ಸಾಮಾನ್ಯರಿಂದ ಶ್ರೀಮಂತರವರೆಗೆ ಎಲ್ಲರೂ ಧೈರ್ಯವಾಗಿ ಹೂಡಿಕೆ ಮಾಡಬಹುದಾದದ್ದು ಎಲ್ಲಿ?
ಕಷ್ಟಕಾಲದಲ್ಲಿ ಎಲ್ಲರೂ ಕೈಬಿಟ್ಟರೂ ನಮ್ಮ ಉಳಿತಾಯ ನಮ್ಮ ಕೈ ಹಿಡಿಯುತ್ತದೆ. ದುಡ್ಡಿದ್ದರೇನೇ ಜಗತ್ತು ತಿರುಗಿ ನೋಡುವುದು ಹಾಗೂ ದುಡ್ಡಿಗೇ ಬೆಲೆ. ಹೀಗಿರುವಾಗ ದುಡಿದಿದ್ದನ್ನೆಲ್ಲ ತಿಂದು ಕುಳಿತುಬಿಟ್ಟರೆ ಮುಂದೆ ಗತಿ ಹೇಗೆ? ಇಂಥ ಪ್ರಶ್ನೆ ನಮ್ಮಲ್ಲಿ ಹಲವಾರು ಸಲ ಎದ್ದಿರುತ್ತದೆ. ಹಾಗೆಯೇ ಉಳಿಸಿದ ಅಲ್ಪಸ್ವಲ್ಪ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದು ಕೂಡ ಪ್ರಶ್ನೆಯಾಗಿರುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಬಡವರು, ಮಧ್ಯಮವರ್ಗದವರು, ಕೆಲವೊಮ್ಮೆ ಶ್ರೀಮಂತರು ಕೂಡ ದುಡ್ಡನ್ನು ಎಲ್ಲೆಲ್ಲೊ ಬೇಕಾಬಿಟ್ಟಿ ಹೂಡಿಕೆ ಮಾಡುತ್ತಾರೆ, ಹೆಚ್ಚು ಬಡ್ಡಿ ಆಸೆಗೆ ಅಥವಾ ಹಣ ಡಬಲ್ ಮಾಡುವ ಮಾತಿಗೆ ಮರುಳಾಗಿ ಚಿಟಿ ಹಾಕಿಸಿಕೊಳ್ಳುವ ಚೀಟರ್ ಹತ್ತಿರ ಹೂಡಿಕೆ ಮಾಡುತ್ತಾರೆ. ಕೊನೆಗೊಮ್ಮೆ ಬೆವರು ಸುರಿಸಿದ ದುಡಿದ ಹಣವನ್ನು ಇನ್ಯಾರೊ ಎತ್ತಿಕೊಂಡು ಓಡಿ ಹೋಗುತ್ತಾರೆ.
ಹೀಗಾಗಬಾರದೆಂದರೆ ಕೆಳಗೆ ತಿಳಿಸಿದ ಕಡೆ ಹೂಡಿಕೆ ಮಾಡಿ, ನಿಮ್ಮ ಹಣವೂ ಭದ್ರವಾಗಿರುತ್ತದೆ, ಜೊತೆಗೆ ತಕ್ಕ ಬಡ್ಡಿಯೂ ಸಿಗುತ್ತದೆ. ಹಾಗೆ ನೋಡಿದರೆ ಮಾರುಕಟ್ಟೆಯಲ್ಲಿ ಸಾಕಷ್ಟು ಉಳಿತಾಯ ಯೋಜನೆಳಿವೆ. ಆದರೆ ಯಾವುದು ಉತ್ತಮ, ಯಾವುದು ಸುರಕ್ಷಿತ ಎಂದು ನೋಡುವುದಾದರೆ, ಅಂಚೆ ಕಛೇರಿಯ ಕಿಸಾನ್ ವಿಕಾಸ್ ಪತ್ರ ಅತ್ಯುತ್ತಮ ಯೋಜನೆ.

ಅಂದಮಾತ್ರಕ್ಕೆ ಇದನ್ನು ಕೇವಲ ಅಂಚೆ ಕಛೇರಿಯಲ್ಲಿ ಮಾತ್ರವಲ್ಲ, ಹಲವು ಬ್ಯಾಂಕ್ ಗಳಲ್ಲಿಯೂ ಖರೀದಿ ಮಾಡಬಹುದು. ಅಂದಹಾಗೆ ಇದರ ಹೆಸರು ಮಾತ್ರ ಕಿಸಾನ್ ವಿಕಾಸ ಪತ್ರ, ಆದರೆ ರೈತೆಲ್ಲದವರು ಕೂಡ ಇದನ್ನು ಖರೀದಿ ಮಾಡಬಹುದು.
