ಒಂದೇ ವೇದಿಕೆಯಲ್ಲಿ ಮಾಧುರಿ ದೀಕ್ಷಿತ್ ಹಾಗೂ ನೋರಾ ಫತೇಹಿ ಇಬ್ಬರೂ ಡಾನ್ಸ್ ಸ್ಟಾರ್ ಗಳ ಭರ್ಜರಿ ಡಾನ್ಸ್: ವೀಡಿಯೋ ಸಖತ್ ವೈರಲ್
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಎಂತಹ ಅದ್ಭುತವಾದ ನೃತ್ಯಗಾರ್ತಿ ಎನ್ನುವ ವಿಷಯ ಸಿನಿ ಪ್ರೇಮಿಗಳಿಗೆ ಹಾಗೂ ಅಭಿಮಾನಿಗಳಿಗೆ ಈಗಾಗಲೇ ತಿಳಿದಿದೆ. ನಟನೆ ಹಾಗೂ ನೃತ್ಯದ ಮೂಲಕ ಒಂದು ಕಾಲದಲ್ಲಿ ಬಾಲಿವುಡ್ ನಂಬರ್ 1 ನಟಿಯಾಗಿ ಮಿಂಚಿದವರು ಮಾಧುರಿ ದೀಕ್ಷಿತ್. ಇದೇ ಮಾಧುರಿ ದೀಕ್ಷಿತ್ ಅವರ ಡ್ಯಾನ್ಸ್ ಗಳಿಗಾಗಿ ಅಸಂಖ್ಯಾತ ಅಭಿಮಾನಿಗಳು ಕಾಯುತ್ತಿರುತ್ತಾರೆ. ತನ್ನ ಅದ್ಭುತವಾದ ಡ್ಯಾನ್ಸ್ ಗಳಿಂದಾಗಿಯೇ ಮಾದರಿ ದೀಕ್ಷಿತ್ ಅವರನ್ನು ‘ಡ್ಯಾನ್ಸಿಂಗ್ ದೀವಾ’ ಎಂದು ಕರೆಯಲಾಗುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಡ್ಯಾನ್ಸಿಂಗ್ ಸೆನ್ಸೇಷನ್ ಎನಿಸಿರುವ ನೋರ ಫತೇಹಿ ಮಾಡುವ ಕಿಲ್ಲರ್ ಡ್ಯಾನ್ಸ್ ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೋರಾ ಅವರನ್ನು ಫಾಲೋ ಮಾಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಈಗಂತೂ ಬಾಲಿವುಡ್ ಸಿನಿಮಾಗಳಲ್ಲಿ ನೋರಾ ಡಾನ್ಸ್ ಒಂದು ಹೊಸ ಕ್ರೇಜ್ ಆಗಿದೆ.
ಇಂತಹ ಇಬ್ಬರು ಅದ್ಬುತ ಡಾನ್ಸ್ ಸೆನ್ಸೇಶನ್ ಗಳು ಒಟ್ಟಿಗೆ ಒಂದೇ ವೇದಿಕೆಯ ಮೇಲೆ ಡ್ಯಾನ್ಸ್ ಮಾಡಿದರೆ ಅದು ಅಭಿಮಾನಿಗಳಿಗೆ ಖಂಡಿತ ಹಬ್ಬ. ಹೌದು ಇಂತಹದೊಂದು ವಿಶೇಷವಾದ ಘಟನೆಗೆ ವೇದಿಕೆಯಾಯಿತು ಬಾಲಿವುಡ್ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಭಾರತದ ನಂಬರ್ ಒನ್ ಜನಪ್ರಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಡ್ಯಾನ್ಸ್ ದಿವಾನೇ 3 ‘ ಕಾರ್ಯಕ್ರಮ. ಡಾನ್ಸ್ ದಿವಾನೇಯ ಮೂರನೇ ಭರ್ಜರಿ ಸೀಸನ್ ನಡೆಯುತ್ತಿದ್ದು, ಈ ಹೊಸ ಸೀಸನ್ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಕಾರ್ಯಕ್ರಮದ ಮೂರು ಜನ ಜಡ್ಜ್ ಗಳಲ್ಲಿ ಮಾಧುರಿ ದೀಕ್ಷಿತ್ ಒಬ್ಬರಾಗಿದ್ದಾರೆ.
