗ್ ಮಾಡುವ ಅವಶ್ಯಕತೆಯೇ ಇಲ್ಲದೆ ಹೋದರೆ ಹೇಗಿರುತ್ತದೆ?? ಎಂದು ಆಲೋಚನೆ ಮಾಡಿದರೆ ಅರೆ ಇದೆಂತಹ ತಮಾಷೆಯ ಮಾತು ಎನಿಸಬಹುದು. ಆದರೆ ವಿಶ್ವದ ಕೆಲವು ಕಂಪನಿಗಳು ಇಂತಹ ವಿಶೇಷವಾದ ಕಾರುಗಳನ್ನು ತಯಾರಿಸುತ್ತಿದ್ದು ಅವುಗಳನ್ನು ಮಾರುಕಟ್ಟೆಗೆ ತರುತ್ತಿವೆ. ಈ ಕಾರುಗಳನ್ನು ಚಾರ್ಜಿಂಗ್ ಮಾಡದೆಯೇ ಬಳಕೆಬ ಮಾಡಬಹುದಾಗಿದೆ. ಈಗ ಅಂತಹದೇ ಒಂದು ಕಾರಿನ ಬಗ್ಗೆ ನಾವು ಮಾಹಿತಿಯನ್ನು ನೀಡಲು ಹೊರಟಿದ್ದೇವೆ.
ಅಪ್ಟೇರಾ ಮೋಟಾರ್ಸ್ ಕಾರ್ಪೊರೇಷನ್ ಎನ್ನುವ ಕಂಪನಿಯೊಂದು ಅಪ್ಟೇರಾ ಪ್ಯಾರಾಡಿಗ್ಮ ಪರದಿಗ್ಮ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಿದ್ದು, ಇದೊಂದು ಸೋಲಾರ್ ಎಲೆಕ್ಟ್ರಿಕ್ ಕಾರ್ ಆಗಿದೆ. ವಿಶೇಷವೆಂದರೆ ಇದನ್ನು ಚಾರ್ಜ್ ಮಾಡುವ ಅವಶ್ಯಕತೆಯೇ ಇಲ್ಲ ಎನ್ನಲಾಗಿದೆ. ಈ ವಿಶೇಷವಾದ ಎಲೆಕ್ಟ್ರಿಕ್ ಕಾರು ನೇರವಾಗಿ ಸೂರ್ಯನ ಶಾಖವನ್ನು ಪಡೆದುಕೊಂಡು ತನ್ನ ಕೆಲಸವನ್ನು ಮಾಡುತ್ತದೆ ಎನ್ನಲಾಗಿದ್ದು, ಅದೇ ಕಾರಣದಿಂದಲೇ ಇದನ್ನು ಆಗಾಗ ಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ. ಈ ವಿಶೇಷವಾದ ಸೋಲಾರ್ ಎಲೆಕ್ಟ್ರಿಕ್ ಕಾರು ಕೇವಲ 3.5 ಸೆಕೆಂಡಿನಲ್ಲಿ ಸೊನ್ನೆಯಿಂದ ನೂರು ಕಿಲೋಮೀಟರ್ ಪ್ರತಿ ಗಂಟೆಯ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಈ ಕಾರಿನ ಗರಿಷ್ಠ ವೇಗ ಗಂಟೆಗೆ 177 ಕಿಲೋಮೀಟರ್ ಆಗಿರುತ್ತದೆ. ಒಂದು ಸಲ ಈ ಕಾರ್ಯ ಸಂಪೂರ್ಣವಾಗಿ ಚಾರ್ಜ್ ಆದರೆ ಸುಮಾರು 1000 ದಿಂದ 1600 ಕಿಲೋಮೀಟರ್ ವರೆಗೆ ಚಾಲನೆ ಮಾಡಬಹುದಾಗಿರುತ್ತದೆ. ಅಪ್ಟೇರಾ ಕಂಪನಿಯು ತನ್ನ ಈ ಹೊಸ ಕಾರಿನ ಫ್ರೀ ಆರ್ಡರ್ ಮಾರಾಟವನ್ನು ಆರಂಭಿಸಿದ್ದು, ಅದನ್ನು ಆರಂಭಿಸಿದ 24 ಗಂಟೆಗಳ ಅವಧಿಯಲ್ಲಿ ಎಲ್ಲಾ ಕಾರುಗಳು ಕೂಡಾ ಮಾರಾಟವಾಗಿದೆ. ಈ ಕಾರು 25.0 kWh ನಿಂದ 100.0 kWh ವರೆಗೆ ಬ್ಯಾಟರಿಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು 134 ಬಿಎಚ್‌ಪಿ ಯಿಂದ 201 ಬಿಹೆಚ್‌ಪಿ ವರೆಗೆ ವಿವಿಧ ಮಾದರಿಗಳಲ್ಲಿ ವಿದ್ಯುತ್ ಉತ್ಪಾದಿಸಬಲ್ಲದು.

ಕ್ಯಾಲಿಫೋರ್ನಿಯಾದ ಸ್ಟಾರ್ಟಪ್ ಕಂಪನಿಯಾದ ಹಂಬಲ್ ಮೋಟಾರ್ಸ್ ಕೆಲವೇ ದಿನಗಳ ಹಿಂದೆ ವಿಶ್ವದ ಮೊಟ್ಟ ಮೊದಲ ಎಸ್ ಯು ವಿ ಹಂಬಲ್ ಒನ್ ಎನ್ನುವ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶಿಸಿದೆ. ಕಂಪನಿಯು ಈ ಕಾರಿನ ಛಾವಣಿಯನ್ನು ಸೋಲಾರ್ ಫ್ಯಾನಲ್ ನಿಂದ ರಿಪ್ಲೇಸ್ ಮಾಡಿದ್ದು, ಈ ಸೋಲಾರ್ ಫ್ಯಾನಲ್ ಕಾರಣದಿಂದಾಗಿ ಕಾರನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವಂತಹ ಅವಶ್ಯಕತೆ ಇಲ್ಲ. ಕಾರು ಚಲಿಸುವಾಗಲೇ ತನ್ನಷ್ಟಕ್ಕೆ ತಾನೇ ಚಾರ್ಜ್ ಆಗಿಬಿಡುತ್ತದೆ. ಹಂಬಲ್ ಮೋಟಾರ್ಸ್ ನಲ್ಲಿ ಚಾರ್ಜಿಂಗ್ ಮಾಡಲು ಸೋಲಾರ್ ರೂಫ್, ಎಲೆಕ್ಟ್ರಿಸಿಟಿ ಜನರೇಟಿಂಗ್ ಸೈಡ್ ಲೈಟ್ಸ್, ಪೇರ್ ಟು ಪೇರ್ ಚಾರ್ಜಿಂಗ್, ರೀಜನರೇಟಿವ್ ಬ್ರೇಕಿಂಗ್ ಹಾಗೂ ಫೋಲ್ಡ್ ಔಟ್ ಸೋಲಾರ್ ಏರ್ವಿಂಗ್ಸ್ ಅನ್ನು ನೀಡಲಾಗಿದೆ. ಇವೆಲ್ಲವುಗಳ ಸಹಾಯದಿಂದ ಎಸ್ ಯೂ ವಿ ಕಾರಿನ ಬ್ಯಾಟರಿ ಬಹಳ ಸುಲಭವಾಗಿ ಚಾರ್ಜ್ ಆಗುತ್ತದೆ.