ಈ ಒಂದು ರಿಪೋರ್ಟ್ ಜಾಹೀರಾದ ನಂತರ ಚಾಯನಾ ಯುದ್ಧದ ತಯಾರಿ ಮಾಡಲು ಶುರು ಮಾಡಿದೆ.

ನವದೆಹಲಿ: ಇಡೀ ಜಗತ್ತೇ ಕೊರೊನ ವೈರಸ್ ಗೆ ಚೀನ್ ದೇಶವೇ ಕಾರಣವೆಂದು ಹೇಳುತ್ತಿದೆ. ವಿಶ್ವದ ಅನೇಕ ದೊಡ್ಡ ರಾಷ್ಟ್ರಗಳು ಚೀನ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿವೆ. ಇದರ ನಾಯಕತ್ವ ಅಮೆರಿಕಾದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ವಹಿಸಿದ್ದಾರೆ. ಈ ಎಲ್ಲ ವರ್ತಮಾನ ಸ್ಥಿತಿಯ ಮೇಲೆ ಸೂಕ್ಷ್ಮವಾಗಿ ತನ್ನ ದೃಷ್ಟಿಯನ್ನಿಟ್ಟ ಚೀನ್ ನ ‘ಥಿಂಕ್ ಟ್ಯಾಂಕ್’ ಬೀಜಿಂಗ್ ನಿಂದ ಪ್ರಸ್ತುತ ಮಾಡಿದ ರಿಪೋರ್ಟ್ ದಲ್ಲಿ ಚೀನ್ ಮತ್ತು ಅಮೆರಿಕಾ ನಡುವೆ ದಿನದಿಂದ ದಿನಕ್ಕೆ ಕೆಡುತ್ತಿರುವ ಸಂಬಂಧಗಳ ಬಗ್ಗೆ ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಯುದ್ಧಕ್ಕೆ ತಯಾರಾಗಿರಿ ಎಂಬಂಥ ಸೂಚನೆ ಕೊಡಲಾಗಿದೆ.

ಬೀಜಿಂಗ್ ನಲ್ಲಿ ತಯಾರಾದ ಈ ರಿಪೋರ್ಟ್ ಕಳೆದ ತಿಂಗಳು ರಾಷ್ಟ್ರಾಧ್ಯಕ್ಷ ಶಿ ಜಿನ್ ಪಿಂಗ್ ಎದುರು ಮಂಡಿಸಿದ್ದಾರೆ. ಯಾವ ಮೀಟಿಂಗ್ ನಲ್ಲಿ ಈ ರಿಪೋರ್ಟ್ ಸಾದರು ಪಡಿಸಿದ್ದಾರೆ, ಆ ಮೀಟಿಂಗ್ ನಲ್ಲಿ ಜಿನ್ ಪಿಂಗ್ ಹೊರತು ಪಡಿಸಿ ಉಚ್ಚ ದರ್ಜೆಯ ಬೇರೆ ಅಧಿಕಾರಿಗಳು ಸಹಿತ ಹಾಜರಿದ್ದರು. ರಿಪೋರ್ಟ್ ನಲ್ಲಿ ವ್ಯಕ್ತ ಮಾಡಿದ ಇನ್ನೊಂದು ವಿಷಯ ಏನೆಂದರೆ ಚೀನಾಕ್ಕೆ ಸದ್ಯದ ಸಮಯದಲ್ಲಿ ಇಡೀ ಜಗತ್ತಿನಲ್ಲಿ ಆಗುತ್ತಿರುವ ವಿರೋಧ 1989 ರಲ್ಲಿ ಥಿಯಾನ್ ಮೆನ್ ಸ್ಕ್ವೇರ್ ವಿರೋಧ ಪ್ರದರ್ಶನ ಕ್ಕಿಂತಲೂ ಹಚ್ಚಿದೆ ಅಂತ.

