ಅಚ್ಚರಿಯಾದರೂ ಸತ್ಯ : ಈ ನದಿಯಲ್ಲಿ ನೀರಿನೊಂದಿಗೆ ಚಿನ್ನ ಹರಿಯುತ್ತದೆ! ಜನರು ಶ್ರೀಮಂತರಾಗಬೇಕೆಂದು ಇಲ್ಲಿಗೆ ಬರುತ್ತಾರೆ!

ಜಗತ್ತಿನಲ್ಲಿ ವಿವಿಧ ರೀತಿಯಲ್ಲಿ ಯೋಚಿಸುವ ಜನರಿದ್ದಾರೆ, ಕೆಲವರು ಮನೆಯಲ್ಲಿಯೇ ಇರುವುದನ್ನು ಇಷ್ಟ ಪಟ್ಟರೆ ಇನ್ನೂ ಕೆಲವರು ಯಾವಾಗಲೂ ಸ್ವಲ್ಪ ಸಮಯ ಸಿಕ್ಕರೆ ಸಾಕು ಪ್ರಯಾಣ ಮಾಡಲು ಯೋಚಿಸುತ್ತಿರುತ್ತಾರೆ. ಇನ್ನೂ ಈ ಪ್ರಯಾಣ ಮಾಡುವ ಹವ್ಯಾಸ ಕೆಲವು ಬಾರಿ ಬಹಳ ಉಪಯೋಗ ತಂದು ಕೊಡುತ್ತದೆ ಏಕೆಂದರೆ ಇವರು ಹೊರಜಗತ್ತಿಗೆ ಗೊತ್ತಿರದ ಕೆಲವು ಸ್ಥಳಗಳನ್ನು ತೋರಿಸಿಕೊಡುತ್ತಾರೆ.

ಹೀಗೆಯೇ ಕೆನಡಾ ದೇಶದಲ್ಲಿನ ಒಂದು ನದಿಯನ್ನು ಕೂಡ ಇಂತಹದೆ ಪ್ರಯಾಣಿಕರು ಹಿಂದೆ ಪತ್ತೆ ಮಾಡಿದರು, ಅಂದಿನಿಂದ ಇಂದಿನವರೆಗೂ ಈ ಒಂದು ಸಿಟಿ ಪ್ರಸಿದ್ದ ಪ್ರವಾಸಿ ತಾಣವಾಗಿ ಬದಲಾಗಿದೆ. ಆ ಒಂದು ನದಿಯಲ್ಲಿ ಕೇವಲ ನೀರು ಮಾತ್ರ ಬರುವುದಿಲ್ಲ ಬದಲಾಗಿ ಚಿನ್ನವು ಕೂಡ ಸಿಗುತ್ತದೆ! ಶ್ರೀಮಂತರಾಗಲೂ ಜನರು ಇಲ್ಲಿಗೆ ಬರುತ್ತಾರೆ! ಬನ್ನಿ ಹಾಗಾದ್ರೆ ಎಲ್ಲಿದೆ ಆ ನದಿ ಅದರಲ್ಲಿ ಚಿನ್ನ ಹೇಗೆ ಸಿಗುತ್ತದೆ ಎಂಬ ಒಂದು ರೋಚಕ ಕಥೆಯನ್ನು ನೋಡೋಣ…

ಅಲ್ಲಿಗೆ ಪ್ರಯಾಣ ಬೆಳೆಸಿದರೆ ಶ್ರೀಮಂತರಾಗುವ ಅವಕಾಶ ಸಿಗುತ್ತದೆ ಎಂಬುದೇ ಈ ಸಿಟಿ ಇಷ್ಟೊಂದು ಪ್ರವಾಸಿಗರನ್ನ ತನ್ನತ್ತ ಸೆಳೆದುಕೊಳ್ಳಲು ಕಾರಣವಾಗಿದೆ. ‘ಡಾಸನ್ ಎಂಬುದು ಕೆನಡಾ ದೇಶದ ಒಂದು ಪುಟ್ಟ ನಗರ’ ಅದು ಯುಕೋನ್ ಎಂಬ ನದಿಯ ದಂಡೆಯಲ್ಲಿ ಸ್ಥಿತಗೊಂಡಿದೆ ಇಲ್ಲಿನ ಜನಸಂಖ್ಯೆ ಬಹಳ ಕಡಿಮೆ.

