SL vs BAN : ಈ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ ಥರ ಈ ಹಿಂದೆ ಮತ್ಯಾರೂ ಔಟಾಗಿರಲಿಲ್ಲ! ವಿಡಿಯೋ ನೋಡಿ

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಇನ್ನಿಂಗ್ಸ್ ಸಮಯದಲ್ಲಿ ಇಂತಹ ಘಟನೆ ನಡೆದಿದ್ದು, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದೆ. ಇದು ತೈಜುಲ್ ಇಸ್ಲಾಂ ಔಟ್ ಆಗಿರುವ ವಿಡಿಯೋ, ನಿನ್ನೆ ಮತ್ತು ಇವತ್ತು ಈ ವಿಡಿಯೊ ಎಲ್ಲ ಕಡೆ ಹರಿದಾಡುತ್ತಿದೆ.

ಹಾಗೆ ನೋಡಿದರೆ ಹಿಟ್ ವಿಕೇಟ್ ಸಾಕಷ್ಟು ಆಗುತ್ತವಾದರೂ, ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್‌ನಲ್ಲಿ ತೈಜುಲ್ ಇಸ್ಲಾಂ ಹಿಟ್ ವಿಕೆಟ್ ಔಟ್ ಆಗಿ ಪೆವಿಲಿಯನ್‌ಗೆ ಮರಳಿದ್ದು ವಿಚಿತ್ರವಾಗಿದೆ. ಹಿಂದೆ ಯಾರೂ ಈ ಥರ ಹಿಟ್ ವಿಕೇಟ್ ಆಗಿರಲಿಲ್ಲ.

ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಶ್ರೀಲಂಕಾದ ಬೌಲರ್ ಲಕ್ಮಲ್ ಅವರ ಎಸೆತ ಎದುರಿಸುವಾಗ ಈ ಘಟನೆ ನಡೆದಿದೆ. ಅವರ ಚೆಂಡು ಎದುರಿಸುವಾಗ ಸ್ವಲ್ಪ ಹಿಂದೆ ಸರಿದ ಬ್ಯಾಟ್ಸಮನ್ ಮರಳಿ ಕಾಲೆತ್ತುವಾಗ ಶೂ ಕಳಚಿ ಸ್ಟಂಪ್ ಗೆ ಹೋಗು ಬಡಿದಿದೆ!

ಧರಿಸಿರುವ ಶೂ ಬಿಚ್ಚಿ ಅದು ಹೋಗಿ ವಿಕೇಟಿಗೆ ಬಡಿದು, ಬೇಲ್ಸ್ ಎಗರಿ ಬ್ಯಾಟ್ಸಮನ್ ಔಟ್ ಆಗಿದ್ದು ಇದೇ ಮೊದಲಂತೆ! ಬಾಂಗ್ಲಾದೇಶದ ಈ ಬ್ಯಾಟ್ಸ್‌ಮನ್ ನನ್ನು ನೆಟ್ಟಿಗರು ತೀವ್ರವಾಗಿ ಅಪಹಾಸ್ಯ ಮಾಡುತ್ತಿದ್ದಾರೆ. ವಿಡಿಯೊ ಕೆಳಗಿದೆ ನೋಡಿ…

-Team Infotrend