ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮನೆ ಒಳಗಿದ್ದುಕೊಂಡೇ ಹೊರಗೆ ದಾಖಲೆ ನಿರ್ಮಿಸಿದ ದಿವ್ಯಾ ಉರುಡುಗ!

ಜನರಿಗೆ ಅದೇನು ಇಷ್ಟವಾಗುತ್ತೆ ಅಂತ ಅರ್ಥ ಮಾಡಿಕೊಳ್ಳುವುದು ಕಷ್ಟ. ಕನ್ನಡ ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ವರ್ತನೆಯನ್ನು ಫೇಸ್ಬುಕ್ಕಿನ ತಂಬಾ ಜನ ಟೀಕಿಸಿದ್ದಾರೆ. ಬಿಗ್ ಬಾಸ್ ಮಿತಿ ಮೀರುತ್ತಿದೆ, ಅತಿ ಆಗುತ್ತಿದೆ, ಮನೆಲಿ ಎಲ್ರೂ ಕುತ್ಗೊಂಡು ಟಿವಿ ನೋಡ್ಬೇಕೊ ಬೇಡ್ವೊ ಎಂದೆಲ್ಲ ಜನ ಟೀಕಿಸಿದ್ದು ಉಂಟು. ಇಂದು ಅದೇ ದಿವ್ಯ ಉರುಡುಗ ಮನೆಯೊಳಗೆ ಇದ್ದುಕೊಂಡೇ ದಾಖಲೆ‌ ನಿರ್ಮಿಸಿದ್ದಾಳೆ. ಏನದು ನೋಡೋಣ ಬನ್ನಿ…

ಕನ್ನಡ ಬಿಗ್ ಬಾಸ್ ಸೀಜನ್ – 8 ರ ಮಹಿಳಾ ಸ್ಪರ್ದಿ ದಿವ್ಯಾ ಉರುಡುಗ ದಿನೇ ದಿನೇ ಹೊರಗೆ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾಳೆ. ದಿನಕಳೆದಂತೆಲ್ಲ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ತಾಜಾ ಉದಾಹರಣೆ : ಆಕೆ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟ್ವಿಟರ್ ನಲ್ಲಿ ಟ್ರೇಂಡ್ ಆಗಿದ್ದಾಳೆ! ಹೀಗೆ ಟ್ವಿಟರ್ ಟ್ರೆಂಡ್ ಆದ ಮೊದಲ ಮಹಿಳಾ ಸ್ಪರ್ದಿ ದಿವ್ಯಾ ಉರುಡುಗ‌.

ಬಿಗ್ ಬಾಸ್ ಮನೆಯೊಳಗೆ ಇನ್ನೊಬ್ಬ ಸ್ಪರ್ದಿ ಕೆ.ಪಿ ಅರವಿಂದ್ ಅವರೊಂದಿಗಿನ ಆಕೆಯ ಕೆಮಿಸ್ಟ್ರಿ ಚೆನ್ನಾಗಿ ಕೆಲಸ ಮಾಡುತ್ತಿದೆ! ಆಕೆಯ ಮನೆಯೊಳಗಿನ ವರ್ತನೆ, ಟಾಸ್ಕ್ ನಲ್ಲಿ ಭಾಗವಹಿಸುವುದನ್ನು ಜನ ಸಕತ್ ಇಷ್ಟಪಟ್ಟಿದ್ದಾರಂತೆ. ಅದಕ್ಕಾಗೇ ಟ್ವಿಟರ್ ಟ್ರೆಂಡ್ ಆಗಿರುವ ಆಕೆಯ ಪರ 21 ಸಾವಿರಕ್ಕೂ ಅಧಿಕ ಟ್ವೀಟ್ ಗಳು ಹರಿದಾಡಿವೆ!

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಇಷ್ಟೊಂದು ಟ್ವೀಟ್ ನಲ್ಲಿ ಕಾಣಿಸಿಕೊಂಡ ಮೊದಲ ಹೆಸರು ದಿವ್ಯಾ ಉರುಡುಗ. ಅರವಿಂದ್ ಹಾಗೂ ದಿವ್ಯ ಜೋಡಿ ಟಾಸ್ಕ್ ನಡೆದಾಗಿನಿಂದ ಅವರು ಸಾಕಷ್ಟು ಟ್ರೋಲ್ ಆಗಿದ್ದರೂ ಅಷ್ಟೇ ಖ್ಯಾತಿ ಪಡೆದಿದ್ದಾರೆ. ಹೀಗಾಗಿಯೇ #Araviya ಎಂಬ ಹ್ಯಾಷ್ ಟ್ಯಾಗ್ ಕೂಡ ಟ್ರೆಂಡ್ ಆಗಿದೆ.

ಜನ ದಿವ್ಯಾಳನ್ನು ಚೆನ್ನಾಗಿ ನಡೆಸಿಕೊಳ್ಳುವಂತೆ, ಆಕೆಗೆ ಆಧ್ಯತೆ ನೀಡುವಂತೆ ಕಲರ್ಸ್ ಕನ್ನಡ ಚಾನೆಲ್ ಗೆ ಆರ್ಡರ್ ಕೂಡ ಮಾಡಿದ್ದಾರೆ! ಮನೆಯೊಳಗೆ ಸೊಗಸಾಗಿ ಕಾಣುತ್ತೀರಿ ಎಂದು ಕೂಡ ದಿವ್ಯಾರನ್ನು ಸಾಕಷ್ಟು ಜನ ಹೊಗಳಿದ್ದಾರೆ. ದಿವ್ಯ ಈ ಸೀಸನ್ ನಿಂದ ಹೊರಬಂದರೂ ಆಕೆ ಗಳಿಸಿದ ಖ್ಯಾತಿಯಿಂದಾಗಿ ಸಾಕಷ್ಟು ಅವಕಾಶಗಳು ಸಿಗಲಿವೆಯಂತೆ.
-Team Infotrend