VIDEO : ಬ್ಯಾಟ್ ಅಲ್ಲ, ಸ್ಟಂಪ್ ನಿಂದ ಈ ಹುಡುಗ ಮಾಡುವ ಬ್ಯಾಟಿಂಗ್ ನೋಡಿ ದಿಗ್ಗಜರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ! ವಿಡಿಯೊ ನೋಡಿ
ಈ ಹುಡುಗನಿಗೆ ಪ್ರತಿಭೆ ಅನ್ನುವುದು ಜೀನ್ಸನಲ್ಲೇ ಬಂದಿದೆಯೇನೋ ಎಂಬಂತೆ ಆತ ಬ್ಯಾಟಿಂಗ್ ಮಾಡುವ ಪರಿ ಅದ್ಭುತ. ಪಾಲಕರು ಇಷ್ಟಪಟ್ಟು – ಕಷ್ಟಪಟ್ಟು ಕೋಚಿಂಗ್ ಗೆ ಸೇರಿಸಿ ಕಲಿಸಿದಾಗ ಬರುವ ಬ್ಯಾಟಿಂಗ್ ಪಟ್ಟುಗಳು ಈ ಹುಡುಗನಿಗೆ ದೈವದತ್ತವಾಗಿ ಬಂದಿವೇನೋ ಎಂಬಂತೆ ಕೇವಲ ಎಂಟನೇ ವಯಸ್ಸಿನಲ್ಲಿ ಇಷ್ಟೊಂದು ಗಮನ ಸೆಳೆಯುತ್ತಿದ್ದಾನೆ.
ಎಂತೆಂಥವರೋ ಬ್ಯಾಟ್ ನಿಂದ ಆಡುವುದೇ ಕಷ್ಟವಾಗುವಾಗ ಈ ಹುಡುಗ ಕೇವಲ ಸ್ಟಂಪ್ ನಿಂದ ಬ್ಯಾಟಿಂಗ್ ಮಾಡುವ ಮೂಲಕ, ಕವರ್ ಡ್ರೈವ್ ಗಳು, ಸ್ಟ್ರೇಟ್ ಡ್ರೈವ್ ಗಳು ಮತ್ತು ಫ್ಲಿಕ್ ಶಾಟ್ ಗಳನ್ನು ಲೀಲಾಜಾಲವಾಗಿ ಆಡುತ್ತಾನೆ. ಸದ್ಯ ಈ ಹುಡುಗನ ಪುಟ್ಟ ವೈರಲ್ ಆಗುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪ್ರಶಂಸೆ ವ್ಯಕ್ತಪಡಿಸಲಾಗುತ್ತಿದೆ. ಹುಡುಗನ ಬಗ್ಗೆ ಹೆಚ್ಚು ವಿವರವನ್ನು ಟ್ವಿಟಿಗರು ಕೊಟ್ಟಿಲ್ಲ.
ಸ್ಟಂಪ್ ನೊಂದಿಗೆ ಬ್ಯಾಟಿಂಗ್!
ಕ್ರಿಕೆಟ್ ಅನ್ನು ಎಲ್ಲಾ ವಯಸ್ಸಿನ ಜನರು ಇಷ್ಟಪಡುತ್ತಾರೆ. ಮಗುವಿನ ಈ ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು ಇದು ಅವನ ಪ್ರತಿಭೆ ಎಲ್ಲರನ್ನು ಆಕರ್ಷಿಸಿದೆ. 8 ವರ್ಷದ ಮಗು ಸ್ಟಂಪ್ ಅನ್ನು ಬ್ಯಾಟ್ ನಂತೆ ಬಳಸಿ ಬ್ಯಾಟಿಂಗ್ ಮಾಡುತ್ತಿರುವುದು ಆಕರ್ಷಿಸುತ್ತದೆ.
ನೆಟ್ಸ್ ನಲ್ಲಿ ಈ ಮಗು ವೃತ್ತಿಪರ ಕ್ರಿಕೆಟಿಗನಂತೆ ಹೆಲ್ಮೆಟ್ನೊಂದಿಗೆ ಪ್ಯಾಡ್ಗಳನ್ನು ಕಟ್ಟಿಕೊಂಡು ಸಿಮೆಂಟ್ ನೆಲದ ಮೇಲೆ ಬ್ಯಾಟಿಂಗ್ ಮಾಡುತ್ತಿದ್ದಾನೆ. ಈ ಸಮಯದಲ್ಲಿ ಅವನು ಕವರ್ ಡ್ರೈವ್ಗಳು, ನೇರ ಡ್ರೈವ್ಗಳು ಮತ್ತು ಫ್ಲಿಕ್ ಶಾಟ್ಗಳನ್ನು ಅದ್ಭುತವಾಗಿ ಆಡುತ್ತಾನೆ. ಮೊದಮೊದಲು ನೋಡಲು ತಮಾಷೆಯೆನಿಸಿದರೂ ಸ್ಟಂಪ್ ನಿಂದ ಹೀಗೆ ಆಡುವುದು ಸುಲಭವಲ್ಲ.
“We’ll start you in three’s and go from there mate” pic.twitter.com/iaJwtUEq0p
— The Grade Cricketer (@gradecricketer) May 8, 2021
ಈ ಮಗುವನ್ನು ಸಾಕಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ಹೊಗಳಿದ್ದಾರೆ. ಯಾರೋ ಈತನನ್ನು ಭಾರತದ ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಿದರೆ, ಮತ್ಯಾರೋ ಸುನಿಲ್ ಗವಾಸ್ಕರ್ ಗೆ ಹೋಲಿಸಿದ್ದಾರೆ. ಒಬ್ಬ ಟ್ವಿಟರ್ ಬಳಕೆದಾರರು ಈತನನ್ನು ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಮತ್ತು ಇನ್ನೊಬ್ಬರು ದಕ್ಷಿಣ ಆಫ್ರಿಕಾದ ಜೂನಿಯರ್ ಎಬಿ ಡಿವಿಲಿಯರ್ಸ್ ಎಂದು ಬಣ್ಣಿಸಿದ್ದಾರೆ. ವಿಡಿಯೊ ಇಲ್ಲಿದೆ ನೋಡಿ, ನಿಮಗೆ ಕ್ರಿಕೇಟ್ ತಾಂತ್ರಿಕತೆ ಗೊತ್ತಿದ್ದರೆ ಮಾತ್ರ ವಿಡಿಯೊ ಇಷ್ಷವಾಗುತ್ತದೆ.
-Team Infotrend