Articles

ಪ್ರಧಾನಿ ಮೋದಿ ರಾಜಿನಾಮೆ ನೀಡಬೇಕು -ರಮ್ಯಾ : ಇನ್ಸಟಾಗ್ರಾಂ ನಲ್ಲಿ ಪೋಲ್ ರಚಿಸಿ ಅಭಿಮಾನಿಗಳ ಅಭಿಪ್ರಾಯ ಸಂಗ್ರಹ

ಕೊರೋನ ವ್ಯಾಪಕವಾಗಿ ಹರಡುತ್ತಿದ್ದರೂ ಚುನಾವಣೆ ಕಡೆ ಗಮನ ಕೊಟ್ಟು ದೇಶದ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ, ಇದಕ್ಕೆ ನರೇಂದ್ರ ಮೋದಿ ನೇರ ಕಾರಣರಾಗಿದ್ದು, ಅದರ ಹೊಣೆ ಹೊತ್ತು ಅವರು ರಾಜಿನಾಮೆ ಕೊಡಬೇಕು ಎಂದು ನಟಿ ರಮ್ಯಾ ಒತ್ತಾಯಿಸಿದ್ದಾರೆ. ಮೊದಲಿನಿಂದಲೂ ಮೋದಿ ಆಡಳಿತದ ವಿರುದ್ದ ದ್ವನಿ ಎತ್ತುತ್ತಲೇ ಬಂದ ನಟಿ ರಮ್ಯಾ ಈಗ ರಾಜಿನಾಮೆ ಕೇಳತೊಡಗಿದ್ದಾರೆ.

ನಿನ್ನೆ ಪಂಚರಾಜ್ಯಗಳ ಚುನಾವಣೆ ಪಲಿತಾಂಶ ಬಂದಿದ್ದು, ಪಶ್ವಿಮ ಬಂಗಾಳದಲ್ಲಿ TMC, ತಮಿಳುನಾಡಿನಲ್ಲಿ DMK, ಕೇರಳದಲ್ಲಿ LDF ಗೆಲುವುದು ಸಾಧಿಸಿದ್ದು, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಆದರೆ ಎಲ್ಲಿಯೂ ಕಾಂಗ್ರೆಸ್ ಸುಳಿವೇ ಇಲ್ಲ! ಈ ಹುಳುಕು ಮುಚ್ಚಿಕೊಳ್ಳಲು ಮತ್ತು ಮೀಡಿಯಾಗಳ ಗಮನ ಬೇರೆಡೆ ಸೆಳೆಯಲು ರಮ್ಯಾ, ಸಿದ್ದರಾಮಯ್ಯ, ಡಿಕೆಶಿಯಂಥ ಕಾಂಗ್ರೆಸ್ ನಾಯಕರು ಇಂಥ ವಿಷಯ ಎತ್ತುತ್ತಿದ್ದಾರೆ ಎಂಬುದು ಬಿಜೆಪಿ ಕಾರ್ಯಕರ್ತರ ಅಬಿಪ್ರಾಯ.

ಕೊರೋನ ಅಲೆ ಮಿತಿ ಮೀರುತ್ತಿದೆ, ಇದಕ್ಕೆ ಕೇಂದ್ರ ಸರ್ಕಾರ ನೇರ ಕಾರಣ ಎಂದು ರಮ್ಯಾ ಆರೋಪಿಸುತ್ತಾರೆ. ದೇಶದಲ್ಲಿ ಪ್ರತಿದಿನ ನಾಲ್ಕು ಲಕ್ಷಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಅವನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ, ಅಲ್ಲದೇ ದೇಶದ ಆರ್ಥಿಕ ವ್ಯವಸ್ಥೆ ಕೂಡ ಕುಸಿಯುತ್ತಿದೆ ಎಂದು ರಮ್ಯಾ ಹೇಳಿದ್ದಾರೆ.

ಇನ್ ಸ್ಟಾಗ್ರಾಂ ನಲ್ಲಿ ಪೋಲ್ ಕ್ರಿಯೇಟ್ ಮಾಡಿರುವ ಅವರು, ಅದರಲ್ಲಿ ಪ್ರಧಾನಿ ಮೋದಿ ರಾಜಿನಾಮೆ ನೀಡಬೇಕಾ ಅಥವಾ ಆರೋಗ್ಯ ಸಚಿವ ಹರ್ಷವರ್ಧನ್ ರಾಜಿನಾಮೆ ನೀಡಬೇಕಾ ಎಂದು ಕೇಳಿದ್ದರು. ಈ ಪೋಲ್ ನಲ್ಲಿ ಸುಮಾರು 90 ಸಾವಿರ ಜನ ಪಾಲ್ಗೊಂಡಿದ್ದು, 64% ಜನ ಮೋದಿ ರಾಜಿನಾಮೆ ಕೊಡಬೇಕು ಎಂದರೆ, 36% ಜನ ಹರ್ಷವರ್ಧನ್ ರಾಜಿನಾಮೆ ನೀಡಬೇಕು ಎಂದಿದ್ದಾರೆ.

ಪೋಲ್ ರಚಿಸುವಾಗ ಮೋದಿ ರಾಜಿನಾಮೆ ನೀಡಬೇಕೊ ಬೇಡವೊ ಎಂದು ಕೇಳಿದ್ದರೆ ಪಲಿತಾಂಶ ಬೇರೆ ಆಗಿರುತ್ತಿತ್ತು, ಇಲ್ಲಿ ರಮ್ಯಾ ಸ್ವಲ್ಪ ತಲೆ ಓಡಿಸಿ ಮೋದಿ ರಾಜಿನಾಮೆ ಕೊಡ್ಬೇಕಾ ಅಥವಾ ಹರ್ಷವರ್ದನ್ ಕೊಡಬೇಕಾ ಎಂದು ಪ್ರಶ್ನೆ ಕೇಳಿದ್ದಾರೆ. ಇಷ್ಟಕ್ಕೂ ಅವರನ್ನು ಫಾಲೊ ಮಾಡುವ ಅವರ ಅಭಿಮಾನಿಗಳೇ ಪೋಲ್ ನಲ್ಲಿ ಓಟ್ ಮಾಡುವುದರಿಂದ ಸಹಜವಾಗಿ ರಮ್ಯಾ ಅವರಿಗೆ ಬೇಕಾದ ಹಾಗೆ ರಿಸಲ್ಟ್ ಬರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿರುವ ಬಿಜೆಪಿಯ ಕಾರ್ಯಕರ್ತರು ಕಾಮೆಂಟ್ ಮಾಡಿದ್ದಾರೆ.

ಸೋತ ಬಳಿಕ ರಾಜಕೀಯದಿಂದ ದೂರ ಉಳಿದಿದ್ದರೂ ಸಾಮಾಜಿಮ ಜಾಲತಾಣದಲ್ಲಿ ಆ್ಯಕ್ಟಿವ್ ಇರುವ ರಮ್ಯಾ ಅವರು ಆಗಾಗ ಮೋದಿ ವಿರುದ್ದ ಕಡ ಕಾರುತ್ತಿರುತ್ತಾರೆ. ಇದನ್ನು ತಮಾಷೆಯಾಗಿ ತಗೆದುಕೊಳ್ಳುವ ಕಾರ್ಯಕರ್ತರು ರಮ್ಯಾರವರದೇ ಕಾಲೆಳೆಯುತ್ತಾರೆ. ಮೋದಿ ರಾಜಿನಾಮೆ ಕೊಡುವ ವಿಷಯದಲ್ಲಿ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ.
-Team Infotrend

Leave a Comment

Your email address will not be published. Required fields are marked *