ಅಮೆರಿಕಾ: ಕೊರೊನದಲ್ಲಿ ಖುಲಾಯಿಸಿತು ವ್ಯಕ್ತಿಯೊಬ್ಬನ ಅದೃಷ್ಟ! ಒಂದೇ ದಿನದಲ್ಲಿ ಎರಡು ಲಾಟರಿಯಿಂದ ಗೆದ್ದ ಇಷ್ಟೊಂದು ಹಣ!

ಅದೃಷ್ಟ ಯಾವಾಗ ಯಾರಿಗೆ ಎಲ್ಲಿ ಅದೃಷ್ಟ ಹೊಡೆಯುವದು ಯಾರಿಗೂ ಹೇಳೋಕಾಗಲ್ಲ. ಅಮೆರಿಕೆಯಲ್ಲಿ ಒಂದು ಕಡೆಗೆ ಕೊರೊನ ಮರಣ ಮೃದುಂಗವನ್ನು ಬಾರಿಸುತ್ತಿದ್ದರೆ ಇನ್ನೊಂದು ಕಡೆಗೆ ವ್ಯಕ್ತಿಯೋರ್ವ ಕೋಲೊರ್ಯಾಡೋ ದಲ್ಲಿ ನೋಡನೋಡುವಷ್ಟರಲ್ಲಿ ಮಿಲಿಯನ್ ಡಾಲರ್ ಮಾಲೀಕನಾಗಿಬಿಟ್ಟ.

ಒಂದೇ ದಿನದಲ್ಲಿ ಎರಡು ಸಲ ಗೆದ್ದ ಲಾಟರಿ!!

ಜ್ಯುಬಿ ಹೆಸರಿನ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಎರಡು ಸಲ ಲಾಟರಿ ಗೆದ್ದುಕೊಂಡು ಮಿಲಿಯನ್ ಡಾಲರ್ ಗಳಿಕೆಯನ್ನು ಮಾಡಿಕೊಂಡ. ಕಳೆದ ಮಾರ್ಚ್ ತಿಂಗಳಿನ 25 ತಾರೀಖಿಗೆ ಎರಡು ಸಲ ಪಾವರ್ ಬಾಲ್ ಜಾಕ್ ಪಾಟ್ ಗೆದ್ದಿದ್ದಾನೆ. ಲಾಟರಿಯ ಎರಡು ಟಿಕೆಟ್ ಗಳನ್ನು ಬೇರೆ ಬೇರೆ ಸ್ಥಳಗಳಿಂದ ಖರೀದಿಸಿದ್ದನು. ಇದರಲ್ಲಿ ಒಂದು ಟಿಕೆಟ್ ಮುಂಜಾನೆ ಮತ್ತು ಇನ್ನೊಂದು ಸಾಯಂಕಾಲದ ಸಮಯದಲ್ಲಿ ಖರೀದಿಸಿದ್ದನು. ಎರಡು ದಿನಗಳ ನಂತರ ತಾನೇ ಲಾಟರಿ ಗೆದ್ದಿದ್ದು ಗೊತ್ತಾದ ನಂತರ ಮೊದಲಿಗೆ ಏನು ನಡೆದಿದೆ,ಏನು ಆಗ್ತಾ ಇದೆ ಎಂಬುದರ ಬಗ್ಗೆ ವಿಶ್ವಾಸವೇ ಕೂರದಂತಾಗಿತ್ತಂತೆ.

ಜ್ಯುಬಿ ಒಂದೇ ದಿನದಲ್ಲಿ ಸುಮಾರು 16 ಕೋಟಿ ರೂಪಾಯಿಗಳ ಅಂದ್ರೆ 2 ಮಿಲಿಯನ್ ಡಾಲರ್ ಹಣದ ಮಾಲೀಕನಾದನು.

‘ದಿ ಕೊಲೊರ್ಯಾಡೋ ಲಾಟರಿ’ ಎರಡು ಚೆಕ್ ಗಳೊಂದಿಗೆ ಜ್ಯುಬಿಯ ಫೋಟೋ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿ ಆತನ ಗೆಲುವಿಗೆ ಶುಭಾಶಯಗಳನ್ನು ಕೋರಿದ್ದಾರೆ. ಜ್ಯುಬಿ ಲಾಟರಿ ನಂಬರ್ ಸ್ವತಃ ಆರಿಸಿಕೊಂಡಿದ್ದನು. ಇಂಥ ಕೊರೊನ ಮಹಾಮಾರಿಯ ಸಮಯದಲ್ಲಿ ಜ್ಯುಬಿ ಶ್ರೀಮಂತನಾದನು.