VIDEO : ದೊಡ್ಡಪ್ಪನ ಶ;ವ ಕೇಳಿದ ಹುಡುಗನಿಗೆ ಭಾರಿಸಿದ ಚೀಫ್ ಮೆಡಿಕಲ್ ಆಫೀಸರ್! ಆಮೇಲೇನಾಯ್ತು ವಿಡಿಯೊ ನೋಡಿ
ಈ ಕೊರೊನ ಮಾಡುತ್ತಿರುವ ಆವಾಂತರ ಅಷ್ಟಿಷ್ಟಲ್ಲ. ಪ್ರತಿದಿನ ಒಂದೊಂದು ಕಡೆಯಿಂದ ಒಂದೊಂದು ಅಸಹಜ ಘಟನೆಗಳು ಹೊರಬರುತ್ತಲೇ ಇವೆ. ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಇವೆ, ಹಾಗೆಯೇ ಸಾವುಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಇದೆಲ್ಲದರ ಪರಿಣಾಮ ಕೊರೋನ ವಾರಿಯರ್ಸ್ ಮೇಲೆ ಬೀಳುತ್ತಿದೆ. ಅವರ ಒತ್ತಡ – ಅವರ ಕಷ್ಟ ಹೇಳತೀರದ್ದಲ್ಲ. ಈ ನಡುವೆ ಜನ ಕೂಡ ಹಾಗೆಯೇ ಆಡುತ್ತಿದ್ದಾರೆ.
ಕೆಳಗಿರುವ ವಿಡಿಯೊ ನೋಡಿ, ಒಬ್ಬ ಯುವಕ ಕೊರೋನ ಬಂದು ಸ;ತ್ತ ತನ್ನ ದೊಡ್ಡಪ್ಪನ ಶ;ವ ಕೇಳುತ್ತಿದ್ದಾನೆ. ಕೊರೋನ ಬಂದು ಸ;ತ್ತವರ ಶ;ವ ಮನೆಗೆ ಕೊಡುವುದಿಲ್ಲ ಅಂತ ಇಡೀ ದೇಶಕ್ಕೇ ಗೊತ್ತು, ಆದರೂ ಅವನು ಶ;ವಕ್ಕಾಗಿ ಜಗಳ ಮಾಡತೊಡಗಿದ. ಬಾಯಿಗೆ ಬಂದಂತೆ ವೈದ್ಯರಿಗೆ ಬಯ್ಯತೊಡಗಿದ. ಸಹಿಸಿಕೊಳ್ಳುವವರೆಗೆ ಸಹಿಸಿಕೊಂಡ ಆಸ್ಪತ್ರೆಯ ಚೀಫ್ ಮೆಡಿಕಲ್ ಆಫೀಸರ್ ಯುವಕನಿಗೆ ಹಿಡಿದು ಕ;ಪಾಳ ಕ;ಪಾಳ ಭಾ;ರಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆದಿರುವ ಈ ಘಟನೆಯನ್ನು ಚಿತ್ರೀಕರಿಸಿಕೊಂಡ ಪ್ರತ್ಯಕ್ಷದರ್ಶಿಯೊಬ್ಬ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ. ನಂತರ ಮತ್ತೊಂದು ರೀತಿಯ ಆವಾಂತರ ಸುರುವಾಯಿತು. ಇಂಥ ಕಷ್ಟಕಾಲದಲ್ಲಿ ವೈದ್ಯರೇ ಸಿಗುತ್ತಿಲ್ಲ, ಅದರ ನಡುವೆ ಅವರನ್ನು ಸಸ್ಪೆಂಡ್ ಮಾಡಲು ಪ್ರತಿಭಟನೆ ಸುರುವಾದವು.
ಯುವಕನಿಗೆ ಬಾಯಿಗೆ ಬಂದ ಹಾಗೆ ಬೈದಿದ್ದರಿಂದ ತಾಳ್ಮೆ ಕಳೆದುಕೊಂಡೆ, ನನ್ನದು ತಪ್ಪಾಗಿದೆ ಎಂದು ಆ ಮೆಡಿಕಲ್ ಆಫೀಸರ್ ಕ್ಷಮೆ ಕೇಳಿದರೂ ಪ್ರಕರಣ ಇತ್ಯರ್ಥವಾಗಲಿಲ್ಲ. ಸ;ತ್ತವನ ಸಂಬಂಧಿಕರು ಎಟ್ಲಿಸ್ಟ್ ಒಂದು ಮಾಸ್ಕ್ ಕೂಡ ಹಾಕದೇ ಗುಂಪು ಸೇರಿ ಪ್ರತಿಭಟನೆ ಮಾಡತೊಡಗಿದರು. ಕೊನೆಗೆ ಜಿಲ್ಲಾಧಿಕಾರಿಗಳೇ ಮಧ್ಯಪ್ರವೇಶಿಸಿ ಚೀಫ್ ಮೆಡಿಕಲ್ ಆಫೀಸರ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರು.
ಇಷ್ಟೆಲ್ಲ ನಡೆಯುವಾಗ ಅಲ್ಲಿ ಒಬ್ಬಿಬ್ಬರಲ್ಲ ನಾಲ್ಕು ಜನ ಪೊಲೀಸರು ಉಪಸ್ಥಿತರಿದ್ದರು, ಆದರೆ ಯಾರೊಬ್ಬರೂ ಚೀಫ್ ಮೆಡಿಕಲ್ ಆಫೀಸರ್ ಹೊ;ಡೆಯುವುದನ್ನು ತಡೆಯಲಿಲ್ಲ. ಬಹುಶಃ ಅವರು ತಕ್ಷಣ ಮಧ್ಯಪ್ರವೇಶ ಮಾಡಿದ್ದರೆ ಈ ಘಟನೆ ಬೆಳೆಯುತ್ತಲೇ ಇರಲಿಲ್ಲ. ನಾವು ಜನ ಕೂಡ ಸ್ವಲ್ಪ ಜವಾಬ್ಧಾರಿಯಿಂದ ವರ್ತಿಸಬೇಕು.
ಒಂದು ತಾಸು ಮಾಸ್ಕ್ ಧರಿಸಲೂ ನಮಗೆ ಕಷಗಟವಾಗುತ್ತದೆ, ಅಂಥದರಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಏಳೆಂಟು ತಾಸು ಪಿಪಿಇ ಕಿಟ್ ಧರಿಸಿ ಡ್ಯೂಟಿ ಮಾಡಬೇಕು, ಅವರಿಗೆ ಮತ್ತಷ್ಟು ತೊಂದರೆ ಕೊಡುವುದು ಸರಿ ಅಲ್ಲ. ವಿಡಿಯೊ ಮೇಲೆ ಇದೆ ನೋಡಿ.
-Team Infotrend