ಐಪಿಎಲ್ ನಲ್ಲಿ ಭಾಗಿಯಾಗಿರುವ ತಮ್ಮ ದೇಶದ ಆಟಗಾರರಿಗೆ ಶಾಕ್ ಕೊಟ್ಟ ಆಸ್ಟ್ರೇಲಿಯಾ ಪ್ರಧಾನಿ!

ಐಪಿಎಲ್‌ – 2021 ರಲ್ಲಿ ಭಾಗಿಯಾಗಿರುವ ಆಟಗಾರರಲ್ಲಿ ಮೊದಲಿನಿಂದಲೂ ಕೊರೊನ ಚಿಂತೆ ಕಾಡುತ್ತಿದೆ. ಅದೆಷ್ಟೇ ಮುನ್ನೆಚ್ಚರಿಕೆ ತಗೆದುಕೊಂಡಿದ್ದರೂ ಅವರ ಆತಂಕ ನಿವಾರಣೆಯಾಗಿಲ್ಲ, ಅದರಲ್ಲೂ ಇತ್ತೀಚೆಗೆ ಭಾರತದಲ್ಲಿ ಕೊರೋನ ಪ್ರಕರಣಗಳು ಮಿತಿಮೀರುತ್ತಿರುವುದರಿಂದ ಆಟಗಾರರು ಅದರಲ್ಲೂ ವಿದೇಶಿ ಆಟಗಾರರು ಚಿಂತಿತರಾಗಿದ್ದಾರೆ.

ಈಗ ಮತ್ತೆ ಹೊಸ ಸಮಸ್ಯೆ ಎದುರಾಗಿದ್ದು, ಐಪಿಎಲ್ ನಲ್ಲಿ ಭಾಗಿಯಾಗಿರುವ ಅವರ ದೇಶದ ಆಟಗಾರರನ್ನು ಕರೆತರಲು ವಿಶೇಷ ವಿಮಾನ ಕಳಿಸುವುದಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಶಾಕ್ ಕೊಟ್ಟಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ – ಭಾರತದ ನಡುವಿನ ವಿಮಾನಸಂಚಾರ ಸಂಪೂರ್ಣ ಬಂದ್ ಆಗಿದೆ. ಸಾಮಾನ್ಯವಾಗಿ ಅನ್ಯದೇಶದಲ್ಲಿರುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರುವುದು ಅಲ್ಲಿ ಸರ್ಕಾರದ ಜವಾಬ್ದಾರಿ, ಅದರೆ ತನ್ನ ದೇಶದ ಪ್ರಮುಖ ಕ್ರೀಡಾ ಪಟುಗಳನ್ನು ಕೂಡ ಕರೆತರಲು ಅಲ್ಲಿನ ಪ್ರಧಾನಿ ತಯಾರಿಲ್ಲ.

ಬಹುತೇಕ ದೇಶಗಳು ಭಾರತದೊಂದಿಗಿನ ಆಕಾಶ ಮಾರ್ಗ ಮುಚ್ಚಿವೆ. ಪರಸ್ಥಿತಿ ಹೀಗಿರುವಾಗ ಐಪಿಎಲ್ ನಲ್ಲಿ ಭಾಗಿಯಾಗಿರುವ ಆಸ್ಟ್ರೆಲಿಯಾ ಆಟಗಾರರು ತಮ್ಮ ದೇಶಕ್ಕೆ ಮರಳುವ ಕುರಿತು ಆತಂಕ ಎದುರಿಸುತ್ತಿದ್ದಾರೆ. ಮೊದಲೇ ಈ ಬಗ್ಗೆ ಭಯಬಿದ್ದಿದ್ದ ಆಸ್ಟ್ರೆಲಿಯಾದ ಆ್ಯಡಂ ಜಂಪಾ, ಕೇನ್ ರಿಚರ್ಡ್ಸನ್ ಐಪಿಎಲ್ ಬಿಟ್ಟು ತಮ್ಮ ದೇಶಕ್ಕೆ ಮರಳಿ ಹೋಗಿದ್ದಾರೆ.

ಇಲ್ಲೇ ಉಳಿದು ಆಡುತ್ತಿರುವ ಮ್ಯಾಕ್ಸವೆಲ್, ಡೆವಿಡ್ ವಾರ್ನರ್, ಸ್ಟಿವ್ ಸ್ಮಿತ್ ಸೇರಿದಂತೆ ಹಲವು ಆಟಗಾರರು ತಮ್ಮ ದೇಶಕ್ಕೆ ಮರಳುವುದು ಹೇಗೆಂದು ಯೋಚಿಸುತ್ತಿದ್ದಾರೆ. ಸದ್ಯ ಬಯೋಬಬಲ್ ನಲ್ಲಿ ಇರುವ ಆಟಗಾರರಿಗೆ ಯಾವುದೇ ಆತಂಕ ಇಲ್ಲ, ಆದರೆ ಒಂದು ಸಲ ಐಪಿಎಲ್ ಮುಗಿಯುತೆಂದರೆ ತೊಂದರೆಯಾಗುವುದು.

ಬಿಸಿಸಿಐ ಸಹಾಯ :
ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸವೆಲ್ ಬಿಸಿಸಿಐ ನಮಗೆ ಸಹಾಯ ಮಾಡಲಿದೆ ಎಂದು ನಂಬಿದ್ದಾರೆ. ಐಪಿಎಲ್ ಮುಗಿದ ಬಳಿಕ ಭಾರತ, ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಪ್ಲೆಯರ್ಸ್ ಜೊತೆ ಚಾರ್ಟರ್ಡ್ ವಿಮಾನದಲ್ಲಿ ಇಂಗ್ಲೆಂಡಿಗೆ ಹೋಗುವುದು ಮ್ಯಾಕ್ಸವೆಲ್ ಯೋಚನೆ. ಇದೇ ಜೂನ್ 18 ರಿಂದ ಇಂಗ್ಲೆಂಡಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಡೆಯಲಿದೆ.

ಅದರಲ್ಲಿ ಆಡಲು ಭಾರತ ಹಾಗೂ ನ್ಯೂಜಿಲ್ಯಾಂಡ್ ಇಂಗ್ಲೆಂಡಿಗೆ ಹೋಗುತ್ತಾರೆ. ಆಗ ಅವರೂ ಜೊತೆಗೆ ಹೋಗುವುದು ಅವರ ಯೋಜನೆ. ಐಪಿಎಲ್ ಮುಗಿದ ತಕ್ಷಣ ಈ ಟೂರ್ನಿಯಲ್ಲಿ ಆಡಲು ಆಟಗಾರರು ಹೋಗಲಿದ್ದು, ನಾವು ನಮ್ಮ‌ದೇಶಕ್ಕೆ ಹೋಗಲು ಬಿಸಿಸಿಐ ಈ ಮೂಲಕ ಸಹಾಯ ಮಾಡಲಿದೆ ಎಂಬುದು ಮ್ಯಾಕ್ಸವೆಲ್ ಅನಿಸಿಕೆ. ಇಂಗ್ಲೆಂಡ್ ಹೋದ ಬಳಿಕ ಅಲ್ಲಿಂದ ಆಸ್ಟ್ರೆಲಿಯಾ ಹೋಗುವುದು ಸುಲಭವಾಗಲಿದೆ.
-Team Infotrend