ಶನಿದೇವರ ವಕ್ರದೃಷ್ಟಿ ನಿಮ್ಮ ಮೇಲೆ ಬಿದ್ದಿರುವುದು ಹೇಗೆ ಗೊತ್ತಾಗುತ್ತದೆ? ಸಾಡೆಸಾತಿಯಿಂದ ತಪ್ಪಿಸಿಕೊಳ್ಳುವುದು ಹೇಗೆ?
ಶನಿದೇವರೆಂದರೆ ಭಯ ಬೇಡ, ಆತ ನಮ್ಮ ಕರ್ಮಗಳಿಗೆ ತಕ್ಕ ಫಲ ನೀಡುವಾತ ಅಷ್ಟೇ, ಶನಿದೇವ ಖಂಡಿತ ಕ್ರೂರಿ ಅಲ್ಲ. ಇನ್ನು ಶನಿದೇವನನ್ನು ಕೂಡ ಸಂಪ್ರೀತಗೊಳಿಸಬಹುದು, ನಮ್ಮ ಮೇಲಿನ ಆತನ ಕೋಪ ಕಡಿಮೆ ಮಾಡಬಹುದು. ಸಾಡೆಸಾತಿಯಿಂದ ತಪ್ಪಿಸಿಕೊಳ್ಳಬಹುದು. ಆ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ, ಆಸಕ್ತರು – ನಂಬಿಕೆ ಇರುವವರು ಮಾತ್ರ ಓದಿ…
ಜ್ಯೋತಿಷ್ಯದ ಪ್ರಕಾರ, ಏಳೂವರೆ ವರ್ಷಗಳ ಕಾಲ ಇರುವ ಶನಿಗ್ರಹದ ಸ್ಥಿತಿಯನ್ನು ಶನಿಯ ಸಾಡೆಸಾತಿ ಎಂದು ಕರೆಯಲಾಗುತ್ತದೆ. ನೀವು ಜೀವನದಲ್ಲಿ ಯಾವ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದೀರಿ ಎಂಬ ಆಧಾರದ ಮೇಲೆ ನಿಮ್ಮ ಸಾಡೆಸಾತಿ ಸುರುವಾಗಿದೆಯಾ ಇಲ್ಲವಾ ಎಂದು ಗುರುತಿಸಬಹುದು. ಅದರ ಬಗ್ಗೆ ಇಲ್ಲಿ ತಿಳಿಯಿರಿ…
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯು ಕ್ರೂರ ಗ್ರಹ ಎಂದು ಕರೆಯಲ್ಪಟ್ಟಿದೆ ಮತ್ತು ಶನಿಯ ಪರಿಣಾಮಗಳು ಯಾವಾಗಲೂ ಕೆಟ್ಟ ಫಲಿತಾಂಶಗಳಿಗೆ ಕಾರಣವಾಗುತ್ತವೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ, ಆದರೆ ಇದು ಸಂಪೂರ್ಣವಾಗಿ ಸರಿಯಲ್ಲ. ಶನಿ ಪ್ರತಿ ಜೀವಿಗಳಿಗೆ ಸರಿಯಾದ ನ್ಯಾಯವನ್ನು ನೀಡುತ್ತಾನೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ಆತನ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ.

ಆದ್ದರಿಂದ ಶನಿದೇವನನ್ನು ನ್ಯಾಯದ ದೇವರು ಎಂದೂ ಕರೆಯುತ್ತಾರೆ. ಇಂದು ನಾವು ನಿಮಗೆ ಹೇಳುತ್ತಿರುವುದು ಜೀವನದಲ್ಲಿನ ಸಮಸ್ಯೆಗಳು ಮತ್ತು ರೋಗಲಕ್ಷಣಗಳ ಆಧಾರದ ಮೇಲೆ ಶನಿಯ ಸಾಡೆಸಾತಿ ಪ್ರಾರಂಭವಾಗಿದೆ ಎಂದು ತಿಳಿಯಬಹುದು ಮತ್ತು ಅದರ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ.
ಶನಿಯ ಸಾಡೆಸಾತಿ ಎಂದರೇನು?
