ಅಚ್ಚರಿಯ ವಿಡಿಯೊ : ಎಲ್ಲ ಬಾಳೆ ಮರಗಳನ್ನು ತುಳಿದು ಹಾಕಿದ ಆನೆಗಳು ಒಂದು ಮರವನ್ನು ಮಾತ್ರ ಹಾಗೇ ಉಳಿಸಿದವು! ಕಾರಣ ಏನು ಗೊತ್ತಾ?
ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ಅಲ್ಲಿನ ರೈತರೊಬ್ಬರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಎಲ್ಲ ತೋಟವನ್ನು ನಾಶಪಡಿಸಿವೆ. ಆದರೆ ಒಂದು ಗಿಡವನ್ನು ಮಾತ್ರ ಏನೂ ಮಾಡಿಲ್ಲ. ಈ ಕಾರಣಕ್ಕಾಗೇ ಇವತ್ತು ಈ ವಿಡಿಯೊ ಭರ್ಜರಿ ವೈರಲ್ ಆಗುತ್ತಿರುವುದು. ಅದರ ಹಿಂದಿರುವ ಕಾರಣ ಎಂಥವರನ್ನೂ ಅಚ್ಚರಿಗೆ ದೂಡುತ್ತದೆ.
ದೈತ್ಯಾಕಾರದ ಆನೆಗಳನ್ನು ದಡ್ಡ ಪ್ರಾಣಿ ಅಥವಾ ಅವುಗಳಿಗೆ ಬುದ್ದಿ ಶಕ್ತಿ ಕಡಿಮೆ ಎಂದು ನಂಬಿದವರಿದ್ದಾರೆ. ಆದರೆ ನಿಜಕ್ಕೂ ಈ ಪ್ರಾಣಿಗಳು ಬುದ್ದಿವಂತ ಮಾತ್ರವಲ್ಲ ಭಾವನಾತ್ಮಕ ಜೀವಿ ಕೂಡ ಹೌದು. ಹಿಂದೆಲ್ಲ ಆನೆಗಳು ಎಲೆಕ್ಟ್ರಿಕ್ ಬೇಲಿ ದಾಟಲು ತಲೆ ಓಡಿಸಿದ ವಿಡಿಯೊಗಳನ್ನು ನೋಡಿರಬಹುದು. ಹಾಗೆಯೇ ಇವು ಇತರೆ ಪ್ರಾಣಿಗಳನ್ನು ರಕ್ಷಿಸುವಲ್ಲಿಯೂ ಹಲವು ಸಲ ಮುಂದೆ ಬಂದ ಉದಾಹರಣೆಗಳಿವೆ.
ಸಿಂಹಗಳಿಂದ ಎಮ್ಮೆ, ಜಿಂಕೆಯನ್ನು ಕಾಪಾಡಿದ ಆನೆಗಳ ವಿಡಿಯೊ ಕೂಡ ಹಿಂದೆ ವೈರಲ್ ಆಗಿದ್ದವು. ಅದೇ ರೀತಿ ಈ ವಿಡಿಯೊ ಕೂಡ ಹಾಗೇ ಇದೆ. ಇಲ್ಲಿ ಆನೆಗಳು ಕೋಪದಿಂದ ಬಾಳೆ ತೋಟಕ್ಕೆ ನುಗ್ಗಿ ಎಲ್ಲವನ್ನು ದ್ವಂಸ ಮಾಡಿ ಹೋಗಿದ್ದಾವೆ. ಆದರೆ ಒಂದೇ ಒಂದು ಗಿಡವನ್ನು ಮಾತ್ರ ಬಿಟ್ಟಿವೆ! ಇದ್ಯಾಕೆ ಅಂತ ಎಲ್ಲರೂ ತಲೆ ಕೆಡಿಸಿಕೊಂಡು ಸರಿಯಾಗಿ ಅಬ್ಸರ್ವ್ ಮಾಡಿದಾಗ ತಿಳಿದ ಕಾರಣ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ವಾಸ್ತವವಾಗಿ ಆ ಗಿಡದಲ್ಲಿ ಪಕ್ಷಿಯೊಂದು ಗೂಡು ಮಾಡಿಕೊಂಡಿದ್ದು, ಅಲ್ಲಿ ಅದು ತನ್ನ ಮರಿಗಳಿಗೆ ಜನ್ಮ ನೀಡಿ ಪೋಷಣೆ ಮಾಡುತ್ತಿದೆ. ಅಂಥ ಗಡಿಬಿಡಿಯಲ್ಲಿಯೂ ಅಥವಾ ಕೋಪದಲ್ಲಿಯೂ ಆನೆ ಈ ಗಿಡದಲ್ಲಿರುವ ಪಕ್ಷಿಗಳ ಗೂಡು ಹಾಗೂ ಪುಟ್ಟ ಮರಿಗಳನ್ನು ನೋಡಿರುವುದು ಮತ್ತು ಅವುಗಳಿಗೆ ಏನೂ ತೊಂದರೆ ಕೊಡದೇ ಹಾಗೇ ಬಿಟ್ಟಿರುವುದು ಎಲ್ಲರ ಹುಬ್ಬೇರಿಸಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಈ ವಿಡಿಯೊ ವೈರಲ್ ಮಾಡಿದ್ದಾರೆ.
This is the reason as to why elephants are called gentle giants. Destroyed all the banana trees , except the one having nests.
— Susanta Nanda IFS (@susantananda3) May 7, 2021
Gods amazing Nature🙏
(Shared by @Gowrishankar005) pic.twitter.com/iK2MkOuvaM
ಬಹುಶಃ ಹಿಂದ್ಯಾವತ್ತೂ ಆನೆ ತೀರ ಇಷ್ಟೊಂದು ಮಾನವೀಯತೆ (?) ಮೆರೆದ ಉದಾಹರಣೆಗಳಿಲ್ಲ. ವಿನಾಕಾರಣ ಕಣ್ಣಿಗೆ ಕಾಣಿಸುವುದೆಲ್ಲವನ್ನೂ ನಾಶ ಮಾಡುವ ಮನುಷ್ಯನಿಗಿಂತ ಇಂಥ ಮೂಕಪ್ರಾಣಿಗಳೇ ಎಷ್ಟೋ ಮೇಲು. ಇಂಥದನ್ನು ನೋಡಿಯೇ “ಪ್ರಾಣಿಗಳೇ ಗುಣದಲಿ ಮೇಲೂ… ಮಾನವನದಕ್ಕಿಂತ ಕೀಳು…” ಎಂಬ ಹಾಡು ಹುಟ್ಟಿರಬಹುದು.
-Team Infotrend