ನಾಲ್ಕು ಸಾವಿರ ಮಹಿಳೆಯರ ಜೊತೆ ಮ’ಲಗಿದಂವ ಕೊನೆಗೆ ಏನಾದ ನೋಡಿ…
ಇವನೊಬ್ಬ ದೊಡ್ಡ ರಿಯಲ್ ಎಸ್ಟೆಟ್ ಉದ್ಯಮಿ, ಜೊತೆಗೆ ಮಧ್ಯ ವ್ಯಾಪಾರವೂ ಇತ್ತು. ಮಿಲಿಯನ್ ಗಟ್ಟಲೆ ಹಣ ಗಳಿಸಿದ್ದ, ಆದರೆ ಅದರಲ್ಲಿ ಬಹುಭಾಗವನ್ನು ಮಹಿಳೆಯರಿಗಾಗಿಯೇ ಖರ್ಚು ಮಾಡುತ್ತಿದ್ದ. ಆತನೇ ಹೇಳಿಕೊಂಡ ಪ್ರಕಾರ ಆತ ಸುಮಾರು ನಾಲ್ಕು ಸಾವಿರ ಮಹಿಳೆಯರ ಜೊತೆ ಮ’ಲಗಿ ಎದ್ದಿದ್ದ! ಜಪಾನ್ ನ ಈ ವ್ಯಕ್ತಿಯ ಹೆಸರು ಕೊಸುಕೆ ನಝಾಕಿ ಅಂತ, ಆದರೆ ಆತ ತನ್ನನ್ನು ತಾನು ಡಾನ್ ಜಾನ್ ಎಂದು ಕರೆದುಕೊಳ್ಳುತ್ತಿದ್ದ, ಹಾಗೆಂದರೆ ರಸಿಕ, ಚಪಲಗಾರ ಅಂತ!
ನೀವ್ ನಂಬ್ತಿರೊ ಇಲ್ವೊ, 77 ವರ್ಷದ ಈ ವ್ಯಕ್ತಿಗೆ ಇದುವರೆಗೆ ತಾನು ಎಷ್ಟು ಮದುವೆಯಾಗಿದ್ದೀನಿ ಅಂತ ಕೂಡ ನೆನಪಿಲ್ಲ! ಮದುವೆಯಾಗುವುದು – ವಿಚ್ಚೇದನ ನೀಡುವುದು ಅವನ ಚಟವಾಗಿತ್ತು. ಇತ್ತೀಚೆಗೆ ಕೇವಲ 22 ವರ್ಷ ಹುಡುಗಿಯನ್ನು ಆತ ಮದುವೆಯಾಗಿದ್ದ! ಅಂದರೆ ಅವನಿಗೆ ಹಾಗೂ ಆಕೆಗೆ ಬರೊಬ್ಬರಿ 55 ವರ್ಷ ವ್ಯತ್ಯಾಸ!
ಆಕೆಯ ಜೊತೆ ಇವನು ಬಾಳಿದ್ದು ಕೇವಲ ಒಂದು ತಿಂಗಳು ಮಾತ್ರ. ಆದರೆ ಈ ಸಲ ಅವನು ವಿಚ್ಚೇದನ ಕೊಡಲಿಲ್ಲ, ಬದಲಿಗೆ ಆಕೆಯೇ ಅವನಿಗೆ ಈ ಲೋಕದಿಂದ ವಿಚ್ಚೇದನ ಕೊಡಿಸಿದಳು! ಹೌದು, ಆಕೆಯೇ ಆತನನ್ನು ಮು’ಗಿಸಿ ಹಾಕಿದ್ದಾಳೆ, ತಂಪು ಪಾನೀಯದಲ್ಲಿ ಅಧಿಕ ಪ್ರಮಾಣದ ಮ’ತ್ತು ಬರಿಸುವ ಔ’ಷ’ಧಿ ಹಾಕಿ ಅವನಿಗೆ ಪರಲೋಕದ ದಾರಿ ತೋರಿಸಿದ್ದಾಳೆ.

