ಅಬ್ಬಾ! ಕೊರೊನಾ ಲಸಿಕೆ ಮಾರಾಟ ಮಾಡಿ ಈ ಕಂಪನಿ ಬರೀ 3 ತಿಂಗಳಲ್ಲಿ ಗಳಿಸಿರುವ ಆದಾಯ ಎಷ್ಟು ಗೊತ್ತಾ?
ಇದೀಗ ಇಡೀ ಜಗತ್ತು ಇನ್ನೂ ಕರೋನಾದೊಂದಿಗೆ ಹೋರಾಡುತ್ತಿದೆ. ಈ ಹೋರಾಟದ ಪ್ರಮುಖ ಆಯುಧವೆಂದರೆ ಲಸಿಕೆ. ಹಾಗೆ ನೋಡಿದರೆ ಈ ಕೊರೊನ ಬಂದ ಮೇಲೆ ಬಹುತೇಕರು ಬಡವರಾದರೆ ಕೆಲವರು ಮಾತ್ರ ಭರ್ತಿ ಶ್ರೀಮಂತರಾದರು. ಅನ್ಯದೇಶಗಳಲ್ಲಿ ಸೇರಿದಂತೆ ಭಾರತದಲ್ಲೂ ಕೊರೋನವನ್ನು ತಮ್ಮ ಲಾಭಕ್ಕೆ ಬಳಸಿಕೊಂಡ ಸಾಕಷ್ಟು ಉದಾಹರಣೆಗಳು ಇವೆ. ಇದಕ್ಕೆ ತಾಜಾ ಉದಾಹರಣೆ : ಮೊನ್ನೆ ಬಯಲಾದ ಬೆಡ್ ಬ್ಲಾಕ್ ದಂದೆ.
ರಾಜಕಾರಣಿಗಳು – ಅಧಿಕಾರಿಗಳು ಅಡ್ಡದಾರಿಯಿಂದ ಹಣ ಮಾಡಿಕೊಂಡರೆ, ಔಷಧಿ ಕಂಪನಿಗಳು ಕಾನೂನುಬದ್ದವಾಗಿಯೇ ಗಳಿಸಿದವು. ಅದರಲ್ಲೂ ಲಸಿಕೆ ಮಾರಾಟ ಮಾಡಿ ಈ ಕಂಪನಿ ಗಳಿಸಿರುವ ಆದಾಯ ಹುಬ್ಬೇರಿಸುವಂತಿದೆ. ಇದೀಗ ಲಸಿಕೆ ಮಾರಿ ಹಣ ಗಳಿಸುವಲ್ಲಿ ಯಾವ ಕಂಪನಿ ನಂಬರ್ 1 ಎಂದು ನೋಡುವುದಾಧರೆ, ಅದು ಫೈಜರ್ ಕಂಪನಿ.
ವಿಶ್ವಾದ್ಯಂತ ಕರೋನಾ ವೈರಸ್ ಪ್ರಾರಂಭವಾದಾಗ ನಂತರ ಫೈಜರ್ ಎಂಬ ಔಷಧ ಕಂಪನಿ ಲಸಿಕೆಯನ್ನು ಸರಿಯಾದ ಸಮಯದಲ್ಲಿ ತಯಾರಿಸಿತು. ನಂತರ ಈ ಫೈಜರ್ ಲಸಿಕೆಯಿಂದ ಅಧಿಕ ಲಾಭ ಗಳಿಸುವ ನಿರ್ಧಾರ ಮಾಡಿತು. ತನ್ನ ಸ್ವಾರ್ಥಿ ನಿರ್ಧಾರವನ್ನು ಬಹಿರಂಗವಾಗಿಯೇ ಪ್ರಕಟಿಸಿತು ಕೂಡ.
