VIDEO : ಮುಂಬೈ ಇಂಡಿಯನ್ಸ್ ಫ್ರಿಜ್ ಗ್ಲಾಸ್ ಒಡೆದ ಅಂಬಾಟಿ ರಾಯುಡು! ಹೆದರಿದ ಪಿಯೂಷ್ ಚಾವ್ಲಾ!
ಐಪಿಎಲ್ – 2021 MI Vs CSK : ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಅವರ ಅಜೇಯ 87 ರನ್ ಗಳ ಕಾರಣದಿಂದ ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು. ಮ್ಯಾನ್ ಆಫ್ ಮ್ಯಾಚ್ ಪೊಲಾರ್ಡ್ ಇದಕ್ಕೂ ಮೊದಲು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.
ಇತರ ಬೌಲರ್ ಗಳು ದಾರಾಳವಾಗಿ ರನ್ ಕೊಡುತ್ತಿದ್ದಾಗ ಅವರು ಎರಡು ಓವರ್‌ಗಳಲ್ಲಿ ಕೇವಲ 12 ರನ್ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದರು. ಅವರಲ್ಲದೆ ಅಂಬಾಟಿ ರಾಯುಡು ಕೂಡ ಭರ್ಜರಿ ಇನಿಂಗ್ಸ್ ಆಡಿದರು. ಅವರು 27 ಎಸೆತಗಳಲ್ಲಿ 72 ರನ್ ಗಳಿಸಿದರು. ಕೆರಾನ್ ಪೋಲಾರ್ಡ್ ಅಬ್ಬರದಲ್ಲಿ ರಾಯುಡು ಇನ್ನಿಂಗ್ಸ್ ಸ್ವಲ್ಪ ಮಸುಕಾಯಿತಷ್ಟೇ.
ಸಿಕ್ಸರ್ ಗಳ ಸುರಿಮಳೆಗೈದ ರಾಯುಡು, ಜಸ್ಪ್ರೀತ್ ಬುಮ್ರಾ ಅವರ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿ ಮುಂಬೈ ಇಂಡಿಯನ್ಸ್ ಫ್ರಿಜ್ ಕೂಡ ಒಡೆದರು! ಅಲ್ಲಿ ನಿಂತಿದ್ದ ಪಿಯೂಷ್ ಚಾವ್ಲಾ ಹೆದರುವ ಹಾಘಿತ್ತು ಅವರ ಸಿಕ್ಸರ್. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
ಸಿಎಸ್‌ಕೆ 16.5 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 163 ರನ್ ಗಳಿಸಿದ್ದಾಗ ಜಸ್ಪ್ರಿತ್ ಬುಮ್ರಾ 17 ನೇ ಓವರ್ ಮಾಡುತ್ತಿದ್ದರು. ರವೀಂದ್ರ ಜಡೇಜಾ ಮತ್ತು ಅಂಬಟಿ ರಾಯುಡು ಕ್ರೀಸ್ ನಲ್ಲಿ ಇದ್ದರು. ಆಗ ಸಿಕ್ಸರ್ ಭಾರಿಸಿದ ರಾಯುಡು ಮುಂಬೈ ಇಂಡಿಯನ್ಸ್‌ನ ಫ್ರಿಜ್ ಗ್ಲಾಸ್ ಅನ್ನು ಒಡೆದರು!
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಅಂಬಾಟಿ ರಾಯುಡು ಅವರ 27 ಎಸೆತಗಳಲ್ಲಿ ಅಜೇಯ 72 ರನ್‌ಗಳ ಆಧಾರದ ಮೇಲೆ ನಾಲ್ಕು ವಿಕೆಟ್‌ಗೆ 218 ರನ್ ಗಳಿಸಿತು. ನಂತರ ಈ ಮೊತ್ತ ಬೆನ್ನತ್ತಿದ ಮುಂಬೈ ಆರು ವಿಕೆಟ್‌ಗಳನ್ನು ಕಳೆದುಕೊಂಡು ಜಯ ಸಾಧಿಸಿತು, ಇದು ಮುಂಬೈ ಯಶಸ್ವಿಯಾಗಿ ಚೇಸ್ ಮಾಡಿದ ಗರಿಷ್ಠ ಸ್ಕೋರ್ ಆಗಿದೆ.
ಎಂಟು ಗಗನಚುಂಬಿ ಸಿಕ್ಸರ್ ಗಳ ಜೊತೆಗೆ, ಪೊಲಾರ್ಡ್ ಆರು ಬೌಂಡರಿಗಳನ್ನು ಹೊಡೆದರು. ಪ್ರಸಕ್ತ ಋತುವಿನ ವೇಗದ ಅರ್ಧಶತಕವನ್ನು ಕೇವಲ 17 ಎಸೆತಗಳಲ್ಲಿ ಪೂರ್ಣಗೊಳಿಸುವುದರ ಹೊರತಾಗಿ, ಕ್ರುನಾಲ್ ಪಾಂಡ್ಯ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 41 ಎಸೆತಗಳಲ್ಲಿ 89 ರನ್ ಗಳಿಸುವ ನಿರ್ಣಾಯಕ ಪಾರ್ಟನರ್ ಶಿಪ್ ನಲ್ಲಿ ಪಾಲ್ಗೊಂಡರು. ವಿಡಿಯೊ ಕೆಳಗಿದೆ ನೋಡಿ…
(ಓರಿಜಿನಲ್ ವಿಡಿಯೊವನ್ನು BCCI ನವರು ರಿಮೂವ್ ಮಾಡಿದ್ದು, ಕೆಳಗಿರುವ ಯೂಟ್ಯೂಬ್ ವಿಡಿಯೊ ಕ್ವಾಲಿಟಿ ಅಷ್ಟು ಚೆನ್ನಾಗಿಲ್ಲ)
-Team Infotrend