1896 ರಲ್ಲಿ ಈ ನದಿಯಲ್ಲಿ ಬಂಗಾರ ಸಿಗುತ್ತದೆ ಎಂಬ ಸುದ್ದಿ ಬರುವ ಮೊದಲು ಇಲ್ಲಿ ಕೇವಲ 1500 ಜನರು ಮಾತ್ರ ವಾಸವಿದ್ದರು.  1896 ನೇ ಇಸ್ವಿಯಲ್ಲಿ ಜಾರ್ಜ್ ಕಾರ್ಮೆಕ್ ಮತ್ತು ಜಿಮ್ ಮೆಸನ್ ಅವರು ಮೊದಲಬಾರಿಗೆ ಈ ನದಿಯಲ್ಲಿ ಚಿನ್ನ ಸಿಗುತ್ತದೆ ಎಂದು ಹೇಳಿದರು. 1898 ರಲ್ಲಿ ಇಲ್ಲಿ ಚಿನ್ನ ಸಿಗುವುದು ಕನ್ಫರ್ಮ್ ಆದ ಕೂಡಲೇ ರಾತ್ರೋ ರಾತ್ರಿ 1500 ಇದ್ದ ಜನಸಂಖ್ಯೆ 3000 ಆಗಿತ್ತು!

ಅವರಲ್ಲಿ ಕೆಲವರು ಚಿನ್ನ ತೆಗೆಯುವವರು ಇನ್ನೂ ಕೆಲವರು ಚಿನ್ನದ ಆಭರಣಗಳನ್ನು ತಯಾರಿಸುವವರಾಗಿದ್ದರು, ಉಳಿದವರು ಅಲ್ಲಿನ ಮೂಲ ನಿವಾಸಿಗಳಾಗಿದ್ದರು. ಡಾಸನ್ ಸಿಟಿಯ ಮೇಯರ್ ವೇನ್ ಫೋಟೋರಕ ಅವರ ಪ್ರಕಾರ ಈ ನಗರವು ಕೆನಡಾದ ಎಲ್ಲಾ ನಗರಗಳಿಗಿಂತ ಭಿನ್ನಾವಾಗಿದೆಯಂತೆ, ಇಲ್ಲಿ ತರ ತರನಾದ ಜನರು ವಾಸಿಸುತ್ತಾರೆ.

ಈ ನಗರವು ಬೆಟ್ಟ ಗುಡ್ಡಗಳಿಂದ ಅವೃತವಾಗಿದೆ ಈ ಬೆಟ್ಟ ಗುಡ್ಡಗಳು ಅಪಾಯಕಾರಿ ಕಾಡು ಪ್ರಾಣಿಗಳಿಂದ ಇಲ್ಲಿನ ಜನರನ್ನು ರಕ್ಷಿಸುತ್ತದೆ. ಇನ್ನೂ ಈ ನಗರಕ್ಕೆ ನೀವು ಹೈ ವೇ ಮೂಲಕ ಹೋಗುವುದಾದರೆ ವೈಟ್ ಹಾರ್ಸ್ ನಿಂದ ಇಲ್ಲಿಗೆ 7 ಘಂಟೆಗಳ ಪ್ರಯಾಣ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಬರೋಬ್ಬರಿ 533 ಕಿಲೋಮೀಟರ್ ದೂರ ಇದೆ.

‘ಯುಕಾನ್’ ನದಿಯ ಪ್ರದೇಶವು ಕೆನಡಾದಲ್ಲಿಯೇ ಅತೀ ಕಡಿಮೆ ಜನಸಂಖ್ಯೆಯನ್ನು ಹೊಂದಿದಂತ ಪ್ರದೇಶವಾಗಿದೆ. ಇಲ್ಲಿರುವವರಲ್ಲಿ ಹೆಚ್ಚಿನವರು ವೈಟ್ ಹಾರ್ಸ್ ನಲ್ಲಿಯೇ ಇರುತ್ತಾರೆ. ವೈಟ್ ಹಾರ್ಸ್ ನಿಂದ ಡಾಸನ್ ನಗರ ತಲುಪುವವರೆಗೆ ನಿಮಗೆ ಸಾಕಷ್ಟು ಪ್ರೇಕ್ಷಣಿಯ ಸ್ಥಳಗಳು ಸಿಗುತ್ತವೆ. ಪ್ರತಿವರ್ಷ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರವಾಸಕ್ಕೆಂದು ಬರುತ್ತಾರೆ ಇವರಲ್ಲಿ ಕೆಲವರು ಇಲ್ಲಿನ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಬಂದರೆ ಇನ್ನೂ ಕೆಲವರು ಇಲ್ಲಿಗೆ ಶ್ರೀಮಂತರಾಗಲೂ ಬರುತ್ತಾರೆ.

