VIDEO : ಕ್ಯಾಪ್ಟನ್ಸಿ ಕಿತ್ತುಕೊಳ್ಳಿ, ತಂಡದಿಂದ ಕೈಬಿಡಿ, ಆದರೆ ಅಭಿಮಾನಿಗಳ ಮನಸ್ಸಿನಿಂದ ಕಿತ್ತೊಗೆಯಲಾರಿರಿ : ವಾರ್ನರ್ ಇನ್ ಸ್ಟಾಗ್ರಾಂ ಸ್ಟೋರಿ
IPL 2021 : ಸನ್ ರೈಸರ್ಸ್ ಹೈದರಾಬಾದ್ ತಂಡ ದೊಡ್ಡ ನಿರ್ಧಾರ ತೆಗೆದುಕೊಂಡು ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿತು. ಐಪಿಎಲ್ 2021 ರ ಉಳಿದ ಪಂದ್ಯಗಳಿಗೆ ತಂಡದ ನಾಯಕನನ್ನಾಗಿ ಕೆನ್ ವಿಲಿಯಮ್ಸನ್ ಅವರನ್ನು ಎಸ್‌ಆರ್‌ಹೆಚ್‌ನ ಆಡಳಿತವು ಘೋಷಿಸಿತು. ಆದರೆ ಕೆಲವೇ ಜನರಿಗೆ ಇದು ತಿಳಿದಿದೆ : ನಾಯಕತ್ವವನ್ನು ಕಸಿದುಕೊಳ್ಳುವ ಒಂದು ದಿನದ ಮೊದಲು, ವಾರ್ನರ್ ಇನ್ ಸ್ಟಾ ದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದರು.
ಡೇವಿಡ್ ವಾರ್ನರ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಅವರು SRH ಜರ್ಸಿಯಲ್ಲಿ ಶತಕ ಗಳಿಸಿದ ನಂತರ ಸಂಭ್ರಮ ಆಚರಿಸುತ್ತಿದ್ದಾರೆ. ಈ ವೀಡಿಯೊ ತುಂಬಾ ಭಾವನಾತ್ಮಕವಾಗಿದೆ. ವೀಡಿಯೊದಲ್ಲಿ ಮೈದಾನದಲ್ಲಿ ಕುಳಿತ ಲಕ್ಷಾಂತರ ಜನರು ಹೈದರಾಬಾದ್ ನಾಯಕನನ್ನು ‘ವಾರ್ನರ್ ವಾರ್ನರ್ ವಾರ್ನರ್’ ಎಂದು ಕರೆದು ಹುರಿದುಂಬಿಸುತ್ತಿದ್ದಾರೆ.
ಡೇವಿಡ್ ವಾರ್ನರ್ ಅವರ ನಾಯಕತ್ವದಲ್ಲಿ ಹೈದರಾಬಾದ್ ತಂಡವು 2016 ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದಲ್ಲದೆ ವಾರ್ನರ್ ನಾಯಕತ್ವದಲ್ಲಿ ತಂಡವು 4 ಬಾರಿ ಪ್ಲೇಆಫ್ ಆಡಿದೆ. ಅನುಭವಿ ಜೊತೆಗಿನ ಇಂತಹ ನಡವಳಿಕೆಯು ಯಾರಿಗೂ ಹಿಡಿಸಿಲ್ಲ. ಎಲ್ಲರೂ SRH ಆಡಳಿತದ ವಿರುದ್ಧ ಟಕೆ ಮಾಡುತ್ತಿದ್ದಾರೆ.
ಐಪಿಎಲ್ 2021 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ 6 ಪಂದ್ಯಗಳಲ್ಲಿ 1 ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಯಿಂಟ್ ಟೇಬಲ್ ನಲ್ಲಿ ಹೈದರಾಬಾದ್ ತಂಡ ಎಂಟನೇ ಸ್ಥಾನದಲ್ಲಿದೆ. ಹೈದರಾಬಾದ್ ತಂಡವು ಮೇ 2 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿಲಿಯಮ್ಸನ್ ನಾಯಕತ್ವದಲ್ಲಿ ಆಡಿದ್ದು, ಅದರಲ್ಲಿಯೂ ಸೋತು ಸುಣ್ಣವಾಯಿತು.
ವಾರ್ನರ್ ರವರ ಇನ್ ಸ್ಟಾಗ್ರಾಂ ಸ್ಟೋರಿಯ ಅರ್ಥ ಇಷ್ಟೇ : ‘ನೀವು ಬೇಕಿದ್ದರೆ ಕ್ಯಾಪ್ಟನ್ಸಿ ಕಿತ್ತುಕೊಳ್ಳಬಹುದು, ತಂಡದಿಂದ ಕೈಬಿಡಬಹುದು, ಆದರೆ ಅಭಿಮಾನಿಗಳ ಮನಸ್ಸಿನಿಂದ ಕಿತ್ತೊಗೆಯಲಾರಿರಿ’ ಇದು ವಾರ್ನರ್ ಹಾಕಿದ ವಿಡಿಯೊದ ಅರ್ಥ, ಅವರಿಗೆ ಹೀಗಾಘುತ್ತದೆ ಎಂದು ಮೊದಲೇ ಗೊತ್ತಾಗಿತ್ತು, ಅದಕ್ಕೇ ಆ ಭಾವನಾತ್ಮಕ ವಿಡಿಯೊ ಪೋಸ್ಟ್ ಮಾಡಿದ್ದರು. ಆ ವಿಡಿಯೊ ಕೆಳಗಿದೆ ನೋಡಿ.
Warner shared this on his Insta story from OrangeArmyfanpage on Insta, such a wonderful video this.
— Rajdeep Singh (@rajdeep189) April 30, 2021
Whole stadium cheering Warner Warner Warner. What a moment it would have been. pic.twitter.com/dhuQJyv227
-Team Infotrend