MI vs CSK : ಕೀರನ್ ಪೊಲಾರ್ಡ್ ಸಹಾಯದಿಂದ ಇತಿಹಾಸ ಸೃಷ್ಟಿಸಿದ ಮುಂಬೈ! ಈ ಪಂದ್ಯದಲ್ಲಿ 14 ದೊಡ್ಡ ದಾಖಲೆಗಳು ರಚನೆಯಾದವು!

ಐಪಿಎಲ್ 2021 ರ ಅತಿದೊಡ್ಡ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಅಲ್ಲಿ ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 218 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 4 ವಿಕೇಟ್ ಗಳ ರೋಚಕ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಒಟ್ಟು 14 ದಾಖಲೆಗಳನ್ನು ರಚನೆಯಾಗಿದ್ದು, ಮುಂಬೈ ಇಂಡಿಯನ್ಸ್ ಕಿರೋನ್ ಪೊಲಾರ್ಡ್ ಸಹಾಯದಿಂದ ಇತಿಹಾಸ ಸೃಷ್ಟಿಸಿತು.

ಪಂದ್ಯದ 14 ಪ್ರಮುಖ ಅಂಶಗಳು ಇಲ್ಲಿವೆ ನೋಡಿ…
1- ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ವಿರುದ್ಧ ತಮ್ಮ 19 ನೇ ಗೆಲುವು ದಾಖಲಿಸಿದೆ, ಇದುವರೆಗೆ ಉಭಯ ತಂಡಗಳ ನಡುವೆ ಒಟ್ಟು 31 ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ 19 ಮುಂಬೈ ಗೆದ್ದರೆ, ಚೆನ್ನೈ 12 ಪಂದ್ಯಗಳನ್ನು ಗೆದ್ದಿದೆ.

2- ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಐಪಿಎಲ್ 2021 ರಲ್ಲಿ 4 ಪಂದ್ಯಗಳನ್ನು ಗೆದ್ದಿದೆ, ಇದರೊಂದಿಗೆ ಮುಂಬೈ 4 ಅಥವಾ ಹೆಚ್ಚಿನ ಪಂದ್ಯಗಳನ್ನು ಗೆದ್ದ ಐಪಿಎಲ್‌ ನ ನಾಲ್ಕನೇ ತಂಡವಾಯಿತು, ಚೆನ್ನೈ ಋತುವಿನ ಎರಡನೇ ಸೋಲನ್ನು ಅಪ್ಪಿತು, ಚೆನ್ನೈನ ಸೋಲಿನೊಂದಿಗೆ ಈಗ ಎಲ್ಲಾ ತಂಡಗಳು ಈ ಋತುವಿನಲ್ಲಿ ಕನಿಷ್ಠ 2 ಪಂದ್ಯಗಳನ್ನು ಸೋತಂತಾಗಿವೆ.

3- ಈ ಪಂದ್ಯವನ್ನು ಗೆಲ್ಲಲು ಮುಂಬೈ ತಮ್ಮ ಐಪಿಎಲ್ ಇತಿಹಾಸದ ಅತಿದೊಡ್ಡ ರನ್ ಚೇಸ್ ಮಾಡಿತು. ಐಪಿಎಲ್‌ನಲ್ಲಿ ಅತ್ಯಧಿಕ ಯಶಸ್ವಿ ರನ್ ಚೇಸ್ ಹೀಗಿವೆ…
1) 224 – RR Vs KXIP – 2020, 2) 219 – MI Vs CSK – 2021, 3) 215 – RR Vs DC – 2008, 4) 209 – DD Vs GL – 2017

