ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮೇಘನಾ ರಾಜ್ ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ಮನಕಲಕುವ ವಿಡಿಯೊ ಹೇಗಿದೆ ನೋಡಿ

ಈ ಕುಟುಂಬದ ಕರ್ನಾಟಕದ ಜನರಿಗೆ ಅದೇನೋ ಪ್ರೀತಿ ವಾತ್ಸಲ್ಯ, ಅದಕ್ಕೆ ಕಾರಣ ಚಿರಂಜಿವಿ ಸರ್ಜಾರವರ ಅಕಾಲಿಕ ಮೃತ್ಯು. ಸಣ್ಣ ವಯಸ್ಸಿನಲ್ಲಿ ತನ್ನ ಮುದ್ದು ಕುಟುಂಬವನ್ನು ಬಿಟ್ಟು ತೆರಳಿದ ಚಿರು ಬಗ್ಗೆ ಹಾಗೂ ಅವರನ್ನು ಅಗಲಿದ ಅವರ ಕುಟುಂಬದವರ ಬಗ್ಗೆ ಜನ ಇಂದಿಗೂ ಅಪಾರ ಪ್ರೀತಿ ತೋರಿಸುತ್ತಾರೆ.

ಇವತ್ತು ಚಿರಂಜಿವಿ ಸರ್ಜಾರವರ ಪತ್ನಿ ಮೇಘನಾರವರ 31 ನೇ ಜನ್ಮದಿನ, ಚಿರು ಇಲ್ಲದ ಮೊದಲ ಬರ್ಥ್ ಡೇ ಇದು. ಈ ಸಮಯದಲ್ಲಿ ಮೇಘನಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮುದ್ಮುದ್ದು ವಿಡಿಯೊ ಶೇರ್ ಮಾಡಿದ್ದು, ಮನಕಲಕುವಂತಿದೆ. Our miracle ❤️ forever and always! ಎಂಬ ಶಿರ್ಷಿಕೆಯಡಿ ವಿಡಿಯೊ ಪೋಸ್ಟ್ ಮಾಡಲಾಗಿದ್ದು ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೇಘನಾ ಹಾಗೂ ಚಿರು ವಿವಾಹ 2018 ರಲ್ಲಿ ನಡೆಯಿತು. ಇವರದು ಪ್ರೇಮವಿವಾಹ. ತುಂಬಾ ಮಧುರವಾಗಿ ಸಾಗಿದ್ದ ಅವರ ಕುಟುಂಬಕ್ಕೆ ಸಿಡಿಲು ಬಡಿದಿದ್ದು ಕಳೆದ ವರ್ಷ ಜೂನ್ 7 ರಂದು. ಅವತ್ತು ಚಿರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾದರು. ಆಗಿನಿಂದ ಈಗಿನವರಿಗೆ ಮೇಘನಾ ಹಾಗೂ ಚಿರು ಅಭಿಮಾನಿಗಳು ಅವರನ್ನು ಸದಾಕಾಲ ಮಿಸ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಚಿರು ತೀರಿಕೊಂಡಾಗ ಮೇಘನಾ 5 ತಿಂಗಳ ಗರ್ಬಿಣಿಯಾಗಿದ್ದರು. ನಂತರ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಅವರ ಪುತ್ರ ಪುಟಾಣಿ ಚಿರುಗೂ ಕೂಡ ಕನ್ನಡ ಜನತೆಯಿಂದ ಅಷ್ಟ ಪ್ರೀತಿ ದೊರೆತಿದೆ. ಜ್ಯೂನಿಯರ್ ಚಿರು ತಮ್ಮಪ್ಪನ ಫೋಟೊ ಮುಂದೆ ಇರುವ ಕ್ಯೂಟ್ ವಿಡಿಯೊ ಮೇಲೆ ಇದೆ ನೋಡಿ.
-Team Infotrend