ಇಲ್ಲಿನ ನದಿ ದಂಡೆಯ ಮೇಲೆ ಟೆಂಟ್ ಹಾಕಿಕೊಂಡು ಇದ್ದು, ನದಿ ನೀರನ್ನು ಸಂಗ್ರಹಿಸಿ ಅದನ್ನು ಬರ್ಫ್ ಮಾಡುತ್ತಾರೆ, ಅದರಲ್ಲಿ ಚಿನ್ನದ ವಿವಿಧ ಸಣ್ಣ ಸಣ್ಣ ತುಕಡಿಗಳು ಸಿಗುತ್ತವೆ. ಇಲ್ಲಿ ಚಿನ್ನ ಹುಡುಕುವವರಿಗೆ ಯಾವುದೇ ರೀತಿಯಾದ ಶರತ್ತುಗಳು ಹಾಗೂ ಕಡಿವಾಣ ಇಲ್ಲ. ಯಾರು ಬೇಕಾದರೂ ಎಷ್ಟು ಬೇಕಾದರೂ ತೆಗೆಯಬಹುದು!

ಇನ್ನೂ ಹೇಳಬೇಕೆಂದರೆ ನದಿ ದಂಡೆಯ ಜಮೀನನ್ನು ಜನರು ಖರೀದಿ ಮಾಡುತ್ತಾರೆ, ಮತ್ತು ಆ ಖರೀದಿ ಮಾಡಿದ ಜಾಗಕ್ಕೆ ಅವರೇ ಮಾಲೀಕರು, ಅಲ್ಲಿ ಬೇರೆ ಯಾರು ಚಿನ್ನ ತೆಗೆಯುವಂತಿಲ್ಲ. ಚಿನ್ನ ತೆಗೆಯಲು ಯಂತ್ರಗಳನ್ನು ಕೂಡ ಉಪಯೋಗಿಸಬಹುದು. ಇಲ್ಲಿ ಚಿನ್ನ ತೆಗೆಯುವುದನ್ನು ಕಲಿತು ಜೀವನದಲ್ಲಿ ಯಶಸ್ವಿಯಾಗಿ ಇಲ್ಲಿಯ ಸ್ಥಳದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇರುವವರು ಮಿಷಲ್ ಎಂಬ ಮಹಿಳೆ.

ಈ ಮಿಷಲ್ ಎನ್ನುವವರಿಗೆ ಬೇರೆ ಬೇರೆ ಪ್ರದೇಶಗಳಿಗೆ ಹೋಗುವುದು ಅಲ್ಲಿನ ವಿಶೇಷತೆಯನ್ನು ತಿಳಿದುಕೊಳ್ಳುವುದೆಂದರೆ ಒಂದು ಹವ್ಯಾಸವಿದ್ದಂತೆ. ಇವರಿಗೆ ಯಾರೋ ಪರಿಚಿತರು ಈ ಚಿನ್ನದ ನದಿಯ ಬಗ್ಗೆ ತಿಳಿಸಿದ ಕೂಡಲೇ ಅವರು ಡಾಸನ್ ನಗರಕ್ಕೆ 1977 ರಲ್ಲಿ ಬಂದರು. ಅಲ್ಲಿ ಅವರು ಕೂಡ ಚಿನ್ನ ತೆಗೆಯಲು ಶುರು ಮಾಡಿದರು. ಅಂದಿನಿಂದ ಇಂದಿನವರೆಗೂ ಅಲ್ಲಿಗೆ ಬರುವ ಪ್ರವಾಸಿಗರಲ್ಲಿ ಆಸಕ್ತರಿಗೆ ಚಿನ್ನ ತೆಗೆಯುವದರ ಬಗ್ಗೆ ತಿಳಿಸಿಕೊಡುತ್ತಾರೆ.

ಮಿಷಲ್ ಅವರು ಅಲ್ಲಿಯೇ ಅಧಿಕಾರಿಗಳಿಗಾಗಿ ಇರುವ ಕ್ಯಾಬಿನ್ ಗಳಲ್ಲಿಯೇ ಇರುತ್ತಾರೆ. ಅದೇ ನದಿಯ ನೀರನ್ನು ಕೂಡ ಬಳಸಿ ಅಡುಗೆ ಮಾಡಿ ತಿನ್ನುತ್ತಾರೆ, ಅಲ್ಲಿಂದ ಸಮೀಪದ ನಗರಕ್ಕೆ ಬೇರೆ ಕೆಲಸಕ್ಕೆ ಹೋಗುತ್ತಾರೆ, ರಜೆ ಬಂತೆಂದರೆ ಹವ್ಯಾಸಕ್ಕಾಗಿ ಚಿನ್ನ ತೆಗೆಯುತ್ತಾರೆ. ಅಲ್ಲಿಯೇ ಇರುವ ಬೆಟ್ಟ ಗುಡ್ಡಗಳ ರಮಣೀಯ ಪ್ರದೇಶಗಳಿಗೆ ತೆರಳಿ ಸಮಯ ಕಳೆಯುತ್ತಾರೆ. ಅವರು ತಮ್ಮ ಸಂಬಂಧಿಗಳು ಹಾಗೂ ಮನೆಯನ್ನು ಬಿಟ್ಟು ದೂರ ಇದ್ದರೂ ಕೂಡ ಇಲ್ಲಿ ಆರಾಮಾಗಿ ಇದ್ದಾರೆ.

