VIDEO : ಸೋನಿ ಟಿವಿ ಸೂಪರ್ ಡ್ಯಾನ್ಸರ್ ನಲ್ಲಿ ಕನ್ನಡದ ಹುಡುಗನ ಅದ್ಭುತ ಡ್ಯಾನ್ಸ್, ತಲೆ ಮೇಲೆ ಕಿರೀಟ ಇಟ್ಟು ಸನ್ಮಾನ ಮಾಡಿದ ತೀರ್ಪುಗಾರರು! ವಿಡಿಯೊ ನೋಡಿ

ಕೆಲವರಿಗೆ ಪ್ರತಿಭೆ ಎಂಬುದು ರಕ್ತಗತವಾಗೇ ಬಂದಿರುತ್ತದೆ, ಇನ್ನು ಕೆಲವರಿಗೆ ಸ್ವಲ್ಪ ಕೋಚಿಂಗ್ ಸಿಕ್ಕರೆ ಸಾಕು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಧಿಸಿಬಿಡುತ್ತಾರೆ. ಈ ಹುಡುಗನ ವಿಷಯದಲ್ಲೂ ಹೀಗೇ ಆಗಿರುವುದು. ಕೋರಿಯೋಗ್ರಾಫರ್ ತರಬೇತಿಯನ್ನು ಭರಪೂರ್ ಬಳಸಿಕೊಂಡ ಹುಡುಗ ಸೋನಿ ಟಿ.ವಿ ಯ ಸೂಪರ್ ಡ್ಯಾನ್ಸರ್ ನಲ್ಲಿ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ.

ವಿಡಿಯೊದಲ್ಲಿ ನೀವು ಮೊದಲು ಆತ ಹಾಗೂ ಆತನ ಗುರುವಿನ ಭರ್ಜರಿ ಡ್ಯಾನ್ಸ್ ನೋಡಬಹುದು. ಕೊನೆಗೆ ತೀರ್ಪುಗಾರರು ಮನಬಿಚ್ಚಿ ಹೊಗಳಿದ ಕಾಮೆಂಟ್ ಗಳಿವೆ. ಹಿಟ್ ಹಿಂದಿ ಹಾಡಿಗೆ ತುಂಬಾ ಭಿನ್ನವಾಗಿ ಡ್ಯಾನ್ಸ್ ಮಾಡಿದ ಇವರು ನಿಜಕ್ಕೂ ಅಲ್ಲಿರುವ ಯಾರನ್ನೂ ಒಂದು ಕ್ಷಣ ಕೂಡ ಆಕಡೆ ಈಕಡೆ ನೋಡದಂತೆ ಸೆಳೆದರು.

ತೀರ್ಪುಗಾರರಾದ ರೆಮೊ ಡಿಸೌಝಾ, ಫರ್ಹಾ ಖಾನ್, ಗೀತಾ ಕಫೂರ್ ಇವರೆಲ್ಲ ಹುಡುಗನ ಡ್ಯಾನ್ಸ್ ಕೋರಿಯೋಗ್ರಾಫರ್ ಕಲೆಯನ್ನು ಮನಸಾರೆ ಹೊಗಳಿದರು. ಈ ಹುಡುಗ ಕನ್ನಡಿಗನಾಗಿರುವುದು ವಿಶೇಷ ಹಾಗೂ ನಾವೆಲ್ಲ ಹೆಮ್ಮೆಪಡುವಂಥಹುದು. ಪೃಥ್ವಿರಾಜ್ ಹೆಸರಿನ ಬಾಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ಎಲ್ಲರ ಪ್ರೀತಿ ಗಳಿಸಿದ.

ತೀರ್ಪುಗಾರ ರೆಮೊ ಡಿಸೌಜಾ ಏಣಿಯ ಮೇಲೆ ಏರಿ ಗೌರವಿಸಿದರೆ, ಖ್ಯಾತ ಕೋರಿಯೋಗ್ರಾರ್ ಫರ್ಹಾ ಖಾನ್ ಪೃಥ್ವಿರಾಜ್ ಗೆ ಕಿರೀಟ ತೋಡಿಸಿ ಗೌರವಿಸಿದರು. ಕನ್ನಡದ ಹುಡುಗ ಇಷ್ಟೊಂದು ಗೌರವ ಸಿಕ್ಕಿದ್ದು ಬಹುಶಃ ಇದೇ ಮೊದಲು. ಗೀತಾ ಕಪೂರ್ ಮನಸ್ಸಿಗೆ ಮುಟ್ಟುವ ಹಾಗೆ ಸೆರಗೊಡ್ಡಿ ಪೃಥ್ವಿರಾಜ್ ಗೆ ಒಳ್ಳೆ ಭವಿಷ್ಯ ಕಲ್ಪಿಸಲು ದೇವರಿಗೆ ಬೇಡಿಕೊಂಡರು.

ಸೀರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಇವರ ತಂದೆ ಮಗನ ಭವಿಷ್ಯಕ್ಕಾಗಿ ಸಾಕಷ್ಟು ಪ್ರೋತ್ಸಾಹಿಸುತ್ತಿದ್ದಾರೆ. ಬಡತನದಲ್ಲಿರುವ ಅವರ ಕುಟುಂಬಕ್ಕೆ ಪೃಥ್ವಿ ಜೊತೆ ಇರುವುದು ಸಾಧ್ಯವಾಗಿಲ್ಲ. ಹೀಗಾಗಿ ಹತ್ತು ವರ್ಷ ವಯಸ್ಸಿನ ಪೃಥ್ವಿರಾಜ್ ತಾನೊಬ್ಬನೇ ಅಲ್ಲಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾನೆ. ಅವನ ಡ್ಯಾನ್ಸ್ ಇದ್ದಾಗ ಅವರ ತಂದೆಗೆ ವಿಡಿಯೊ ಕಾಲ್ ಮಾಡಲಾಗುತ್ತದೆ.

ಸೋನಿ ಟಿವಿ ಸೂಪರ್ ಡ್ಯಾನ್ಸರ್ : ಚಾಪ್ಟರ್ – 4 ನಲ್ಲಿನ ಆ ಹುಡುಗನ ಡ್ಯಾನ್ಸ್ ಒಂದನೇ ವಿಡಿಯೊದಲ್ಲಿದೆ, ಎರಡನೇ ವಿಡಿಯೊದಲ್ಲಿ ಆತನನ್ನು ತೀರ್ಪುಗಾರರು ಗೌರವಿಸಿದ ದೃಶ್ಯಾವಳಿಗಳಿವೆ. ಆಸಕ್ತರು ನೋಡಿ, ಕಾಮೆಂಟ್ ಮಾಡಿ.
-Team Infotrend