ವೈರಲ್ ಫೋಟೊ : ಲಾಡ್ಜ್ ಬೋರ್ಡ್ ಥರ ಖಾಸಗಿ ಆಸ್ಪತ್ರೆಯ ರೇಟ್ ಬೋರ್ಡ್ ಹೇಗಿದೆ ನೋಡಿ! ಮಿತಿಮೀರಿದ ಈ ವಸೂಲಿ ತಡೆಯೋರಾರು?
ಇದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಐದಾರು ದಿನದಿಂದ ವೈರಲ್ ಆಗುತ್ತಿರುವ ಚಿತ್ರ. ಇದರಲ್ಲಿ ಲಾಡ್ಜ್ ನಲ್ಲಿ ಯಾವ ಯಾವ ರೂಮ್ ಗೆ ಎಷ್ಟೆಷ್ಟು ಅಂತ ಹಾಕಿರ್ತಾರಲ್ಲ ಹಾಗೆ ಹಾಕಿದಾರೆ ನೋಡಿ. ಸರ್ಕಾರದ ಅಸಹಾಯಕತೆಯನ್ನು ಅಥವಾ ಜನರ ಅನಿವಾರ್ಯತೆಯನ್ನು ತೀರ ಈ ಪರಿ ದುರ್ಬಳಕೆ ಮಾಡಿಕೊಳ್ಳುವುದು ಸರಿನಾ?
ಈ ಬೋರ್ಡ್ ನೋಡಿದರೇನೇ ಗೊತ್ತಾಗುತ್ತದೆ, ಬಡ ಹಾಗೂ ಮಧ್ಯಮ ವರ್ಗದವರು ಇಲ್ಲಿ ಚಿಕಿತ್ಸೆ ಪಡೆಯುವ ಕನಸು ಕೀಡ ಕಾಣುವ ಹಾಗಿಲ್ಲ. ಹಾಗಿದ್ದ ಮೇಲೆ ಈ ಆಸ್ಪತ್ರೆ ಬರೀ ಶ್ರೀಮಂತರಿಗೆ ಮಾತ್ರಾನಾ? ವೈದ್ಯರೆಲ್ಲ ವೃತ್ತಿ ಕಲಿಯುವಾಗ ಅದೇನೋ ಪ್ರತಿಜ್ಞೆ ಮಾಡುತ್ತಾರಲ್ಲ, ಅದನ್ನೆಲ್ಲ ಗಾಳಿಗೆ ತೂರಿದ ಹಾಗಲ್ವಾ?
ಸರ್ಕಾರ ಆಸ್ಪತ್ರೆ ಅಥವಾ ಸರ್ಕಾರ ನಿಗಧಿ ಮಾಡಿರುವ ಆಸ್ಪತ್ರೆಯಲ್ಲಿ ಬೆಡ್ ಫುಲ್ ಆಗಿದ್ದರೆ ಬಡವ ಅಥವಾ ಮಧ್ಯಮ ವರ್ಗದವನಿಗೆ ಚಿಕಿತ್ಸೆ ಇಲ್ಲವೆಂದೇ ಅರ್ಥ. ಏಕೆಂದರೆ ಇಂಥ ಖಾಸಗಿ ಆಸ್ಪತ್ರೆ ಒಳಗೆ ಹೋಗುವುದು ಕೂಡ ಆತನಿಗೆ ಸಾಧ್ಯವಿಲ್ಲ. ಮಾಹಿತಿಯ ಪ್ರಕಾರ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಒಂದೂವರೆ ಲಕ್ಷ ತುಂಬಿಸಿಕೊಂಡ ಮೇಲೆಯೇ ರೋಗಿಯನ್ನು ಒಳಗೆ ತಗೆದುಕೊಳ್ಳುತ್ತಾರಂತೆ! ಇದನ್ನು ಓದುತ್ತಿರುವ ಎಷ್ಟು ಜನರ ಬಳಿ ಈಗ ಸದ್ಯ ಒಂದೂವರೆ ಲಕ್ಷ ಇದೆ ಹೇಳಿ ನೋಡೋಣ?
ಕಳೆದೊಂದು ವರ್ಷದಿಂದ ಸರಿಯಾಗಿ ಪ್ಯಾಪಾರ ಕೂಡ ಇಲ್ಲದ ಅದೆಷ್ಟೊ ಜನರ ಬಳಿ ಹತ್ತಿಪ್ಪತ್ತು ಸಾವಿರ ಕೂಡ ಇರುವುದಿಲ್ಲ, ಅಂಥವರಿಗೆ ಕೋವಿಡ್ ಬಡಿದುಕೊಂಡರೆ, ಎಲ್ಲೂ ಹೊರಗೆ ಬೆಡ್ ಸಿಗದೇ ಇದ್ದರೆ ಆತನ ಕಥೆ ಏನು? ಎಟ್ಲಿಸ್ಟ್ ಸ್ವಲ್ಪ ಸಮಯ ಕೊಟ್ಟರೆ ಆತನ ಮನೆಯವರು ಏನಾದರೂ ಅಡ ಇಟ್ಟು ಒಂದಿಷ್ಟು ದುಡ್ಡು ಹೊಂದಿಸಿಯಾರು, ತೀರ ಒಂದೂವರೆ ಲಕ್ಷ ಕಟ್ಟಿಯೇ ಒಳಗೆ ಹೋಗಬೇಕು ಅಂದರೆ ಯಾರಿಗೆ ತಾನೆ ಸಾಧ್ಯವಿದೆ?

ಇಲ್ಲಿ ಸರ್ಕಾರ ಕೂಡ ಅಸಹಾಯಕವಾಗಿದೆ. ಕೋರೊನ ವಾರಿಯರ್ ಕೂಡ ಆದ ಅವರ ಮೇಲೆ ಹೆಚ್ಚಿಗೆ ಜೋರು ಮಾಡುವ ಹಾಗಿಲ್ಲ, ಯಾಕೆಂದರೆ ಹೊಟ್ಟೆ ತುಂಬಿದ ಅವರೆಲ್ಲ ತಮ್ಮ ಕೆಲಸದಿಂದ ಹಿಂದೆ ಸರಿದರೆ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆ. ಇಲ್ಲಿ ಖಾಸಗಿ ಆಸ್ಪತ್ರೆಯವರೇ ಸ್ವಲ್ಪ ಮಾನವೀಯತೆ ತೋರಿಸಿ ಬಡ ಮಧ್ಯಮ ವರ್ಗದವರಿಗೂ ಚಿಕಿತ್ಸೆ ಕೊಡುವ ಮನಸ್ಸು ಮಾಡಬೇಕು, ಇದು ನಮ್ಮ ವಿನಂತಿ ಕೂಡ.
-Team Infotrend