ಜ್ಯೋತಿಷ್ಯದ ಪ್ರಕಾರ, ಏಳೂವರೆ ವರ್ಷಗಳ ಕಾಲ ಇರುವ ಶನಿಗ್ರಹದ ಸ್ಥಿತಿಯನ್ನು ಶನಿಯ ಸಾಡೆಸಾತಿ ಎಂದು ಕರೆಯಲಾಗುತ್ತದೆ. ಇತರ ಗ್ರಹಗಳಿಗೆ ಹೋಲಿಸಿದರೆ ಶನಿಯ ಚಲನೆ ನಿಧಾನವಾಗಿರುತ್ತದೆ ಮತ್ತು ಅದು ಸುಮಾರು ಎರಡೂವರೆ ವರ್ಷಗಳ ಕಾಲ ಒಂದು ರಾಶಿಚಕ್ರದಲ್ಲಿ ಉಳಿದು ನಂತರ ಎರಡನೇ ರಾಶಿಚಕ್ರವನ್ನು ಪ್ರವೇಶಿಸುತ್ತವೆ. ಶನಿಯು ಏಕಕಾಲದಲ್ಲಿ ಮೂರು ಸಲ ಯಾವುದೇ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಎರಡೂವರೆ ವರ್ಷದ ಮೂರು ಹಂತಗಳು ಏಳೂವರೆ ವರ್ಷಗಳವರೆಗೆ ನಡೆಯುತ್ತವೆ. ಇದನ್ನೇ ಸಾಡೆಸಾತಿ ಅನ್ನುತ್ತಾರೆ.
ಸಾಡೆಸಾತಿಯಲ್ಲಿ ಮೂರು ಹಂತಗಳಿವೆ :
ಶನಿಯ ಒಂದು ಹಂತವು ಎರಡೂವರೆ ವರ್ಷಗಳು ಮತ್ತು ಮೊದಲ ಹಂತದಲ್ಲಿ ಶನಿಯು ಮಾನಸಿಕವಾಗಿ ತೊಂದರೆಗೊಳಿಸುತ್ತದೆ (ಮಾನಸಿಕ ಸಮಸ್ಯೆ). ಈ ಸಮಯದಲ್ಲಿ ನೀವು ಮಾನಸಿಕ ಒತ್ತಡ ಮತ್ತು ಅನಗತ್ಯ ಕಿರಿಕಿರಿಯನ್ನು ಅನುಭವಿಸಬಹುದು ಮತ್ತು ವಿಪರೀತ ತಲೆನೋವು ಇರುತ್ತದೆ. ಸಾಡೆಸಾತಿಯ ಎರಡನೇ ಹಂತದಲ್ಲಿ, ಆರ್ಥಿಕ ಮತ್ತು ದೈಹಿಕ ಸಮಸ್ಯೆ ಪ್ರಾರಂಭವಾಗುತ್ತದೆ.

ಉದ್ಯೋಗದಲ್ಲಿ ಹಠಾತ್ ನಷ್ಟ, ಖರ್ಚಿನಲ್ಲಿ ಅನಿರೀಕ್ಷಿತ ಏರಿಕೆ, ಕೆಲವು ದೊಡ್ಡ ಕಾಯಿಲೆ ಅಥವಾ ಅಪಘಾತವಾಗುವುದು… ಇವು ಅರ್ಧ ಸಾಡೆಸಾತಿಯ ಎರಡನೇ ಹಂತದ ಲಕ್ಷಣಗಳಾಗಿವೆ. ಸಾಡೆಸಾತಿಯ ಮೂರನೇ ಹಂತವನ್ನು ಭಾರಿ ಕೆಟ್ಟದ್ದು ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ ಮೂರನೇ ಹಂತ ಉತ್ತಮವೆಂದು ಪರಿಗಣಿಸಲಾಗುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಈ ಸಮಯದಲ್ಲಿ ಶನಿ ದೇವ ನಷ್ಟವನ್ನು ಸರಿದೂಗಿಸುತ್ತಾನೆ.
