80 ರುಪಾಯಿ ಇದ್ದ ಅಡುಗೆ ಎಣ್ಣೆ 180 ಆಗಿದ್ದು ಹೇಗೆ? ಏನಿದರ ಅಸಲಿ ಕಾರಣ?

ಕಳೆದೊಂದು ವರ್ಷದಿಂದ ಬಹುತೇಕ ಭಾರತೀಯರಿಗೆ ಕೊರೋನ ಎಂಬುದು ಹೆಮ್ಮಾರಿಯಾಗಿದೆ. ಕಳೆದ ವರ್ಷ ಲಾಕ್ ಡೌನ್ ಕಾರಣಕ್ಕೆ ವ್ಯಾಪಾರ, ವಹಿವಾಟು, ಕೆಲಸ ಇಲ್ಲದೇ ಜನ ಕಂಗಾಲಾದರೆ, ಈ ವರ್ಷ ಸಾವು – ನೋವಿನ ಹೊಡೆತಕ್ಕೆ ಸಿಕ್ಕು ನಲುಗುತ್ತಿದ್ದಾರೆ. ಈ ನಡುವೆ ಕಳೆದೊಂದು ವರ್ಷದಿಂದ ದಿನನಿತ್ಯದ ವಸ್ತುಗಳ ಬೆಲೆ ಭಾರಿ ಏರಿಕೆ ಕಂಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅದರಲ್ಲೂ ಬಡವರಾದಿಯಾಗಿ ಎಲ್ಲರೂ ಬಳಸಲೇಬೇಕಾದ ಅಡುಗೆ ಎಣ್ಣೆಯ ಬೆಲೆ ಅಧಿಕವಾಗಿದ್ದು ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ. ಹತ್ತಿಪ್ಪತ್ತು ರುಪಾಯಿ ಹೆಚ್ಚಾಗಿದ್ದರೆ ಓಕೆ ಅನ್ನಬಹುದಿತ್ತು, ಆದರೆ ತೀರ ಡಬಲ್ ಹಾಗೂ ಅದಕ್ಕಿಂತ ಹೆಚ್ಚಾದರೆ ಹೇಗೆ, ಅದೂ ಕೂಡ ಒಂದೇ ವರ್ಷದಲ್ಲಿ ಪರಿ ಹೆಚ್ಚಾದರೆ ಜನರು ಜೀವನ ನಿಭಾಯಿಸುವುದಾದರೂ ಹೇಗೆ? ಇಷ್ಟಕ್ಕೂ ಹೀಗೆ ಭಾರಿ ಪ್ರಮಾಣದಲ್ಲಿ ಬೆಲೆ ಹೆಚ್ಚಾಗಲು ಇರುವ ನೈಜ ಕಾರಣವಾದರೂ ಏನು?

ಸೋಯಾಬಿನ್, ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ ಹೀಗೆ ಎಲ್ಲ ಖಾದ್ಯ ತೈಲವೂ ಅತ್ಯಧಿಕ ಪ್ರಮಾಣದಲ್ಲು ಬೆಲೆ ಹೆಚ್ಚಿಸಿಕೊಂಡು ಕುಳಿತಿವೆ. ಪ್ರತಿಯೊಬ್ಬರೂ ಬಳಸಲೇಬೇಕಾದ ವಸ್ತುವಾದ್ದರಿಂದ ಬೆಲೆ ಎಷ್ಟೇ ಆದರೂ ಕೊಳ್ಳಲೇಬೇಕು. ಸಣ್ಣ ಮನೆಯಿಂದ ಹಿಡಿದು ದೊಡ್ಡ ಹೊಟೆಲ್, ದಾಬಾ ಗಳವರೆಗೆ ಎಲ್ಲರಿಗೂ ಈ ಎಣ್ಣೆ ಏಟು ಸರ್ರಿಯಾಗಿ ಬಿದ್ದಿದೆ.

ನಿಮಗೆ ಆಶ್ಚರ್ಯವಾಗಬಹುದು, ದೇಶದ ರಾಜಧಾನಿ ದೆಹಲಿವೊಂದರಲ್ಲೇ ದಿನಕ್ಕೆ 1500 ಟನ್ ಅಡುಗೆ ಎಣ್ಣೆ ಬೇಕು, ಹಾಗೆಯೇ ಒಂದು ವರ್ಷಕ್ಕೆ ನಮ್ಮ ದೇಶದಲ್ಲಿ 200 ಲಕ್ಷ ಟನ್ ಎಣ್ಣೆ ಬಳಸಲಾಗುತ್ತದೆ. ಅಚ್ಚರಿಯೇನೆಂದರೆ ಇದರಲ್ಲಿ ಒಂದೂವರೆ ಲಕ್ಷ ಟನ್ ಎಣ್ಣೆಯನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ! ಅಂದರೆ ಸುಮಾರು 75% ಎಣ್ಣೆಯನ್ನು ನಾವು ಬೇರೆ ದೇಶದಿಂದಲೇ ತರಿಸಿ ಬಳಸಬೇಕಾಗಿದೆ.

ಎಣ್ಣೆ ವಿಷಯದಲ್ಲಿ ಸ್ವಾವಲಂಬಿ ಆಗದ ಕಾರಣವೇ ಇವತ್ತು ಅಧಿಕ ಬೇಲೆ ತೆರುವಂತಾಗಿದೆ, ನಮ್ಮ ರೈತರು ಸಾಕಷ್ಟು ಎಣ್ಣೆ ಕಾಳು ಬೆಳೆ ಬೆಳೆಯುತ್ತಿಲ್ಲ, ಅದಕ್ಕೆ ಸರ್ಕಾರಳು ಕೂಡ ಪ್ರೋತ್ಸಾಹ ನೀಡುತ್ತಿಲ್ಲ. ಯಾವ ಸರಕನ್ನು ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತದೆಯೋ ಅದನ್ನು ದೇಶದಲ್ಲಿಯೇ ಉತ್ಪಾದಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕು. ಆದರೆ ಇಲ್ಲಿ ಅಂಥ ಕೆಲಸ ಆಗದ ಕಾರಣ ಇವತ್ತು ನಾವೆಲ್ಲ ಇಷ್ಟೊಂದು ಪ್ರಮಾಣದ ಹೊರೆ ಹೊರಬೇಕಾಗಿದೆ.

ಕುಸುಬೆ – ತಾಳೆ ಬೆಳೆಯಲು ಹಲವು ಯೋಜನೆಗಳು ಇವೆಯಾದರೂ ಅವೆಲ್ಲ ತಾತನ ಕಾಲದ್ದವು. ಹೀಗಾಗಿ ಅವುಗಳಿಂದ ಪ್ರಯೋಜನವಾಗದು. ಇನ್ನುಳಿದಂತೆ ಬೆಲೆ ಏರಿಕೆಗೆ ಸಾಕಷ್ಟು ಕಾರಣಗಳಿವೆ. ಅವುಗಳನ್ನು ನಿಖರವಾಗಿ, ಸ್ಪಷ್ಟವಾಗಿ ಇಂಡಿಯನ್ ಮನಿ ಡಾಟ್ ಕಾಮ್ ನವರು ವಿವರಿಸಿದ್ದಾರೆ. ಆ ವಿಡಿಯೊ ಮೇಲಿದೆ. ಆಸಕ್ತರು ನೋಡಿ.
-Team Infotrend