ಇತ್ತೀಚೆಗೆ ಡ್ಯಾನ್ಸ್ ದಿವಾನೇ ಕಾರ್ಯಕ್ರಮಕ್ಕೆ ನೋರ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾಧುರಿ ದೀಕ್ಷಿತ್ ಹಾಗೂ ನೋರಾ ಇಬ್ಬರೂ ಜೊತೆಯಾಗಿ ಮಾಧುರಿ ದೀಕ್ಷಿತ್ ಅವರದ್ದೇ ಸೂಪರ್ ಹಿಟ್ ಹಾಡು ಮೇರಾ ಪಿಯಾ ಗರ್ ಆಯಾ ಎನ್ನುವ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಹಾಡಿನ ದೃಶ್ಯದ ವೀಡಿಯೋಗಳನ್ನು ಮಾಧುರಿ ದೀಕ್ಷಿತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಡ್ಯಾನ್ಸ್ ವಿಡಿಯೋ ನೋಡಿದ ಅಭಿಮಾನಿಗಳು ನೋರಾ ಹಾಗೂ ಮಾತ್ರೆ ದೀಕ್ಷಿತ್ ಅವರ ಡ್ಯಾನ್ಸ್ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಅಪಾರವಾದ ಮೆಚ್ಚುಗೆಗಳನ್ನು ಹರಿಸಿದ್ದಾರೆ.
ನೋರಾ ಅವರ ಸೂಪರ್ ಹಾಡು ದಿಲ್ ಬರ್ ಹಾಡಿಗೆ ಮಾಧುರಿ ದೀಕ್ಷಿತ್ ಜೊತೆ ಹೆಜ್ಜೆಗಳನ್ನು ಹಾಕಿ ದ ವಿಡಿಯೋವನ್ನು ಕಲರ್ಸ್ ಚಾನೆಲ್ ಕನ್ನ ಆಫಿಷಿಯಲ್ ಪೇಜ್ ನಲ್ಲಿ ಶೇರ್ ಮಾಡಿಕೊಂಡಿತ್ತು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆದ ಮೇಲೆ ಅಭಿಮಾನಿಗಳು ಆ ಎಪಿಸೋಡನ್ನು ನೋಡಲು ಕಾತರದಿಂದ ಕಾದಿದ್ದರು. ಕಳೆದ ವಾರ ಅತಿಥಿಯಾಗಿವ ಆಗಮಿಸಿದ್ದ ನೋರಾ ಮಾಧುರಿ ದೀಕ್ಷಿತ್ ಅವರ ಜೊತೆಗೆ ಕುಣಿದು ವೀಕ್ಷಕರಿಗೆ ಬಹಳಷ್ಟು ಮನರಂಜನೆಯನ್ನು ನೀಡಿದರು. ಇನ್ನು ಈ ವಾರ ಕೂಡಾ ನೋರಾ ಡಾನ್ಸ್ ದಿವಾನೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ವಿಡಿಯೋ ನೋಡಿ
ಈ ವಾರ ಮಾಧುರಿ ದೀಕ್ಷಿತ್ ಅವರ ಸೂಪರ್ ಹಿಟ್ ಹಾಡು ಚೋಲಿಕೆ ಪೀಚೆ ಕ್ಯಾ ಹೇ ಹಾಡಿಗೆ ಭರ್ಜರಿ ನೃತ್ಯವನ್ನು ಮಾಡಿದ್ದಾರೆ. ಮಾಧುರಿ ಅವರು ಕೂಡಾ ಒಂದು ಸೂಪರ್ ಹಿಟ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಡ್ಯಾನ್ಸ್ ದಿವಾನೇ 3 ಕಾರ್ಯಕ್ರಮದ ಮೇಲೆಯೂ ಕೊರೋನಾದ ಕರಿ ನೆರಳು ಬಿದ್ದಿದೆ. ಈ ಶೋನಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಮೂರು ಜನ ಸ್ಪರ್ಧಿಗಳಿಗೆ ಹಾಗೂ ಶೋ ನ ಒಬ್ಬ ಜಡ್ಜ್ ಧರ್ಮೇಶ್ ರವರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಎಲ್ಲರೂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಧರ್ಮೇಶ್ ಅನುಪಸ್ಥಿತಿಯಲ್ಲಿ ಪುನೀತ್ ಜಡ್ಜ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.