ವಿಶೇಷತೆಗಳೇನು? ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ನಿಗಧಿತ ಅವಧಿಯ ನಂತರ ಹೂಡಿಕೆ ಮಾಡಿದ ಹಣ ಡಬಲ್ ಆಗುತ್ತದೆ. ಹಾಗೆಯೇ ಇದರಲ್ಲಿ ನಾವು ಕನಿಷ್ಟ ಒಂದು ಸಾವಿರದಿಂದ ಹಿಡಿದು ಗರಿಷ್ಟ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಅಂದರೆ ಸಾಮಾನ್ಯ ಬಡವನಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ಇಲ್ಲಿ ನಿರಾತಂಕವಾಗಿ ಹಣ ಹೂಡಬಹುದು.
124 ತಿಂಗಳಿಗೆ ಡಬಲ್! ಕಿಸಾನ್ ವಿಕಾಸ್ ಪತ್ರ ಯೋಜನೆಯು ಹೂಡಿಕೆ ಮಾಡಿದ 124 ತಿಂಗಳಿಗೆ ಮುಕ್ತಾಯವಾಗುತ್ತದೆ. ಅಂದರೆ ಅಷ್ಟು ತಿಂಗಳಿಗೆ ನಮ್ಮ ಹಣ ಡಬಲ್ ಆಗಿರುತ್ತದೆ. ಅಷ್ಟು ತಿಂಗಳು ಹೂಡಿಕೆ ಮಾಡುವುದು ಬೇಡ ಅನಿಸಿದರೆ ನಡುವೆ ಯಾವಾಗ ಬೇಕಾದರೂ ನಮ್ಮ ಹಣವನ್ನು ವಾಪಸ್ ಪಡೆಯಬಹುದು. ಹೂಡಿಕೆ ಮಾಡಿದ ಎರಡೂವರೆ ವರ್ಷದ ನಂತರ ಹಣ ಹಿಂತೆಗೆದುಕೊಂಡರೆ ನಿಮ್ಮ ಹಣಕ್ಕೆ 6.9 ರಷ್ಟು ಬಡ್ಡಿ ಹಾಕಿ ಕೊಡಲಾಗುತ್ತದೆ. ಒಂದು ವರ್ಷದೊಳಗೆ ವಾಪಸ್ ಪಡೆದರೆ ಬಡ್ಡಿ ಸಿಗುವುದಿಲ್ಲ.

ವರ್ಗಾಯಿಸಬಹುದು : ಕಿಸಾನ್ ವಿಕಾಸ್ ಒತ್ರವನ್ನು ಒಬ್ಬರಿಂದ ಇನ್ನೊಬ್ಬರ ಹೆಸರಿಗೆ ವರ್ಗಾಯಿಸಲು ಅವಕಾಶವಿದೆ. ಹಾಗೆಯೇ ಒಂದು ಕಛೇರಿಯಿಂದ ಇನ್ನೊಂದು ಕಛೇರಿಗೂ ಕೂಡ ವರ್ಗಾಯಿಸಬಹುದು. ಅಂದರೆ ಕಿಸಾನ್ ವಿಕಾಸ್ ಪತ್ರ ಪಡೆದವರು ನಿದನ ಹೊಂದಿದರೆ ಅವರ ನಾಮಿನಿಗೆ ಪತ್ರವನ್ನು ವರ್ಗಾಯಿಸಲಾಗುತ್ತದೆ. ಒಂದು ವೇಳೆ ನಾವು ಜಂಟಿಯಾಗಿ ಪತ್ರ ಖರೀದಿ ಮಾಡಿದ್ದು ಅದರಲ್ಲಿ ಒಬ್ಬರು ತೀರಿಕೊಂಡರೆ ಇನ್ನೊಬ್ಬರ ಹೆಸರಿಗೆ ವರ್ಗವಾಗುತ್ತದೆ.
ಈಗೆ ಸಾಕಷ್ಟು ಸೌಲಭ್ಯಗಳಿರುವ, ಸಾಕಷ್ಟು ಲಾಭದಾಯಕವಾಗಿರುವ ಹಾಗೂ ಸಾಕಷ್ಟು ಸುರಕ್ಷತೆ ಕೂಡ ಇರುವ ಕಿಸಾನ್ ವಿಕಾಸ್ ಪತ್ರದ ಮೂಲಕ ನೀವು ಹೂಡಿಕೆ ಮಾಡುವುದು ಎಲ್ಲ ರೀತಿಯಿಂದಲೂ ಉತ್ತಮ.
-Team Infotrend