ಮಾಲ್ಡಿವ್ಸ್ ನಲ್ಲಿ ಬಾಲಿವುಡ್ ನಟರ ಮೋಜು ಮಸ್ತಿ : ಕೆಂಡಕಾರಿದ ಅಜೆಯ್ ದೇವಗನ್, ನವಾಜುದ್ದೀನ್ ಸಿದ್ದಿಕಿ

ಇಡೀ ದೇಶವೇ ಕರೋನ ಎಂಬ ಹೆಮ್ಮಾರಿಯಿಂದ ತತ್ತರಿಸಿ ಹೋಗಿರುವ ಇಂತಹ ಸಂದರ್ಭದಲ್ಲಿ ದೇಶದ ಕಷ್ಟದ ಈ ಪರಿಸ್ಥಿತಿಯನ್ನು ನಿಭಾಯಿಸಿ ಸರಿದಾರಿಗೆ ತರಲು ಸರ್ಕಾರಗಳು ಶತಪ್ರಯತ್ನ ಮಾಡುತ್ತಿವೆ. ಮೊದಲ ಸುತ್ತಿನ ಲಾಕ್ ಡೌನ್ ನಂತರ ಸ್ವಲ್ಪ ತಗ್ಗಿದ್ದ ಈ ಹೆಮ್ಮಾರಿ ಈಗ ರೂಪಾಂತರಗೊಂಡು ಮತ್ತೊಮ್ಮೆ ದೇಶವನ್ನು ನಡುಗಿಸುತ್ತಿದೆ.

ಇಂತಹ ಸಂದರ್ಭದಲ್ಲಿ ಭಾರತೀಯ ಮೂಲದ ದೊಡ್ಡ ದೊಡ್ಡ ಕಂಪನಿಗಳಾದ ರಿಲಯನ್ಸ್ ಗ್ರೂಪ್, ಟಾಟಾ ಸಮೂಹ ಸಂಸ್ಥೆ ಹಾಗೂ ಅದಾನಿ ಗ್ರೂಪ್ ಆಫ್ ಕಂಪನೀಸ್ ಇಂಥವೆಲ್ಲ ಒಂದಿಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿವೆ. ಹಾಗೆಯೇ ಚಿತ್ರನಟರು ನಿರ್ಮಾಪಕರು ಇಂಥವರೆಲ್ಲ ಕೂಡ ಸಹಾಯಕ್ಕೆ ಮುಂದೆ ಬರಬೇಕು.

ಆದರೆ ಬಾಲಿವುಡ್ ನ ಬಹುತೇಕರು ಮಾಲ್ದಿವ್ಸ್ ನಂತಹ ರಮಣೀಯ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗಿದ್ದಾರೆ. ಇಂಥವರ ಮಧ್ಯದಲ್ಲಿ ಅಜಯ್ ದೇವಗನ್ ಭಿನ್ನವಾಗಿ ಕಾಣಿಸುತ್ತಾರೆ. ಹಾಗಾದ್ರೆ ಬನ್ನಿ ಅಜಯ್ ದೇವಗನ್ ಈ ಕೋವಿಡ್-19 ಎರಡನೇ ಅಲೆಯನ್ನು ತಡೆಗಟ್ಟಲು ಜನಸಾಮಾನ್ಯರಿಗೆ ಏನೇನು ಸಹಾಯ ಮಾಡುತ್ತಿದ್ದಾರೆಂದು ನೋಡೋಣ…

ಅಜಯ್ ದೇವಗನ್ ಅವರು ಬೃಹತ್ ಮುಂಬೈ ಮಹಾನಗರ ಪಾಲಿಕೆ ಹಾಗೂ ಹಿಂದೂಜ ಆಸ್ಪತ್ರೆಯೊಂದಿಗೆ ಸೇರಿಕೊಂಡು ಇಂಟೆನ್ಸಿವ್ ಕೇರ್ ಯೂನಿಟ್ ಗಳ ಸ್ಥಾಪನೆ ಮಾಡುತ್ತಿದ್ದಾರೆ. ಶಿವಾಜಿ ಪಾರ್ಕ್ ನಲ್ಲಿ ಒಂದು ಎಮರ್ಜೆನ್ಸಿ ಆಸ್ಪತ್ರೆ ತೆರೆಯಲು ಅಜಯ್ ದೇವಗನ್ ಹಾಗೂ ಅವರ ಸ್ನೇಹಿತರು ಸೇರಿ ಯೋಜಿಸಿದ್ದಾರೆ.

ಆ ಪ್ರಕಾರ ಮುಂಬೈ ಕಾರ್ಪೋರೇಶನ್ ಹತ್ತಿರ ಪರ್ಮಿಷನ್ ಕೇಳಿ ಪಡೆದು ಸದ್ಯ ಶಿವಾಜಿ ಪಾರ್ಕ್ ನ ಸ್ಕೌಟ್ಸ್ & ಗೈಡ್ಸ್ ಕೇಂದ್ರದಲ್ಲಿ ವೆಂಟಿಲೇಟರ್, ಆಕ್ಸಿಜನ್ ಹಾಗೂ ಪ್ಯಾರಾಮಾನಿಟರ್ ಸಹಿತ ಒಟ್ಟು 20 ಇಂಟನ್ಸಿವ್ ಕೇರ್ ಯುನಿಟ್ ಗಳನ್ನು ಸ್ಥಾಪಿಸಿದ್ದಾರೆ ಹಾಗೂ ಅವುಗಳನ್ನು ಉಚಿತವಾಗಿ ಕರೋನ ರೋಗಿಗಳ ಉಪಯೋಗಕ್ಕೆ ನೀಡಿದ್ದಾರೆ.