ಹೀಗಾಗಿ ಮುಂಬರುವ ಸಮಯದಲ್ಲಿ ಚೀನ್ ದೇಶ ಅಮೆರಿಕೆಯ ಸಾರಥ್ಯದಲ್ಲಿ ನಡೆದ ವಿರೋಧಕ್ಕೆ ಎದುರಾಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ. ಈ ರಿಪೋರ್ಟ್ ‘ಥಿಂಕ್ ಟ್ಯಾಂಕ್’ ಚೀನಿ ಸುರಕ್ಷಾ ವಿಭಾಗ ಜಾಹೀರು ಪಡಿಸಿದೆ. ಸುರಕ್ಷಾ ವಿಭಾಗದ ಥಿಂಕ್ ಟ್ಯಾಂಕ್’ ‘ಚಾಯ್ ನೀಜ್ ಇನ್ಸ್ಟಿಟ್ಯೂಟ್ ಆಫ್ ಕಟೆಂಪ್ರರಿ ಇಂಟರ್ ನ್ಯಾಶನಲ್ ರಿಲೇಶನ್ಸ್’ (CICIR) ತಯಾರು ಮಾಡಿದೆ. ಈಗ ಹೇಳುವದಾದರೆ 1989 ರ ಥಿಯಾನ್ ಮೆನ್ ಸ್ಕ್ವೇರ್ ಬಗ್ಗೆ! 1989 ರಲ್ಲಿ ಬೀಜಿಂಗ್ ನ ಥಿಯಾನ್ ಮೆನ್ ಸರ್ಕಲ್ ನಲ್ಲಿ10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಒಟ್ಟುಗೂಡಿದ್ದರು. ಇವರ ಬೇಡಿಕೆ ದೇಶದಲ್ಲಿಯ ಸರ್ವಾಧಿಕಾರವನ್ನು (ನಿರಂಕುಶತ್ವ) ಕಿತ್ತೊಗೆದು ಪ್ರಜಾಪ್ರಭುತ್ವವನ್ನು ಹುಟ್ಟು ಹಾಕುವ ಸಮರ್ಥನೆಗೆ ಇಳಿದಿದ್ದರು. ಆದ್ರೆ 3 ರಿಂದ 4 ಜೂನ್ ಮಧ್ಯದಲ್ಲಿ ರಸ್ತೆಗಿಳಿದ ಹೋರಾಟಗಾರರ ಮೇಲೆ ಅಲ್ಲಿಯ ಎಡಪಂಥೀಯರು ಗೋಲಿಬಾರ್ ಗೆ ಆದೇಶ ಕೊಟ್ಟರು.

ಅದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಮಾಯಕ ಜನರ ಮಾರಣಹೋಮವಾಯಿತು. ಈ ವಿರೋಧ ಪ್ರದರ್ಶನವು ಆಗಿನ ಚೀನಾದ ಕಮ್ಯುನಿಷ್ಠ ಪಾರ್ಟಿಯ ಪೂರ್ವ ಮಹಾಸಚಿವ ಮತ್ತು ಉದಾರ ಹಾಗೂ ಸುಧಾರ ಮತವಾದಿ ಯಾಒಬಾಂಗ್ ಅವರ ಮೃತ್ಯುವಿನ ನಂತರ ಶುರುವಾಗಿತ್ತು. ಈ ವಿರೋಧ ದೇಶದ ಆರ್ಥಿಕ ಮತ್ತು ರಾಜಕೀಯ ನೀತಿಗಳ ವಿರೋಧಕ್ಕಾಗಿ ಮಾಡಿದ್ದರು. ಈ ಎಲ್ಲ ಘಟನೆಗಳ ಪಾರ್ಶ್ವಭೂಮಿಯ ಮೇಲೆ ದೇಶದಲ್ಲಿ ಇಂಟರ್ ನೆಟ್ ಸೌಲಭ್ಯದ ಮೇಲೆ ಸೆನ್ಸರ್ ಶಿಪ್ ಕಾನೂನು ಅಳವಡಿಸಲಾಗಿದೆ.

ಈಗಲೂ ಅನೇಕ ದೇಶಗಳು ಕೂಡಿ ಅಮೆರಿಕೆಯ ಮುಂದಾಳತ್ವದಲ್ಲಿ ಚಾಯನಾ ದೇಶದ ವಿರೋಧದಲ್ಲಿ ಒಂದುಗೂಡುತ್ತಿವೆ. ಅದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನೇಕ ಏಜೆನ್ಸಿಗಳಿಗೆ ತನಿಖೆಯ ಆದೇಶ ಕೊಟ್ಟಿದ್ದಾರೆ. ಟ್ರಂಪ್ ಮೊದಲೇ ಹೇಳಿದ ಪ್ರಕಾರ “ಚಾಯನೀಜ್ ವೈರಸ್ ಕೊರೊನ ವನ್ನು ವುಹಾನ್ ನ ಲ್ಯಾಬ್ ನಲ್ಲಿ ತಯಾರಾಗಿದೆ” ಎಂಬ ಮಾತು ಹೇಳಿದ್ದಾರೆ. ಇಲ್ಲಿಂದಲೇ ಎರಡು ದೇಶಗಳ ಸಂಬಂಧ ತೀರ ಹದಗೆಟ್ಟಿತು. ಅಮೇಲೆ ಎರಡು ದೇಶಗಳ ವಾಕ್ ಯುದ್ಧ ನಡೆದೇ ಇದೆ. ಅಂಥದ್ದರಲ್ಲಿ ಥಿಂಕ್ ಟ್ಯಾಂಕ್ ಪ್ರಸ್ತುತ ಮಾಡಿದ ಈ ರಿಪೋರ್ಟ್ ಶಿ ಜಿನ್ ಪಿಂಗ್ ಗೆ ಯುದ್ಧಕ್ಕೆ ತಯಾರಾಗಿರಲು ಸೂಚನೆ ಕೊಟ್ಟಂತಾಗಿದೆ.