ಇತರ ಅನೇಕ ಸ್ಪರ್ಧಾತ್ಮಕ ಔಷಧೀಯ ಕಂಪನಿಗಳಿಗಿಂತ ಭಿನ್ನವಾಗಿ, ಫೈಜರ್ ತನ್ನ ಕರೋನಾ ಲಸಿಕೆಯಿಂದ ಲಾಭ ಗಳಿಸಲು ನಿರ್ಧರಿಸಿತು. ಕರೋನಾ ಬಿಕ್ಕಟ್ಟಿನ ಈ ಸಮಯದಲ್ಲಿ, ಔಷಧೀಯ ಕಂಪನಿಗಳು ಕರೋನಾ ಲಸಿಕೆಯಲ್ಲಿ ಲಾಭ ಗಳಿಸುವತ್ತ ಗಮನಹರಿಸುವುದಿಲ್ಲ ಎಂದು ನಿರ್ಧರಿಸಿದ್ದವು. ಆದರೆ ಫೈಜರ್ ತಿರುಗಿ ಬಿತ್ತು.

ಎಷ್ಟು ಗಳಿಕೆ :
ವಿಶ್ವದ ಪ್ರಮುಖ ಔಷಧೀಯ ಕಂಪನಿ ಫೈಜರ್ ಈ ವರ್ಷದ ಕೇವಲ 3 ತಿಂಗಳಲ್ಲಿ 3.5 ಅರಬ್ ಡಾಲರ್ ಗಳಿಸಿದೆ ಎಂದು ಘೋಷಿಸಿತು. ಇದು ಕಂಪನಿಯ ಒಟ್ಟು ಆದಾಯದ ಕಾಲು ಭಾಗ. ಕರೋನಾ ಲಸಿಕೆ ಫಿಜರ್ ಕಂಪನಿಯ ಒಟ್ಟು ಗಳಿಕೆಗೆ ಸಾಕಷ್ಟು ಕೊಡುಗೆ ನೀಡುತ್ತಿದೆ ಎಂದು ಕಂಪನಿಯೇ ಹೇಳಿದೆ.
$ 90 ಮಿಲಿಯನ್ ಲಾಭ ಗಳಿಸಿದೆ :
ಕರೋನಾ ಲಸಿಕೆ ಮಾರಾಟ ಮಾಡುವುದರಿಂದ ಎಷ್ಟು ಲಾಭ ಗಳಿಸಿದೆ ಎಂದು ಫೈಜರ್ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ತನ್ನ ಒಟ್ಟು ಆದಾಯ 20% ಹೆಚ್ಚಾದ ಬಗ್ಗೆ ಮಾಹಿತಿ ನೀಡಿತ್ತು, ಇದರರ್ಥ, ಮೊದಲ ತ್ರೈಮಾಸಿಕದಲ್ಲಿ ಕರೋನಾ ಲಸಿಕೆಯಿಂದ ಫೈಜರ್ ನ ಲಾಭ ಸುಮಾರು 90 ಕೋಟಿ ಡಾಲರ್ ಆಗಿರಬಹುದು! ಈ ಕಂಪನಿಯ ಕರೋನಾ ಲಸಿಕೆ ಪ್ರಪಂಚದಾದ್ಯಂತ ಅನೇಕ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ ಅನ್ನುವುದೇನೋ ನಿಜ, ಅದಕ್ಕೆ ತಕ್ಕನಾಗಿ ಭಾರಿ ಲಾಭ ಕೂಡ ಗಳಿಸಿದೆ.
ಬಡದೇಶಗಳಿಗೆ ಇಲ್ಲ :
ಫೈಜರ್ ನ ಕರೋನಾ ಲಸಿಕೆ ವಿಶ್ವದ ಶ್ರೀಮಂತ ರಾಷ್ಟ್ರಗಳನ್ನು ಮಾತ್ರ ತಲುಪುತ್ತಿದೆ. ಬಡ ದೇಶಗಳಿಗೂ ಕರೋನಾ ಲಸಿಕೆ ನೀಡುವ ಬಗ್ಗೆ ಯೋಚಿಸುತ್ತಿರುವುದಾಗಿ ಫೈಜರ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದಾರೆ. ಆದರೆ ಅದನ್ನು ಖರಿದಿಸುವ ಶಕ್ತಿ ಅವಕ್ಕಿರಬೇಕಲ್ಲ. ಕರೋನ ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಫೈಜರ್ ನ ಲಸಿಕೆ ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ.
-Team Infotrend