ಶನಿಯ ಸಾಡೆಸಾತಿಯ ಚಿಹ್ನೆಗಳು :
*ಅಂಗೈ ಬಣ್ಣ ಬದಲಾಗುವುದು ಅಥವಾ ಅಂಗೈ ರೇಖೆಗಳಲ್ಲಿ ನೀಲಿ ಅಥವಾ ಕಪ್ಪು ಬಣ್ಣದ ಕೆಲವು ಕಲೆಗಳು ಆಗುವುದು.
*ಹಣೆಯಿಂದ ಹೊಳಪು ಕಣ್ಮರೆಯಾಗುವುದು ಮತ್ತು ಹಣೆಯ ಮೇಲೆ ಕಪ್ಪು ಬಣ್ಣ ಕಾಣುವುದು, ಯಾವುದೋ ವಿಷಯಕ್ಕೆ ಅವಮಾನ ಆಗಬಹುದೆಂಬ ಭಯದಿಂದ ಯಾವಾಗಲೂ ಚಿಂತೆ ಕಾಡುತ್ತಿರುತ್ತದೆ.
*ಉಗುರು ದುರ್ಬಲಗೊಳ್ಳುವುವು, ತಾವಾಗೇ ಮುರಿತೊಡಗುತ್ತವೆ.
*ಕಣ್ಣುಗಳ ಕೆಳಗೆ ಕಪ್ಪು ಸರ್ಕಲ್ ಕಾಣಿಸುತ್ತದೆ.
*ಮಾತಿನಲ್ಲಿ ಒರಟುತನ, ಕೋಪ ಯಾವಾಗಲೂ ಇರುತ್ತದೆ.
*ಸದಕಾಲ ಉಗ್ರ ವಿನಾಶಕಾರಿ ಆಲೋಚನೆಗಳು ಇರುವುವು.
*ಕುಟುಂಬದಲ್ಲಿ ಅಪಶ್ರುತಿ
ಶನಿಯ ಸಾಡೆಸಾತಿಗೆ ಪರಿಹಾರ :
1 ಶನಿದೇವ ನಮ್ಮ ಕಾರ್ಯಗಳಿಗೆ ಅನುಗುಣವಾಗಿ ಫಲ ನೀಡುತ್ತಾನೆ ೆಂಬುದನ್ನು ಮೊದಲೇ ನಿಮಗೆ ಹೇಳಲಾಗಿದೆ. ದಾನವನ್ನು ಒಂದು ಪುಣ್ಯ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶನಿವಾರ ಕಬ್ಬಿಣ, ಕಪ್ಪು ಉದ್ದು, ಕಪ್ಪು ಎಳ್ಳು ಅಥವಾ ಕಪ್ಪು ಬಟ್ಟೆಯನ್ನು ದಾನ ಮಾಡುವ ಮೂಲಕ ಶನಿದೇವನನ್ನು ಸಂತಸಗೊಳಿಸಬಹುದು.

2 ಶನಿವಾರ ಅರಳಿ ಮರದ ಕೆಳಗೆ ಒಂದು ದೀಪವನ್ನು ಬೆಳಗಿಸಿ ಮತ್ತು ಶನಿ ಸ್ತ್ರೋತ್ರವನ್ನು ಪಠಿಸಿದರೆ ಶನಿದೇವ ಇದರಿಂದ ಸಂತಸಗೊಳ್ಳುತ್ತಾನೆ.
3 ಶನಿವಾರ ಶನಿದೇವರ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಶನಿದೇವನಿಗೆ ಅರ್ಪಿಸಿ.
4 ಹನುಮಂತನನ್ನು ಪೂಜಿಸುವ ಮೂಲಕ ಕೂಡ ಶನಿದೇವ ಶಾಂತವಾಗುತ್ತಾನೆ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುವುದಿಲ್ಲ. ಆದ್ದರಿಂದ ಶನಿಯ ಸಾಡೆಸಾತಿ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಆಂಜನೇಯನನ್ನು ಆರಾಧಿಸಿ ಮತ್ತು ಹನುಮಾನ್ ಚಾಲಿಸಾ ಓದಿ.
-Team Infotrend