VIDEO : ಮಗಳು ಜಾನಕಿಯ ತಂಗಿ ಐಶ್ವರ್ಯಾಳ ಅದ್ಭುತ ಹಾಡು : ಕಣ್ಣು ಹೊಡಿಯಾಕ… ವಿಡಿಯೊ ನೋಡಿ

ನಿಮಗೆಲ್ಲ ಟಿ.ಎನ್ ಸೀತಾರಾಂ ರವರ ಜನಪ್ರಿಯ ದಾರಾವಾಹಿ ಮಗಳು ಜಾನಕಿ ಗೊತ್ತೇ ಇದೆ. ಆ ದಾರಾವಾಹಿ ಅರ್ದಕ್ಕೇ ನಿಂತಿತಾದರೂ, ಅದರ ಮೂಲಕ ಮನೆಮಾತಾದ ಮಗಳು ಜಾನಕಿಯ ತಂಗಿ ಪಾತ್ರ ವಹಿಸಿದ್ದ ಐಶ್ವರ್ಯ ರಂಗರಾಜನ್ ಒಬ್ಬ ಗಾಯಕಿ ಕೂಡ ಹೌದು. ನಟನೆಗೂ ಮೊದಲು ಆಕೆ ತನ್ನ ಹಾಡಿನ ಮೂಲಕವೇ ನಾಡಿಗೆ ಪರಿಚಯವಾದವಳು.

ಸರಿಗಮಪ-11 ರಲ್ಲಿ ಗಮನ ಸೆಳೆದಿದ್ದ ಐಶ್ವರ್ಯಾ ತಮಿಳಿನ ಸರಿಗಮಪಕ್ಕೂ ಆಯ್ಕೆಯಾಗಿದ್ದರು. ಎರಡೂ ಕಾರ್ಯಕ್ರಮಗಳಲ್ಲಿ ಅದ್ಬುತ ಪ್ರದರ್ಶನ ನೀಡಿದ ಅವರು ಜಡ್ಜ್ ಗಳ ಗಮನ ಸೆಳೆದಿದ್ದರು. ತಮಿಳು ಸರಿಗಮಪದಲ್ಲಿಯಂತೂ ತೀರ್ಪುಗಾರರಾದ ಶ್ರೀನಿವಾಸ್ ಹಾಗೂ ಸುಜಾತರವರು ಐಶ್ವರ್ಯಾ ಗಾಯನದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿ “ನಿಮ್ಮನ್ನು ಪಡೆಯಲು ಈ ವೇದಿಕೆ ಪುಣ್ಯ ಮಾಡಿದೆ” ಎಂದಿದ್ದರು.

ಹೀಗೆ ಚಿಕ್ಕಂದಿನಲ್ಲೇ ಬಹುಮುಖ ಪ್ರತಿಭೆಯಾಗಿರುವ ಐಶ್ವರ್ಯಾ ನಟನೆಯ ಮೂಲಕವೂ ಗಮನ ಸೆಳೆದವರು. ಕಲರ್ಸ್ ಕನ್ನಡದ ಮಗಳು ಜಾನಕಿ ದಾರಾವಾಹಿಯಲ್ಲಿ ಜಾನಕಿಯ ತಂಗಿ ಚಂಚಲಾ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಳು. ನಟನೆಯ ಜೊತೆಗೆ ತನ್ನ ಗಾಯನವನ್ನೂ ಮುಂದುವರೆಸಿರುವ ಐಶ್ವರ್ಯ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಒಳ್ಳೊಳ್ಳೆ ಹಾಡುಗಳನ್ನು ಹಾಡಿ ಅಪ್ ಲೋಡ್ ಮಾಡಿದ್ದಾರೆ, ಅದರಲ್ಲಿ ಕಣ್ಣು ಹೊಡಿಯಾಕ… ಕೂಡ ಒಂದು.

ವ್ಯವಸ್ಥಿತ ತಂಡದೊಂದಿಗೆ ಹಾಡು ರೆಕಾರ್ಡ್ ಮಾಡುವ ಐಶ್ವರ್ಯಾ ಟೀಂ ಕೂಡ ಅದ್ಭುತವಾಗಿದೆ. ಹೇಗ್ ಹೇಗೋ ಹಾಡಿ ಯೂಟ್ಯೂಬ್ ಹಾಕುವವರಲ್ಲ ಐಶ್ವರ್ಯಾ, ಅದಕ್ಕಾಗಿ ಉತ್ತಮ ತಂಡವೇ ಇದೆ. ಸಂದೀಪ್ ಎಸ್ ಅಯ್ಯರ್ ಅವರ ನಿರ್ದೇಶನದ ಈ ಹಾಡಿಗೆ ಹೇರ್ ಸ್ಟೈಲ್ ನಿಂದ ಹಿಡಿದು ಮೇಕಪ್, ಕಾಸ್ಟೂಮ್ ಹೀಗೆ ಎಲ್ಲದೂ ವ್ಯವಸ್ಥಿತವಾಗಿದೆ.

ಮುದ್ದು ಮುಖದ ಐಶ್ವರ್ಯಾಳ ಮಧುರ ಧ್ವನಿಯಲ್ಲಿ ಇತ್ತೀಚಿನ ರಾಬರ್ಟ್ ಫಿಲ್ಮ್ ನ ಸೂಪರ್ ಹಿಟ್ ಹಾಡು “ಕಣ್ಣು ಹೊಡಿಯಾಕ… ಮೊನ್ನೆ ಕಲಿತಿನಿ…” ಹಾಡಿನ‌ ವಿಡಿಯೊ ಇಲ್ಲಿದೆ ನೋಡಿ.
-Team Infotrend