ಇನ್ನೂ ಸಮಾಜ ಸೇವೆಗಾಗಿಯೇ ತೆರೆದಿರುವ ತಮ್ಮದೇ ಆದ NY ಫೌಂಡೇಶನ್ ನ ಮುಖಾಂತರ ಮುಂಬೈ ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಈ ಕೆಲಸವನ್ನು ಮಾಡುತ್ತಿದ್ದಾರೆ. ಇದೆ ರೀತಿ ಹೋದ ವರ್ಷ ಕೂಡ  ದೇಶದ ಅತೀ ದೊಡ್ಡ ಸ್ಲಂ ಧಾರಾವಿಯಲ್ಲೂ ಇದೆ ರೀತಿಯಲ್ಲಿ ಇಂಟನ್ಸಿವ್ ಕೇರ್ ಯುನಿಟ್ ಗಳನ್ನು ತೆರೆಯಲು ಇವರು ಸಹಾಯ ಮಾಡಿದ್ದರು.

ಇವರಂತೆಯೇ ಚಿತ್ರ ನಿರ್ಮಾಪಕ ಆನಂದ್ ಪಂಡಿತ್, ಬೋನಿ ಕಪೂರ್, ಲವ್ ರಂಜನ್, ರಜನಿಶ್ ಖಾನುಜಾ, ಲೀನಾ ಯಾದವ್ ಹಾಗೂ ಆಶೀಶ್ ಬಜಾಜ್ ರಂತಹ ಬಾಲಿವುಡ್ ನಟರು ಕೂಡ ಕೋವಿಡ್ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಕೊರೋನ ಮಹಾಮಾರಿಗೆ ಹೆದರದೇ ಅದನ್ನು ಎದುರಿಸುವಲ್ಲಿ ಇವರು ಮುನ್ನೆಲೆಗೆ ಬಂದಿದ್ದಾರೆ.

ಆದರೆ, ಭಾರತದಲ್ಲೇ ಹುಟ್ಟಿ, ಇಲ್ಲಿನ ಹುಚ್ಚು ಅಭಿಮಾನಿಗಳಿಂದಲೇ ಬೆಳೆದು, ಇಲ್ಲಿಯದೆ ಹಣವನ್ನು ಗಳಿಸಿಕೊಂಡು ಸೆಲೆಬ್ರಿಟಿಗಳಾಗಿ ಬೆಳೆದ ಟೈಗರ್ ಶ್ರಾಫ್, ದಿಶಾ ಪಟಾಣಿಯವರು ಈಗಾಗಲೇ ಮಾಲ್ದಿವ್ಸ್ ತಲುಪಿದ್ದಾರೆ. ಇವರನ್ನೇ ಅನುಸರಿಸಿರುವ ಶ್ರದ್ದಾ ಕಪೂರ್ ಅವರು ಕೂಡ ಮೂರನೇ ಬಾರಿ ವಿದೇಶಕ್ಕೆ ಹಾರಿದ್ದಾರೆ, ಅಲಿಯಾ ಭಟ್ ಹಾಗೂ ಜಾಹ್ನವಿ ಕಪೂರ್ ಕೂಡ ಮಾಲ್ದಿವ್ಸ್ ಗೆ ಹೋಗಿದ್ದಾರೆ.

ಇನ್ನೂ ಮಾಲ್ದಿವ್ಸ್ ಗೆ ಹೋಗದ ದೀಪಿಕಾ ಪಡುಕೋಣೆ ಹಾಗೂ ರಣವಿರ್ ಸಿಂಗ್ ಅವರು ಬೇರೆ ಯಾವುದೋ ದೇಶಕ್ಕೆ ಹಾರಿದ್ದಾರೆ. ಹೋದರೆ ಹೋಗಲಿ ದೇಶದ ಬಗ್ಗೆ ಕಾಳಜಿ ಇರುವವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಈ ವಿದೇಶಕ್ಕೆ ಹಾರಿದವರು ಅಲ್ಲಿ ಕುಳಿತು ತಮ್ಮ ಮೋಜು ಮಸ್ತಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ!

ಇದರಿಂದ ಕುಪಿತಗೊಂಡ ನವಾಜುದ್ದಿನ್ ಸಿದ್ಧಿಕಿ ಅವರು ಇವರ ಮೋಜು ಮಸ್ತಿ ಅವರ ವ್ಯಯಕ್ತಿಕ ಆದರೆ ದೇಶ ಇಂಥ ಸಂಕಷ್ಟದಲ್ಲಿರುವಾಗ ಸಹಾಯ ಮಾಡದಿದ್ದರೂ ಕೂಡ ಅಟ್ಲಿಸ್ಟ್ ಇಂತ ಫೋಟೋ ಹಾಕುವುದು ತಪ್ಪು ಅಂತ ಹರಿ ಹಾಯ್ದಿದ್ದಾರೆ. ಇವೆಲ್ಲವನ್ನೂ ದೇಶದ ಜನತೆ ಗಮನಿಸುತ್ತಿದ್ದಾರೆ ಇಂತವರಿಗೆ ಬುದ್ದಿ ಕಲಿಸುತ್ತಾರೆ.

-ಮಂಜುನಾಥ್