ಯುವಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದ ಕೈಗೆಟುಕುವ ಬೆಲೆಯ ಬಜಾಜ್ ಪಲ್ಸರ್ ಎನ್ಎಸ್ 125 ಭಾರತದಲ್ಲಿ ಬಿಡುಗಡೆ! ಇದರ ವೈಶಿಷ್ಟ್ಯ ಹೇಗಿವೆ ನೋಡಿ

ಬಜಾಜ್ ಪಲ್ಸರ್ ಎನ್ಎಸ್ 125.
ದೇಶದ ಪ್ರಮುಖ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾದ ಬಜಾಜ್ ಆಟೋ ತನ್ನ ಹೊಸ ಬಜಾಜ್ ಪಲ್ಸರ್ ಎನ್ಎಸ್ 125 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಬೈಕನ್ನು ವಿಶೇಷವಾಗಿ ಯುವಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದೆ. ಉತ್ತಮ ವೈಶಿಷ್ಟ್ಯಗಳೊಂದಿಗೆ ಬೆಲೆ ಕೂಡ ಸಾಕಷ್ಟು ರೀಜನೆಬಲ್ ಆಗಿದೆ. ಕಂಪನಿಯ ಈ ಬೈಕ್‌ ನಲ್ಲಿ ಯಾವ ವೈಶಿಷ್ಟ್ಯಗಳನ್ನು ನೀಡಲಾಗಿದೆ ಮತ್ತು ಅದರ ಮೌಲ್ಯ ಏನು ಎಂದು ನೋಡೋಣ ಬನ್ನಿ…

ಬೈಕ್ ಬೆಲೆ :
ಬಜಾಜ್ ತನ್ನ ಹೊಸ ಬೈಕು ಬಜಾಜ್ ಪಲ್ಸರ್ ಎನ್ಎಸ್ 125 ಅನ್ನು ಯುವಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದೆ. ಅಂದಹಾಗೆ ಬಜಾಜ್ ಅವರ ಪಲ್ಸರ್ ಅನೇಕ ವರ್ಷಗಳಿಂದ ಯುವಕರ ಹೃದಯವನ್ನು ಆಳುತ್ತಿದೆ. ಆದ್ದರಿಂದ ಭಾರತದಲ್ಲಿ ಬಜಾಜ್ ಪಲ್ಸರ್ ಪ್ರಥಮ ಸ್ಥಾನದಲ್ಲಿದೆ. ಬಜಾಜ್ ಪಲ್ಸರ್ ಎನ್ಎಸ್ 125 ಬೆಲೆಯ ಬಗ್ಗೆ ಮಾತನಾಡುವುದಾದರೆ, ಭಾರತದ ರಾಜಧಾನಿಯಾದ ದೆಹಲಿಯ ಎಕ್ಸ್ ಶೋ ರೂಂ ಬೆಲೆ 93,690 ರೂ. ದೆಹಲಿಯಲ್ಲಿಯೇ ಈ ಬೈಕು ಬಿಡುಗಡೆ ಮಾಡಲಾಗಿದೆ.

ಬಣ್ಣದ ಆಯ್ಕೆಗಳು ಮತ್ತು ವಿನ್ಯಾಸ :
ಬಜಾಜ್ ಪಲ್ಸರ್ ಎನ್ಎಸ್ 125 ಬೈಕ್ ಅನ್ನು ನೀಲಿ, ಕಿತ್ತಳೆ, ಕಡುಗೆಂಪು ಮತ್ತು ಬೂದು ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕ್‌ ನಲ್ಲಿ ಟ್ವಿನ್ ಪೈಲಟ್ ಲ್ಯಾಂಪ್‌ಗಳು, ಹೈ ಗ್ಲಾಸ್ ಮೆಟಾಲಿಕ್ ಪೇಂಟ್, ಪೆರಿಮೀಟರ್ ಫ್ರೇಮ್, ಅಲಾಯ್ ವೀಲ್ಸ್, ಇನ್ಫಿನಿಟಿ ಟ್ವಿನ್-ಸ್ಟ್ರಿಪ್ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಸಿಗ್ನೇಚರ್ ವುಲ್ಫ್-ಐಡ್ ಹೆಡ್‌ಲ್ಯಾಂಪ್ ಕ್ಲಸ್ಟರ್‌ಗಳನ್ನು ಒಳಗೊಂಡಿದೆ.

ಎಂಜಿನ್ ಶಕ್ತಿಯುತವಾಗಿದೆ :
ಬಜಾಜ್ ಪಲ್ಸರ್ ಎನ್ಎಸ್ 125 ಬೈಕು 124.45 ಸಿಸಿ ಎಸ್‌ಒಹೆಚ್‌ಸಿ ಎರಡು-ವಾಲ್ವ್, ಏರ್-ಕೂಲ್ಡ್ ಡಿಟಿಎಸ್-ಐ ಮೋಟಾರ್ ಎಂಜಿನ್ ಅನ್ನು ಬಳಸುತ್ತದೆ. ಈ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿದ್ದು, 7,500 ಆರ್‌ಪಿಎಂನಲ್ಲಿ 11 ಎನ್‌ಎಂ ಗರಿಷ್ಠ ಟಾರ್ಕ್ ಜೊತೆಗೆ 8,500 ಆರ್‌ಪಿಎಂನಲ್ಲಿ 12 ಬಿಹೆಚ್‌ಪಿ ಪಾವರ್ ಹೊಂದಿದೆ. ಈ ಬೈಕ್‌ನ ಒಟ್ಟು ತೂಕ 144 ಕೆ.ಜಿ.

ಕಂಪನಿ ಅಧಿಕಾರಿಗಳ ಹೇಳಿಕೆ :
ನಾವು ಹೈ ಸಿಸಿ ಪಲ್ಸರ್ ಎನ್ಎಸ್ ಶ್ರೇಣಿಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಕಂಪನಿಯ ಅಧ್ಯಕ್ಷ ಸಾರಂಗ್ ಕೆನಡಾ ಹೇಳಿದರು. ಬಜಾಜ್ ಪಲ್ಸರ್ ಎನ್‌ಎಸ್‌ 125 ಈ ಬೈಕು ಭಾರತದ ಕೆಟಿಎಂ 125 ಡ್ಯೂಕ್‌ ನೊಂದಿಗೆ ಸ್ಪರ್ಧಿಸಲಿದೆ. ಈ ಕೆಟಿಎಂ ಬೆಲೆ ಪ್ರಸ್ತುತ 1,56,432 ರೂ.! ಆದರೆ ಬಜಾಜ್ ಪಲ್ಸರ್ ಎನ್‌ಎಸ್‌ 125 ಬೈಕಿನ ಎಕ್ಸ್ ಶೋ ರೂಂ ಬೆಲೆ 93,690 ರೂ.
-Team Infotrend