ಅಕೆಯ ಹೆಸರು ಸಕಿ ಸುಡೊ ಅಂತ, ಬಹುಶ ಇವನು ಇರೊ ಬರೊ ಆಸ್ತಿಯನ್ನೆಲ್ಲ ಪರರಿಗೆ ಇಟ್ಟು ನನ್ಮ ಕೈಗೆ ಚಿಪ್ಪು ಕೊಡುತ್ತಾನೆ ಅನ್ನೊ ಕಾರಣಕ್ಕೆ ಮು’ಗಿಸಿಬಿಟ್ಳು ಅನಿಸುತ್ತದೆ. ಅಂಥ ಔಷಧದ ಬಗ್ಗೆ ಕೆಲದಿನಗಳ ಮೊದಲು ಆಕೆ ಆನ್ ಲೈನ್ನಲ್ಲಿ ಸರ್ಚ್ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ನಾಝಾಕಿ ಡೈಲಿ ಬ್ಲಾಗ್ ಬರೆಯುತ್ತಿದ್ದು, ಅದರಲ್ಲಿ ತಾನು ಹಲವು ಮಹಿಳೆಯರ ಜೊತೆ ಮ’ಲಗೆದ್ದ ಬಗ್ಗೆ ದಾಖಲಿಸಿದ್ದಾನೆ. ಹಾಗೆಯೇ ತನ್ನ ಹೊಸ ಪತ್ನಿ ದುಡ್ಡಿನ ಆಸೆಗಾಗಿ ನನ್ನನ್ನು ಮದುವೆಯಾಗಿರಲಿಕ್ಕಿಲ್ಲ ಎಂದು ಆಕೆಯನ್ನು ನಂಬಿದ್ದ. ಆದರೆ ಆಕೆ ನಂಬಿಸಿ ಮೋಸ ಮಾಡಿದಳು.
ಈ ನಝಾಕಿ 2016 ರಲ್ಲಿ ತನ್ನ ಆತ್ಮಚರಿತ್ರೆ ಕೂಡ ಪ್ರಕಟಿಸಿದ್ದ, ಅದರ ಹೆಸರು ಡಾನ್ ಜಾನ್ ಆಫ್ ಕಿಶು ಅಂತ. ಅದರಲ್ಲಿ ಆತ ತಾನು ದುಡಿಯುವುದೇ ಮಹಿಳೆಯರ ಜೊತೆ ಮಲಗಲು ಎಂದು ಬರೆದುಕೊಂಡಿದ್ದ. ವಿದ್ಯಾರ್ಥಿನಿಯರು, ಗೃಹಿಣಿಯರು, ಆತನ ಕಂಪನಿಯ ಕೆಲಸಗಾರರು ಹೀಗೆ ಎಲ್ಲರನ್ನೂ ಆತ ತನ್ನ ಬಲೆಗೆ ಬೀಳಿಸಿಕೊಂಡಿದ್ದ.

ಆತನೇ ಹೇಳಿಕೊಂಡಿರುವ ಪ್ರಕಾರ ಆತ ಮಹಿಳೆಯರಿಗಾಗಿ ಇದುವರೆಗೆ ಅಂದಾಜು ಮೂರು ಬಿಲಿಯನ್ ಯೆನ್ ಅಂದರೆ ಸುಮಾರು 203 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದ್ದ! ಕೊನೆಗೆ ಅದೇ ಕಾರಣಕ್ಕಾಗಿ ಮಹಿಳೆಯಿಂದಲೇ ಶಿವನ ಪಾದ ಸೇರಿದ! ಹೊಸ ಹೆಂಡತಿ ಎರಡು ತಿಂಗಳ ಹಿಂದೆ ತಾನೆ ಟೋಕಿಯೊ ವಿಮಾನ ನಿಲ್ದಾಣದಲ್ಲಿ ಪರಿಚಯವಾಗಿದ್ದಳು, ಆ ನಂತರ ಪರಿಚಯ ಪ್ರೇಮಕ್ಕೆ (!) ತಿರುಗಿ ಒಂದು ತಿಂಗಳ ಹಿಂದೆ ಮದುವೆಯಾಗಿದ್ದರು.
-Team Infotrend