Coronavirus| ಕರೋನಾ ಲಸಿಕೆ ಸಿದ್ಧವಾಗಿದೆ, ಶೀಘ್ರದಲ್ಲೇ ಪೇಟೆಂಟ್ ಪಡೆಯಲಿದೆ; ಇಸ್ರೇಲ್ ರಕ್ಷಣಾ ಸಚಿವರ ಹೇಳಿಕೆ…..!

ನವದೆಹಲಿ: ಕೋವಿಡ್ -19 ವಿರುದ್ಧ ಪ್ರತಿಕಾರಕವನ್ನು ಅಭಿವೃದ್ಧಿ ಪಡಿಸಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಒಂದರ್ಥದಲ್ಲಿ, ಇಸ್ರೇಲ್ ಸಹ ಕೋವಿಡ್ -19 ಗೆ ಲಸಿಕೆ ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡಿದೆ. ಈ ಹಿಂದೆ, ಗ್ರೇಟ್ ಬ್ರಿಟನ್, ಯುಎಸ್ಎ, ಜರ್ಮನಿ ಮತ್ತು ಚೀನಾದಂತಹ ಕೆಲವು ದೇಶಗಳು ತಮ್ಮ ಸಂಶೋಧನಾ ಸಂಸ್ಥೆಗಳು ಶೀಘ್ರದಲ್ಲೇ ಕೋವಿಡ್ -19 ಲಸಿಕೆ ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಇಸ್ರೇಲ್ ಇನ್ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ರಿಸರ್ಚ ವಿಜ್ಞಾನಿಗಳು ಕೋವಿಡ್ -19 ವೈರಸ್ಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.


ಈ ಅಂಟಿಬೈಯೋಟಿಕ್ ದೇಹದಲ್ಲಿನ ಜೀವಾಣುಗಳ ಮೇಲೆ ದಾಳಿ ಮಾಡುತ್ತವೆ ಮತ್ತು ಆ ಜೀವಾಣುಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಈ ಮಾಹಿತಿಯನ್ನು ಇಸ್ರೇಲ್ ರಕ್ಷಣಾ ಸಚಿವ ನೆಫ್ತಾಲಿ ಬೆನೆಟ್ ಅವರಿಗೆ ಐಐಬಿಆರ್ ವಿಜ್ಞಾನಿಗಳು ಸೋಮವಾರ 4 ರಂದು ನೀಡಿದ್ದಾರೆ. ಈ ಸಂದರ್ಭದ ಮಾಹಿತಿ ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ

ಐಐಬಿಆರ್ ಮೂಲಕ ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಇಸ್ರೇಲ್ ರಕ್ಷಣಾ ಸಚಿವಾಲಯದ ಪ್ರಕಾರ ಇದನ್ನು ಪೇಟೆಂಟ್ ಮಾಡಿ ಕಾನೂನುಬದ್ಧವಾಗಿ ಮಾರಾಟ ಮಾಡಲಾಗುವದು ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

ಕಳೆದ ತಿಂಗಳು, ಐಐಬಿಆರ್ ಈ ಅಂಟಿಬೈಯೋಟಿಕ್ ಲಸಿಕೆ ಇಲಿಗಳ ಮೇಲೆ ಪರೀಕ್ಷಿಸುವುದಾಗಿ ತಿಳಿಸಲಾಗಿತ್ತು. ಸಂಶೋಧನೆಯ ಜೊತೆಗೆ, ಕರೋನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಿಂದ ಪ್ಲಾಸ್ಮಾವನ್ನು ಐಐಬಿಆರ್ ಸಂಗ್ರಹಿಸುತ್ತಿದೆ. ಮತ್ತೊಂದು ಇಸ್ರೇಲಿ ಸಂಸ್ಥೆಯಾದ ಮಿಗ್ವಾಕ್ಸ್ , ಕರೋನಾ ಲಸಿಕೆಯ ಅಭಿವೃದ್ಧಿಯ ಮೊದಲ ಹಂತವನ್ನು ಶೀಘ್ರದಲ್ಲೇ ಮಿಗುಯೆಲ್ ಗೆಲಿಲೀ ಸಂಶೋಧನಾ ಸಂಸ್ಥೆಯೊಂದಿಗೆ ಪೂರ್ಣಗೊಳಿಸಲಿದೆ ಎಂದು ತಿಳಿದುಬಂದಿದೆ.

ಇಂದು ಇಡೀ ಪ್ರಪಂಚವು ಕರೋನಾ ಸಾಂಕ್ರಾಮಿಕದಿಂದ ಬಳಲುತ್ತಿದೆ. ಈ ವೈರಸ್ ಇದುವರೆಗೆ 2 ಲಕ್ಷ 52 ಸಾವಿರ ಜನರ ಪ್ರಾಣವನ್ನು ಬಲಿ ಪಡೆದಿದೆ. ಈ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ 36 ಲಕ್ಷ 45 ಸಾವಿರಕ್ಕೆ ಏರಿದೆ. ಅಂದಾಜು 12 ಲಕ್ಷ ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಕನಿಷ್ಠ 70,000 ಜನರನ್ನು ಬಲಿ ತೆಗೆದುಕೊಂಡ ವೈರಸ್‌ನಿಂದ ಯುನೈಟೆಡ್ ಸ್ಟೇಟ್ಸ್‌ಗೆ ತೀವ್ರ ಪೆಟ್ಟು ಬಿದ್ದಿದೆ.