VIDEO : ಉಸಿರಾಟದ ಸಮಸ್ಯೆಗೆ ಸುಲಭ ಪರಿಹಾರ , ನೋಡಿ ಸುವರ್ಣ ಚಾನೆಲ್ ನವರ ಒಳ್ಳೆಯ ವಿಡಿಯೊ
ಕೊರೋನ ವೈರಸ್ ಗೆ ಮನುಷ್ಯರು ತುತ್ತಾಗಲು ಮುಖ್ಯ ಕಾರಣ, ಉಸಿರಾಟದ ಸಮಸ್ಯೆ. ಬೇರೆಲ್ಲ ಸಮಸ್ಯೆಗಳನ್ನು ಹೇಗೋ ನಿಭಾಯಿಸಬಹುದು, ಅದರೆ ಉಸಿರೇ ತಗೆದುಕೊಳ್ಳಲು ಆಗದಿದ್ದರೆ ಪ್ರಾಣ ಉಳಿಸಿಕೊಳ್ಳುವುದಾದರೂ ಹೇಗೆ? ಈ ನಿಟ್ಟಿನಲ್ಲಿ ಉಸಿರಾಟದ ಸಮಸ್ಯೆಯಾದಾಗ ಎಲ್ಲಿ ಬೇಕಾದರೂ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾದ ಕೆಲವು ತಂತ್ರಗಳಿವೆ. ಅವುಗಳ ಬಗ್ಗೆ ಕೆಳಗಿನ ವಿಡಿಯೊದಲ್ಲಿ ವಿವರವಾಗಿ ತಿಳಿಸಿಕೊಡಲಾಗಿದೆ.
ಕೊರೋನ ರೋಗಿಗಳ ಸದ್ಯದ ಅತಿ ಅಗತ್ಯವೆಂದರೆ ಅದು ಆಕ್ಸಿಜನ್. ಆದರೆ ಭಾರತದಾದ್ಯಂತ ಆಕ್ಸಿಜನ್ ಕೊರತೆ ಎದ್ದು ಕಾಣುತ್ತಿದೆ. ಅದರ ಕೊರತೆಯಿಂದ ನಿನ್ನೆ ಚಾಮರಾಜನಗರದಲ್ಲಿ ಆದ ದುಂರಂತ ನಿಮಗೆ ಗೊತ್ತೇ ಇದೆ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವತ್ತ ಮೊದಲು ಕಾರ್ಯಪ್ರವೃತ್ತರಾಗಬೇಕು.
ನಾವು ಗಟ್ಟಿಯಾಗಿದ್ದರೆ ಯಾವ ಕಾಯಿಲೆಯನ್ನಾದರೂ ಮೆಟ್ಟಿ ನಿಲ್ಲಬಹುದು. ಇನ್ನು ಕೊರೋನ ಪೀಡಿತರಾದ ತುಂಬಾ ಜನ ಸರ್ಕಾರವನ್ನು ಬೈಯ್ಯುತ್ತಾರೆ. ಮೊದಲು ನಾವು ಕೊರೋನ ಗೈಡ್ ಲೈನ್ಸ್ ನೀಟಾಗಿ ಪಾಲಿಸಿದ್ದರೆ ಆ ಕಾಯಿಲೆಯೇ ಬರುತ್ತಿರಲಿಲ್ಲ, ನಮ್ಮ ನಿರ್ಲಕ್ಷ್ಯದ ಕಾರಣಕ್ಕೇ ಪರು ಹರಡಿರುವುದು ಎಂಬುದನ್ನು ನಾವು ಅರಿತುಕೊಳ್ಳಬೇಕು.
ಮಾಸ್ಕ್, ಸಾಮಾಜಿಕ ಅಂತರ, ಪದೇ ಪದೇ ಕೈ ತೊಳೆಯುವುದು, ಡೇಲಿ ಎಕ್ಸರ್ ಸೈಜ್ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಕೊರೋನವನ್ನು ಮಣಿಸಲು ಸಾಧ್ಯವಾಗುತ್ತದೆ. ಜೊತೆಗೆ ಕೊರೊನ ತಗುಲಿದ ಮೊದಲ ಹಂತದಲ್ಲಿ ಮಾಡಬಹುದಾದ ಎಲ್ಲ ಮುನ್ನೆಚ್ಚರಿಕೆ ಬಗ್ಗೆ ತಿಳಿದುಕೊಂಡು ಅವುಗಳನ್ನು ಅಭ್ಯಸಿಸಬೇಕು.
ಇಲ್ಲಿರುವ ವಿಡಿಯೊದಲ್ಲಿ ಉಸಿರಾಟದ ಸಮಸ್ಯೆ ಬರದಿರುವ ಹಾಗೆ ನೋಡಿಕೊಳ್ಳುವ ಕುರಿತು ತುಂಬಾ ಸರಳವಾಗಿ ವಿವರಿಸಲಾಗಿದೆ. 15 ನೇ ನಿಮಿಷದಿಂದ ನೋಡಿ. ಕೊರೋನ ಬಗೆಗಿನ ಸುದ್ದಿಯೆಂದರೆ ನಿಮಗೆ ವಾಕರಿಕೆ ಬರಿಸುವುದು ಅಂತ ಗೊತ್ತು, ಆದರೆ ಇದು ಸದ್ಯದ ಅವಶ್ಯ. ವಿಡಿಯೊ ನೋಡಿ…
-Team Infotrend