ಮಿಶೇಲ್ ಅವರಿಗೆ ಈ ಇಲಾಖೆಯೇ ಸ್ವಂತ ಮನೆಯಂತಾಗಿದೆ, ಇಲ್ಲಿ ಎಲ್ಲರೂ ಒಂದು ಸಮುದಾಯದಂತೆ ಕೆಲಸ ಮಾಡುತ್ತಾರೆ ಇವರಿಗೆ 1981 ರಲ್ಲಿ ಚಿನ್ನ ತೆಗೆಯುವವರಲ್ಲಿ ಕೆಲಸ ಸಿಕ್ಕಿತು.  1984 ರಲ್ಲಿ ‘ವಮೆನ್ಸ್  ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಗೋಲ್ಡ್’ ಸ್ಪರ್ಧೆಯ ಆಯೋಜನೆ ಮಾಡುತ್ತಾರೆ. ಈ ಸ್ಪರ್ಧೆಯಲ್ಲಿ ಮಿಷಲ್ ಅವರು ಯಶಸ್ವಿಯಾದರು.

‘ಯುಕಾನ್ ಓಪನ್ ಗೋಲ್ಡ್ ಪೈನಿಂಗ್’ ಸ್ಪರ್ಧೆಯಲ್ಲಿ ಕೂಡ ಮಿಷಲ್ ಅವರು ಭಾಗವಹಿಸಿದ್ದರು, ವಿಶೇಷ ಎಂದರೆ ಆ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಹಾಗೂ ಏಕೈಕ ಮಹಿಳೆ ಈ ಮಿಷಲ್, ಮತ್ತು ಇವರು ಸ್ಪರ್ದಿಸಿದ್ದರಲ್ಲಿ ಹೆಚ್ಚಿನ ಸ್ಪರ್ಧಿಗಳು ಇವರೊಂದಿಗೆ ಕೆಲಸ ಮಾಡಿದವರೇ ಆಗಿದ್ದರು. ಈ ಸ್ಪರ್ಧೆಯಲ್ಲಿ ಇವರೇ ವಿಜೇತರಾದರು!

ಈ ಸ್ಪರ್ಧೆಯಲ್ಲಿ ಯುಕಾನ್ ಪುಸ್ತಕ ವಿಜೇತರಾದ ಮೊದಲ ಹಾಗೂ ಏಕೈಕ ಮಹಿಳೆ ಇವರೇ ಆಗಿದ್ದಾರೆ. ಇದೆ ರೀತಿ ಅವರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಲೇ ಇದ್ದರು. ಹೀಗಿರುವಾಗ ಅವರು ಇದೆ ಅನುಭವದ ಮೇಲೆ ಲಂಡನ್ ಮ್ಯೂಸಿಯಂ ನಲ್ಲಿ ಕೆಲಸ ಮಾಡಲು ಆರಂಭಿಸಿದರು. ಹೀಗೆ ಈ ಚಿನ್ನದ ನದಿಯಿಂದಾಗಿ ಸಾಮಾನ್ಯ ಮಹಿಳೆಯಾಗಿದ್ದ ಮಿಷಲ್ ಅವರು ಲಂಡನ್ ಮ್ಯೂಸಿಯಂ ನಲ್ಲಿ ಕೆಲಸ ಗಿಟ್ಟಿಸುವಷ್ಟರಮಟ್ಟಿಗೆ ಬೆಳೆದರು.

ಇನ್ನೂ ಇಂದಿಗೂ ಈ ನದಿಯಲ್ಲಿ ಮೈನಿಂಗ್ ನಡೀತಾನೇ ಇದೆ. ಒಟ್ಟು 196 ಗೋಲ್ಡ್ ಮೈನಿಂಗ್ ಸೈಟ್ ಗಳಲ್ಲಿ 124 ಸೈಟ್ ಗಳು ಡಾಸನ್ ನಗರದಲ್ಲಿಯೇ ಇವೆ. ‘ಬೋನಂಜ ಕ್ರಿಕ್’ ಜಿಲ್ಲೆಯಲ್ಲಿರುವ ಆ ಮೂಲ ಸೈಟ್ ನಿಂದಲೇ ಬಂಗಾರದ ಮೂಲವಿರುವಿದು. ಮಿಷಲ್ ಅವರ ಪ್ರಕಾರ ಈ ಬಂಗಾರದ ಶೋಧನೆ ಇನ್ನೂ ಬಹಳ ದಿನಗಳವರೆಗೆ ನಡೆಯುತ್ತದಂತೆ.

-ಮಂಜುನಾಥ್