5g ನೆಟ್ವರ್ಕ್ ಟೆಸ್ಟಿಂಗ್ ನಿಂದ ಕೊರೊನ ಎರಡನೇ ಅಲೆ ಹರಡಿದೆಯಾ? ಈ ಬಗ್ಗೆ WHO ಏನ್ ಹೇಳಿದೆ ನೋಡಿ

ಕೊರೋನ ಎರಡನೇ ಅಲೆ ಭಾರತದಾದ್ಯಂತ ಅಬ್ಬರಿಸುತ್ತಿದೆ. ದಿನಕ್ಕೆ ಸಾವಿರಾರು ಜನ ಸಾವನ್ಮಪ್ಪುತ್ತಿದ್ದಾರೆ. ಸೋಂಕು ತಗಲುವವರ ಸಂಖ್ಯೆಯಂತೂ ವಿಶ್ವದಾಖಲೆ ಮಟ್ಟದಲ್ಲಿವೆ. ಈ ನಡುವೆ ಕೊರೊನಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳಿಗೂ ಏನು ಬರವಿಲ್ಲ. ಕೊರೋನ ಅನ್ನೋದೇ ಇಲ್ಲ ಅನ್ನುವುದರಿಂದ ಹಿಡಿದು ಇದು 5g ಟೆಸ್ಟಿಂಗ್ ಪರಿಣಾಮ ಅನ್ನುವವರೆಗೆ ಜನ ಸುಳ್ಳು ಬಿತ್ತುತ್ತಿದ್ದಾರೆ‌.

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟೀಕರಣ ನೀಡಿದೆ. (WHO) …
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೊನ ವೈರಸ್ 5g ಮೊಬೈಲ್ ನೆಟ್ವರ್ಕ್ ರೇಡಿಯೊ ತರಂಗದಿಂದ ಹರಡಿಲ್ಲ. ಏಕೆಂದರೆ ಕೊರೋನ ವೈರಸ್ 5g ಟೆಸ್ಟಿಂಗ್ ಇಲ್ಲದ ದೇಶಗಳಲ್ಲಿಯೂ ಹಬ್ಬಿದೆ.

PIB ಅಂದರೆ Press Information Bureau ರವರ ಪ್ರಕಾರ ಕೂಡ ಇದೊಂದು ಸುಳ್ಳು ಸುದ್ದಿಯಾಗಿದೆ. 5g ಯಿಂದ ಜನ ಸಾವನ್ನಪ್ಪುತ್ತಿದ್ದಾರೆ ಎಂಬುದಾಗಲಿ ಅಥವಾ ಅದರಂದ ಕೊರೊನ ಹರಡುತ್ತಿದೆ ಎಂಬುದಾಗಲಿ ಅಪ್ಪಟ ಸುಳ್ಳು, ಕರೋನಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹರಡುವುದು ಕೊರೊನದಷ್ಟೆ ಅಪಾಯಕಾರಿ ಎಂದು ಅದು ಹೇಳಿದೆ.

ಅದು ಜನರಲ್ಲಿ ಕೂಡ ವಿನಂತಿ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿನ ಇಂಥ ಯಾವುದೇ ಪೋಸ್ಟ್ ಗಳನ್ನು ನಂಬಬಾರದು ಎಂದಿದೆ. ವಿಜ್ಞಾನಿಗಳು ಕೂಡ ಇದೊಂದು ಆಧಾರರಹಿತ ಸುದ್ದಿ ಎಂದಿದ್ದು, ಕೋವಿಡ್ 19 ಗೂ – 5g ನೆಟ್ವರ್ಕ್ ಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
-Team Infotrend