ಕೋಟಿಗಟ್ಟಲೆ ಸಂಪಾದನೆ ಇದೆ ಆದರೆ ಸಹಾಯ ಮಾಡಿದ್ದು ಇಷ್ಟೇ : ಚಹಲ್ ಗೆ ಭರ್ತಿ ಟ್ರೋಲ್ ಮಾಡುತ್ತಿರುವ ನೆಟ್ಟಿಗರು
ಭಾರತೀಯ ತಂಡದ ಯುವ ಕ್ರಿಕೇಟಿಗ, ಐಪಿಎಲ್ ಬೆಂಗಳೂರು ತಂಡದ ಬೆನ್ನೆಲುಬು ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಹಲ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇನ್ನಿಲದಂತೆ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಅವರು ಕೊರೋನ ಸಂಕಷ್ಟಕ್ಕಾಗಿ ದೇಶಕ್ಕೆ ಮಾಡಿದ ಸಹಾಯದಿಂದ ಜನ ಅವರನ್ನು ಫೇಸ್ಬುಕ್, ಟ್ವಿಟರ್, ಇನ್ಸ್ಟಾ ಹೀಗೆ ಎಲ್ಲ ಕಡೆಯೂ ಬಾಯಿಗೆ ಬಂದಂತೆ ಹೊಗಳುತ್ತಿದ್ದಾರೆ.
ಕರೋನಾ ವೈರಸ್ ವಿರುದ್ಧ ಹೋರಾಡಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಮುಂದಾಗಿದ್ದಾರೆ. ಕರೋನಾ ಬಿಕ್ಕಟ್ಟಿಗೆ ಆರ್ಥಿಕ ನೆರವಾಗಿ ಇವರಿಬ್ಬರು 7 ಕೋಟಿ ರೂ. ಈ ಮೊತ್ತವನ್ನು ಎಸಿಟಿ ಅನುದಾನಕ್ಕೆ ನೀಡಲಿದ್ದಾರೆ. ಇದಕ್ಕಾಗಿ ವಿರಾಟ್ ಮತ್ತು ಅನುಷ್ಕಾ ತಮ್ಮ ಅಭಿಮಾನಿಗಳಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.
ಆಮ್ಲಜನಕ ಮತ್ತು ಚಿಕಿತ್ಸೆಗೆ ಅವಶ್ಯವಿರುವ ಇತರೆ ಸೌಲಭ್ಯಗಳನ್ನು ಒದಗಿಸಲು ಎಸಿಟಿ ಅನುದಾನ ಕೆಲಸ ಮಾಡುತ್ತದೆ. ವಿರಾಟ್ ಮತ್ತು ಅನುಷ್ಕಾ ಏಳು ದಿನಗಳ ಅಭಿಯಾನದಲ್ಲಿ 7 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದರು, ಮೊದಲ 24 ಗಂಟೆಗಳಲ್ಲಿಯೇ ಅವರು 3.6 ಕೋಟಿ ರೂ. ಸಂಗ್ರಹಿಸಿದ್ದಾರೆ.
ವಿರಾಟ್ ಕೊಹ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 3.6 ಕೋಟಿ ರೂ. ಕಲೆಕ್ಟ್ ಆಗಿದೆ, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಮ್ಮ ಗುರಿಯನ್ನು ಸಾಧಿಸಲು ಹೋರಾಡಿ ಮತ್ತು ದೇಶಕ್ಕೆ ಸಹಾಯ ಮಾಡಿ, ಧನ್ಯವಾದಗಳು,” ಎಂದು ವಿರಾಟ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಅವರ ಈ ಸತ್ಕಾರ್ಯಕ್ಕೆ ಯುಜ್ವೇಂದ್ರ ಚಾಹಲ್ ಎಷ್ಟು ದೇಣಿಗೆ ನೀಡಿದ್ದಾರೆ ಅಂತ ನಿಮಗೆ ಅಚ್ಚರಿಯಾಗಬಹುದು. ಅವರು ಕೊರೋನ ಸಂಕಷ್ಟಕ್ಕಾಗಿ ಕೊಟ್ಟಿರುವುದು ಬರೊಬ್ಬರಿ 95 ಸಾವಿರ ರೂ.!!! ಈ ಉದಾರ ದೇಣಿಗೆಗಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಕ್ರಿಕೆಟಿಗನಾಗಿ ನೀವು ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದ್ದೀರಿ, ಆದರೆ ನೀವು ಅಷ್ಟು ಕಡಿಮೆ ಮೊತ್ತವನ್ನು ಕೊಡಲು ಮನಸ್ಸಾದರೂ ಹೇಗೆ ಬಂತು ಎಂದು ಕೇಳಲಾಗುತ್ತಿದೆ.

‘ಚಹಲ್ ನಿಜವಾಗಿಯೂ 95,000 ರೂ. ಕೊಟ್ಟಿದ್ದಾರಾ ಅಣತ ತುಂಬಾ ಜನ ಪ್ರಶ್ನೆ ಕೇಳಿದ್ದಾರೆ, ಯಾಕೆಂದರೆ ಅವರಿಗೆ ಇದನ್ನು ನಂಬಲೇ ಆಗುತ್ತಿಲ್ಲ. ಚಾಹಲ್ ರವರ ಅಂತರರಾಷ್ಟ್ರೀಯ ಕ್ರಿಕೇಟ್ ಗಳಿಕೆ ಒತ್ತಟ್ಟಿಗಿರಲಿ, ಕೇವಲ ಐಪಿಎಲ್‌ನಿಂದನೇ ಅವರು 6 ಕೋಟಿ ರೂ. ಗಳಿಸುತ್ತಾರೆ. ಆದರೆ ಸಹಾಯ ಮಾಡಿರುವುದು ಕೇವಲ 95,000 ರೂ.
ತಮಾಷೆಯೇನೆಂದರೆ, ಅವರು ಬಳಸುವ ಐಫೋನ್‌ನ ಬೆಲೆ ಇಲ್ಲಿ ಮಾಡಿರುವ ಸಹಾಯಕ್ಕಿಂತ ದುಬಾರಿ ಬೆಲೆಯದ್ದಾಗಿದೆ. ಎಷ್ಟೋ ಜನ ದೇಣಿಗೆ ಕೊಡದೇ ಟ್ರೋಲ್ ಆದ್ರೆ, ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ನೀಡಿದ ಮೊತ್ತದಿಂದಾಗಿ ಟ್ರೋಲ್ ಆಗುತ್ತಿದ್ದಾರೆ.
-Team Infotrend