4- ಇಂದಿನ ಪಂದ್ಯದಲ್ಲಿ ಚೆನ್ನೈ ಬ್ಯಾಟ್ಸ್‌ಮನ್‌ಗಳು ಮುಂಬೈ ವಿರುದ್ಧ ಒಟ್ಟು 16 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ, ಇದು ಮುಂಬೈ ವಿರುದ್ಧ ತಂಡವೊಂದು ಗಳಿಸಿದ ಅತಿ ಹೆಚ್ಚು ಸಿಕ್ಸರ್‌ಗಳು.
5- ಈ ಪಂದ್ಯದಲ್ಲಿ ಪೊಲಾರ್ಡ್ ತಮ್ಮ ವೃತ್ತಿಜೀವನದ 16 ನೇ ಅರ್ಧಶತಕವನ್ನು ಗಳಿಸಿದರು, ಅವರು ಪಂದ್ಯದಲ್ಲಿ 34 ಎಸೆತಗಳಲ್ಲಿ 87 ರನ್ ಗಳಿಸಿದರು.
6- ಮುಂಬೈ ಇಂಡಿಯನ್ಸ್ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಚೆನ್ನೈ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 56 ರನ್ ನೀಡಿದ್ದಾರೆ, ಇದು ಅವರ ಐಪಿಎಲ್ ವೃತ್ತಿಜೀವನದ ಅತ್ಯಂತ ದುಬಾರಿ ಬೌಲಿಂಗ್ ಆಗಿದೆ.

7- ಅಂಬಾಟಿ ರಾಯುಡು ತಮ್ಮ ಐಪಿಎಲ್ ವೃತ್ತಿಜೀವನದ 20 ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು, ರಾಯಡು 27 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ ಒಟ್ಟು 72 ರನ್ ಗಳಿಸಿದರು.
8- ಅಂಬಾಟಿ ರಾಯುಡು ಚೆನ್ನೈ ಪರ ವೇಗವಾಗಿ ಅರ್ಧಶತಕ ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಸುರೇಶ್ ರೈನಾ ಹಾಗೂ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಪರ ವೇಗವಾಗಿ ಅರ್ಧಶತಕ ಬಾರಿಸಿದ ಇತರ ಇಬ್ಬರು. ಚೆನ್ನೈ ತಂಡದಲ್ಲಿ ವೇಗವಾಗಿ ಅರ್ಧಶತಕ ಗಳಿಸಿದವರು…

16 ಎಸೆತ ಸುರೇಶ್ ರೈನಾ (2014), 20 ಎಸೆತ ಧೋನಿ (2012), 20 ಎಸೆತ ಅಂಬಾಟಿ ರಾಯುಡು (2021), 21 ಎಸೆತ ಸ್ಯಾಮ್ ಬಿಲ್ಲಿಂಗ್ಸ್ (2018)

9- ಮುಂಬೈನ ಸ್ಟಾರ್ ಕ್ರಿಕೆಟಿಗ ಪೊಲಾರ್ಡ್ ಇಂದಿನ ಪಂದ್ಯದಲ್ಲಿ 17 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದು, ಈ ಋತುವಿನಲ್ಲಿ ಅವರು ಅತಿ ವೇಗದ ಅರ್ಧಶತಕ ಗಳಿಸಿದ ಆಟಗಾರರಾಗಿದ್ದಾರೆ. ಐಪಿಎಲ್ 2021 ರಲ್ಲಿ ವೇಗದ ಅರ್ಧಶತಕ ಗಳಿಸಿದವರು… 1 ಪೊಲಾರ್ಡ್ 17 ಬಾಲ್ Vs ಸಿಎಸ್ಕೆ, 2 ಪೃಥ್ವಿ ಶಾ 18 ಬಾಲ್ Vs ಕೆಕೆಆರ್, 3 ಅಂಬಾಟಿ ರಾಯುಡು – 20 ಬಾಲ್ vs ಮುಂಬೈ

10- ಮುಂಬೈ ವಿರುದ್ಧದ ಪಂದ್ಯದಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಂಬಾಟಿ ರಾಯುಡು ಕೂಡ ಸೇರಿಕೊಂಡರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಹೆಚ್ಚಿನ ಸಿಕ್ಸರ್ ಭಾರಿಸಿದವರು…
10 – ಆಡಮ್ ಗಿಲ್‌ಕ್ರಿಸ್ಟ್ (2008 ರಲ್ಲಿ), 8 – ಯೂಸುಫ್ ಪಠಾಣ್ (2010 ರಲ್ಲಿ), 8 – ಆಂಡ್ರೆ ರಸ್ಸೆಲ್ (2019 ರಲ್ಲಿ), 7 – ಅಂಬಾಟಿ ರಾಯುಡು (ನಿನ್ನೆ)

