VIDEO : ತಮಾಷೆಗೆ ಮನೆ ನನ್ನದು ಎಂದ ಮೊಮ್ಮಗ; ಅದಕ್ಕೆ ಅಜ್ಜಿ ಕೊಟ್ಟ ಉತ್ತರ ಈಗ ಫುಲ್ ವೈರಲ್!
ಸೋಷಿಯಲ್ ಮೀಡಿಯಾದಲ್ಲಿ ಹತ್ತಾರು ರೀತಿಯ ವೀಡಿಯೊಗಳು ವೈರಲ್ ಆಗುತ್ತಿವೆ. ಕೆಲವು ವೀಡಿಯೊಗಳು ಭಾವನಾತ್ಮಕವಾಗಿದ್ದರೆ, ಕೆಲವು ವೀಡಿಯೊಗಳು ನಗು ತರಿಸುತ್ತವೆ. ಜಾಲತಾಣದಲ್ಲಿ ಯಾವುದು ಟ್ರೆಂಡ್ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಅಂತಹ ಒಂದು ಅಜ್ಜಿ-ಮೊಮ್ಮಗ ತಮಾಷೆಯ ವಿಡಿಯೋ ಇವತ್ತು ವೈರಲ್ ಆಗುತ್ತಿದೆ.
ಈ ವೈರಲ್ ವೀಡಿಯೊದಲ್ಲಿ, ಮೊಮ್ಮಗನೊಬ್ಬ ಮನೆ ತನ್ನದು ಎನ್ನುತ್ತಾನೆ, ನಂತರ ತನ್ನ ತಂದೆಯ ಮನೆ ಎಂದು ತಮಾಷೆಯಾಗಿ ಹೇಳಿದನು, ಆಗ ಅಜ್ಜಿಗೆ ಕೋಪ ಬಂತು. ಕೋಪದಲ್ಲಿ, ಸರಿಯಾದ ಉತ್ತರವನ್ನೇ ಕೊಟ್ಟು ಮೊಮ್ಮಗನ ಬಾಯಿ ಮುಚ್ಚಿಸಿದಳು, ಅವರಿಬ್ಬರ ಮಧ್ಯದ ಸಂಭಾಷಣೆ ಹೀಗಿದೆ…
ಮೊಮ್ಮಗ : ಅಜ್ಜಿ ನಾನು ನಿಮ್ಮ ಮೊಮ್ಮಗ, ನಿಮಗೆ ಗೊತ್ತಲ್ವಾ?
ಅಜ್ಜಿ : ಗೊತ್ತು, ಈಗ ನಿನಗೆ ಏನಾಗಬೇಕು ಹೇಳು?
ಮೊಮ್ಮಗ : ಇದು ನನ್ನ ಮನೆ ಗೊತ್ತಲ್ವಾ?
ಅಜ್ಜಿ : ನಿಂದೆಲ್ಲಿ ಬರಬೇಕು, ಇದು ನನ್ನ ಮನೆ
ಮೊಮ್ಮಗ : ಇದು ನಮ್ಮಪ್ಪನ ಮನೆ
ಅಜ್ಜಿ : ಮನೆ ನಾನು ಮಾಡಿದ್ದು, ನಿಮ್ಮಪ್ಪ ಆಮೇಲೆ ಬಂದಿದ್ದು, ಎರಡೂ ನಾನೇ ಮಾಡಿದ್ದೇನೆ, ಮನೆ ನನ್ನದು, ನಡಿ ನೀ
ಮೊಮ್ಮಗ : ನಾ ಎಲ್ಲಿಗೆ ಹೋಗ್ಲಿ ಅಜ್ಜಿ?
ಅಜ್ಜಿ : ಹೋಗಲ್ಲ ಅಂದ್ರೆ ನನ್ ಮನೆಯಲ್ಲೇ ಬಿದ್ದಿರು
ಹಿಂದಿ ಸಂಭಾಷಣೆ ಕನ್ನಡೀಕರಿಸಿದಾಗ ಅಷ್ಟೊಂದು ಸರಿ ಅನಿಸುವುದಿಲ್ಲ, ಅವರ ಬಾಯಲ್ಲೇ ಕೇಳಬೇಕು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇದನ್ನು ವಿಭೋರ್ ಫಿಟ್‌ನೆಸ್ ಎಂಬ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಈ ಥರ ಅಜ್ಜಿ ಮೊಮ್ಮಕ್ಕಳ ಸಂಭಾಷಣೆ ನಮ್ ಕಡ ಕೂಡ ಸಾಕಷ್ಟು ನಡೆಯುತ್ತದಾದರೂ ಇದು ರೆಕಾರ್ಡಿಂಗ್ ಆಗಿರುವುದುರಿಂದ ವೈರಲ್ ಆಗ್ತಿದೆ ಅಷ್ಟೇ. ನಮ್ ಕಡೆ ಅಜ್ಜಿಯರು ಇದಕ್ಕೂ ಜಬರ್ದಸ್ತಾಗಿ ಉತ್ತರ ಕೊಡ್ತಾರೆ.
ಜನರು ಅದನ್ನು ಸಾಕಷ್ಟು ಶೇರ್ ಮಾಡುತ್ತಿದ್ದಾರೆ, ಅದರ ಬಗ್ಗೆ ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈವರೆಗೆ 10 ಲಕ್ಷಕ್ಕೂ ಹೆಚ್ಚು ಜನರು ವಿಡಿಯೋ ನೋಡಿದ್ದಾರೆ. ಒಬ್ಬ ಬಳಕೆದಾರರು ‘ಬಿಂದಾಸ್ ದಾದಿ’ ಎಂದು ಬರೆದಿದ್ದಾರೆ, ಇನ್ನೊಬ್ಬರು ‘ನಿಮ್ಮ ಅಜ್ಜಿಯನ್ನು ನೋಡಿದ ನಂತರ ನಾನು ನನ್ನ ಅಜ್ಜಿಯನ್ನು ನೆನಪಿಸಿಕೊಂಡೆ.’ ಎಂದಿದ್ದಾರೆ.
-Team Infotrend