ಕೊರೊನಾ ಟೆಸ್ಟ್ ಕಿಟ್ ಪ್ಯಾಕಿಂಗ್ ಮಾಡುವ ಶಾಕಿಂಗ್ ವಿಡಿಯೋ; ನಮ್ಮ ಆರೋಗ್ಯದ ಕಥೆ ಏನು ಎನ್ನುತ್ತಿರುವ ಜನ! ನೋಡಿ ಈ ವಿಡಿಯೋ
ಕರೋನಾ ವೈರಸ್ ಈ ದಿನಗಳಲ್ಲಿ ಎಲ್ಲೆಡೆ ಭೀತಿಯನ್ನು ಉಂಟುಮಾಡಿದೆ. ಪ್ರತಿದಿನ ಲಕ್ಷಾಂತರ ಹೊಸ ಕರೋನಾ ಪ್ರಕರಣಗಳು ಹೊರಬರುತ್ತಿವೆ. ಕೋವಿಡ್-19 ಬಗೆಗಿನ ಸುದ್ದಿಗಳು – ವಿಡಿಯೊಗಳು ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಆದರೆ ಇಲ್ಲಿರುವ ಈ ವಿಡಿಯೊ ನೋಡಿದರೆ ಖಂಡಿತ ನಿಮಗೆ ಶಾಕ್ ಆಗುತ್ತದೆ, ಯಾಕೆಂದರೆ ಇದು ಕಂಪ್ಲೀಟ್ ಕೊರೋನ ಟೆಸ್ಟ್ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ.
ನಾವು ಕರೋನದೊಂದಿಗೆ ಹೋರಾಡುತ್ತಿದ್ದೇವೆ ಎಂದು ನಾವಂದುಕೊಂಡರೆ ಎಲ್ಲೊ ಕೆಲವರು ಇದನ್ನು ಮಜಾಕ್ ಅಂದುಕೊಂಡಿದ್ದಾರೇನೋ ಅನ್ನುವಷ್ಟರ ಮಟ್ಟಿಗೆ ಬೇಜವಾಬ್ದಾರಿ ಮೆರೆಯಲಾಗುತ್ತದೆ. ದೇಶದಲ್ಲಿ ಕರೋನಾ ವೈರಸ್ ನ ಎರಡನೇ ಅಲೆ ನಡೆಯುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಪರಿಸ್ಥಿತಿ ಹೆಚ್ಚು ಭೀಕರವಾಗುತ್ತಿದೆ. ಅದರಂತೆ ಕರೋನಾ ಪರೀಕ್ಷೆಯನ್ನು ಸಹ ಹೆಚ್ಚಿಸಲಾಗಿದೆ, ಆದರೆ…
ಕೊರೋನ ಟೆಸ್ಟ್ ಮಾಡುವ ಕಿಟ್ ಗಳೇ ಇನ್ಫೆಕ್ಟ್ ಆಗಿರುವ ಸಾಧ್ಯತೆಯಿದೆ! ವೀಡಿಯೊದಲ್ಲಿ ನೀವು ನೋಡುವಂತೆ ಕರೋನಾ ಮಾದರಿಯನ್ನು ತೆಗೆದುಕೊಳ್ಳಲು ಬಳಸುವ ಹತ್ತಿ ಕಡ್ಡಿಯನ್ನು ಸಣ್ಣ ಮಕ್ಕಳು ಹೇಗೆ ಪ್ಯಾಕ್ ಮಾಡುತ್ತಿದ್ದಾರೆ. ಇದು ಮಾತ್ರವಲ್ಲ ಸ್ವಚ್ಚತೆ ಅಥವಾ ಸೆಫ್ಟಿ ಏನೂ ಇಲ್ಲ ಇಲ್ಲಿ. ಖಾಲಿ ನೆಲದ ಮೇಲ ಮೇಲೆ ಐದಾರು ನಡುವೆ ಹಾಕಿಕೊಂಡು ಪ್ಯಾಕ್ ಮಾಡುತ್ತಿರುವ ಈ ಹತ್ತಿ ಬಡ್ಸ್ ಅದೆಷ್ಟು ಸುರಕ್ಷಿತ? ಇವಕ್ಕೆ ಅಲ್ಲಿರುವವರಿಂದಲೇ ಸೋಂಕು ತಗುಲುವ ಸಾಧ್ಯತೆಯಿದೆ.
ವೀಡಿಯೊ ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ : ಈ ವೀಡಿಯೊವನ್ನು ನೋಡಿದ ನಂತರ ಜನರು ಆಶ್ಚರ್ಯಚಕಿತರಾಗಿದ್ದಾರೆ, ಈ ನಿರ್ಲಕ್ಷ್ಯದ ಪರಿಣಾಮಗಳು ಎಷ್ಟು ಕೆಟ್ಟದಾಗಿರಬಹುದು ಎಂಬ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಉದ್ಭವಿಸುತ್ತಿವೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಟ್ವಿಟರ್ನಲ್ಲಿ ಈ ವೀಡಿಯೊವನ್ನು ಸುನಿಲ್ ಕುಮಾರ್ ಸಿಂಗ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ.
ವೀಡಿಯೊ ಹಂಚಿಕೊಳ್ಳುವಾಗ, ‘ಕೋವಿಡ್ ಸ್ವಾಬ್ ಟೆಸ್ಟ್ ಕಿಟ್ ಅನ್ನು ಉಲ್ಹಾಸ್ನಗರದಲ್ಲಿ ಪ್ಯಾಕ್ ಮಾಡಲಾಗುತ್ತಿದೆ’ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ ಮತ್ತು ಜನರು ಇದರ ಬಗ್ಗೆ ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
#Ulhasnagar में
— sunilkumar singh (@sunilcredible) May 5, 2021
ऐसे पैक की जा रही है #Covid SwabTest Kit !! @umc_covid19 कर ही है जांच।@CMOMaharashtra @OfficeofUT@rajeshtope11 @Dev_Fadnavis pic.twitter.com/4SfB8H0hCP
ಕಹಿ ಸತ್ಯವೇನೆಂದರೆ, ಈ ಪ್ಯಾಕ್ ಮಾಡುವವರಲ್ಲಿ ಒಬ್ಬರು ಯಾರಾದರೂ ಸೋಂಕಿತರಾಗಿದ್ದರೆ, ಆ ಬಡ್ಸ್ ನಿಂದ ಟೆಸ್ಟ್ ಮಾಡಲಾಗುವ ಎಲ್ಲರ ವರದಿ ಕೂಡ ಪಾಸಿಟಿವ್ ಬರುತ್ತದೆ! ಇನ್ನೂ ಅಚ್ಚರಿಯೇನೆಂದರೆ ಅವರಲ್ಲಿ ಮಾಸ್ಕ್, ಗ್ಲೌಸ್ ಕೂಡ ಇಲ್ಲದೇ ಕಾಲ ಕೆಳಗೆ ಹಾಕಿಕೊಂಡು ಪ್ಯಾಕ್ ಮಾಡಿದ್ದ ಕಡ್ಡಿಗಳನ್ನು ಇವರು ಇಲ್ಲಿ ಅತ್ಯಂತ ಸುರಕ್ಷಿತವಾಗಿ ಗ್ಲೌಸ್ ಹಾಕಿಕೊಂಡೇ ಮುಟ್ಟುತ್ತಾರೆ!
-Team Infotrend