11- ಚೆನ್ನೈ ವಿರುದ್ಧ ಅತಿ ವೇಗದ ಅರ್ಧಶತಕ ದಾಖಲೆಯನ್ನು ಪೊಲಾರ್ಡ್ ಹೊಂದಿದ್ದಾರೆ.
ಚೆನ್ನೈ ವಿರುದ್ಧ ವೇಗವಾಗಿ ಅರ್ಧಶತಕ ಗಳಿಸಿದ ಇತರರು… 17 ಎಸೆತಗಳು – ಪೊಲಾರ್ಡ್, (ನಿನ್ನೆ), 19 ಎಸೆತಗಳು – ಕೆ.ಎಲ್ ರಾಹುಲ್ (ಮೊಹಾಲಿ, 2019), 19 ಎಸೆತಗಳು – ಸಂಜು ಸ್ಯಾಮ್ಸನ್.
12- ಸುರೇಶ್ ರೈನಾ ತಮ್ಮ ಐಪಿಎಲ್ ವೃತ್ತಿಜೀವನದ 200 ನೇ ಪಂದ್ಯವನ್ನು ಆಡಿದರು, ರೈನಾ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐಪಿಎಲ್‌ನಲ್ಲಿ 200 ಪಂದ್ಯಗಳನ್ನು ಆಡಿರುವ ಕ್ರಿಕೆಟಿಗರು…
211– ಧೋನಿ, 207- ರೋಹಿತ್ ಶರ್ಮಾ, 203– ದಿನೇಶ್ ಕಾರ್ತಿಕ್, 200– ಸುರೇಶ್ ರೈನಾ

13- ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಮೈದಾನಕ್ಕೆ ಬಂದ ಕೂಡಲೇ 350 ಟಿ-20 ಪಂದ್ಯಗಳನ್ನು ಆಡಿರುವ ಭಾರತೀಯ ಕ್ರಿಕೆಟಿಗರಾದರು. ಟಿ 20 ಪಂದ್ಯಗಳನ್ನು ಅತಿ ಹೆಚ್ಚು ಆಡಿರುವ ಇತರೆ ಭಾರತೀಯ ಕ್ರಿಕೆಟಿಗರು…
350 – ರೋಹಿತ್ ಶರ್ಮಾ, 338 – ಧೋನಿ, 331 – ಸುರೇಶ್ ರೈನಾ, 317 – ದಿನೇಶ್ ಕಾರ್ತಿಕ್, 311 – ವಿರಾಟ್ ಕೊಹ್ಲಿ

14- ಮುಂಬೈ ಇಂಡಿಯನ್ಸ್ ಪಂದ್ಯದ ಗೆಲುವಿನೊಂದಿಗೆ 200 ಕ್ಕೂ ಹೆಚ್ಚು ಗುರಿಯನ್ನು ಬೆನ್ನಟ್ಟುವ ಮೂಲಕ ಗೆದ್ದ 7 ನೇ ತಂಡವಾಯಿತು. 200+ ರನ್‌ ಗಳ ಗುರಿಯನ್ನು ತಲುಪಿರುವ ಇತರ ತಂಡಗಳು… 3 ಸಲ – ಪಂಜಾಬ್, 3 ಸಲ – ಚೆನ್ನೈ, 2 ಸಲ – ರಾಜಸ್ಥಾನ, 2 ಸಲ – ಕೋಲ್ಕತಾ 1 ಸಲ – ದೆಹಲಿ, 1 ಸಲ – ಆರ್‌ಸಿಬಿ, 1 ಸಲ – ಮುಂಬೈ, 0 ಸಲ – ಹೈದರಾಬಾದ್ (ಅತಿ ಹೆಚ್ಚು 199)
-Team Infotrend