ಇವುಗಳನ್ನು ಅಪ್ಪಿತಪ್ಪಿಯೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ, ನೀವು ಮತ್ತು ನಿಮ್ಮ ಕುಟುಂಬ ಅನಾರೋಗ್ಯಕ್ಕೆ ಒಳಗಾಗಬಹುದು
ವಾಸ್ತು ಶಾಸ್ತ್ರವು ಸರಿಯಾದ ದಿಕ್ಕಿನ ಜ್ಞಾನವನ್ನು ನೀಡುವುದಲ್ಲದೆ, ಯಾವ ದಿಕ್ಕಿನಲ್ಲಿ ಏನನ್ನು ಹೇಗೆ ಇಡಬೇಕು ಎಂಬುದರ ಬಗ್ಗೆ ತಿಳಿಸುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಉಳಿಯುತ್ತದೆ. ಮನೆಯಲ್ಲಿ ಕೆಲವು ಸಂಗತಿಗಳಿವೆ, ಅವುಗಳ ಕಾರಣದಿಂದಾಗಿ ವಾಸ್ತು ದೋಷ ಸಂಭವಿಸಬಹುದು ಮತ್ತು ಜೀವನದಲ್ಲಿ ಅನೇಕ ಸಮಸ್ಯೆಗಳು ಸಂಭವಿಸಬಹುದು. ನೀವು ವಾಸ್ತು ಶಾಸ್ತ್ರವನ್ನು ನಂಬುವುದಾದರೆ ನಾವು ಇಲ್ಲಿ ತಿಳಿಸುವ ಕೆಲವು ವಿಷಯಗಳ ಬಗ್ಗೆ ಗಮನ ಕೊಡಿ…
ಈ ಕೆಳಗಿನ ವಸ್ತುಗಳು ಮನೆಯಲ್ಲಿದ್ದರೆ ಅವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಕುಟುಂಬ ಸದಸ್ಯರು ದೈಹಿಕವಾಗಿ ಮತ್ತು ಮಾನಸಿಕ ಅಸ್ವಸ್ಥರಾಗಬಹುದು. ಅವು ಯಾವುವು ನೋಡೋಣ ಬನ್ನಿ…
1 ಭಗ್ನಗೊಂಡ ವಿಗ್ರಹ – ಒಡೆದ ಫೋಟೊ : ಹಿಂದೂ ಧರ್ಮದಲ್ಲಿ ಭಗ್ನಗೊಂಡ ವಿಗ್ರಹವನ್ನು ಪೂಜಿಸುವುದು ತಪ್ಪೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಭಗ್ನಗೊಂಡ ವಿಗ್ರಹವನ್ನು ಮನೆಯಲ್ಲಿ ಇಡುವುದು ಸಹ ಸರಿಯಲ್ಲ. ಮನೆಯಲ್ಲಿರುವ ವಾಸ್ತು ದೋಷಗಳು ಅಂತಹ ವಿಗ್ರಹಗಳಿಂದ ಉಂಟಾಗುತ್ತವೆ. ಇದು ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಆದ್ದರಿಂದ, ವಿಗ್ರಹ ಅಥವಾ ದೇವರ ಪ್ರತಿಮೆ, ಫೋಟೊ ಮುರಿದುಹೋಗಿದರೆ ಅಥವಾ ಹಾನಿಗೊಳಗಾಗಿದ್ದರೆ, ತಕ್ಷಣ ಅದನ್ನು ಮನೆಯ ಹೊರಗೆ ಇರಿಸಿ. ಹಾಗಂತ ಅಂತಹ ವಿಗ್ರಹ ಅಥವಾ ದೇವರ ಚಿತ್ರವನ್ನು ಎಲ್ಲಿಯೂ ಎಸೆಯಬೇಡಿ, ಬದಲಿಗೆ ಅದನ್ನು ಹರಿಯುವ ನೀರಿನಲ್ಲಿ ತೇಲಿಬಿಡಿ ಅಥವಾ ಅದನ್ನು ಮಣ್ಣಿನಲ್ಲಿ ಮುಚ್ಚಿ.

2 ಹಳೆಯ ಪತ್ರಿಕೆ – ಅನೇಕ ಜನರು ಹಳೆಯ ಪತ್ರಿಕೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದನ್ನು ನೀವು ನೋಡಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತವೆ, ಇದು ಕುಟುಂಬದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಆದ್ದರಿಂದ ಹಳೆಯ ಪತ್ರಿಕೆಗಳನ್ನು ಪ್ರತಿ ವಾರ ಅಥವಾ ಪ್ರತಿ ತಿಂಗಳು ಮಾರಾಟ ಮಾಡಲು ಪ್ರಯತ್ನಿಸಿ. ಒಂದು ವೇಳೆ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿದ್ದರೆ ಯಾರಿಗಾದರೂ ಓದಲು ಕೊಡಿ ಅಥವಾ ಅವುಗಳನ್ನು ಸರಿಯಾಗಿ ಇರಿಸಿ ಮುಚ್ಚಿ. ಬೇಕಾಬಿಟ್ಟಿ ಎಲ್ಲೆಂದರಲ್ಲಿ ಎಸೆಯಬಾರದು.
3 ಮುರಿದ ಸಾಮಾನುಗಳು – ಬಹುತೇಕ ಮುರಿದ ಎಲ್ಲವೂ ಶಕ್ತಿಯನ್ನು ಉತ್ಪಾದಿಸುತ್ತವೆ. ಆದ್ದರಿಂದ ಅಂತಹ ವಸ್ತುಗಳನ್ನು ಸರಿಪಡಿಸಿ ಅಥವಾ ತಕ್ಷಣ ಮನೆಯಿಂದ ಹೊರತನ್ನಿ. ಅಡುಗೆಮನೆಯಲ್ಲಿ ಯಾವುದೇ ಪಾತ್ರೆ ಮುರಿದಿದ್ದರೆ ಅದನ್ನು ಬಳಸಬೇಡಿ, ಅದರಿಂದ ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳಾಗಬಹುದು.

4 ಒಣಗಿದ ಸಸ್ಯಗಳು – ಈಗ ಮನೆಯ ಒಳ ಆವರಣದಲ್ಲಿ ಸಸ್ಯಗಳನ್ನು ನೆಡುವ ಪ್ರವೃತ್ತಿ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಮನೆಯೊಳಗೆ ಎಂದಿಗೂ ಮುಳ್ಳಿನ ಗಿಡಗಳನ್ನು ನೆಡಬೇಡಿ ಮತ್ತು ಮನೆಯಲ್ಲಿ ಇರಿಸಲಾಗಿರುವ ಯಾವುದೇ ಸಸ್ಯವು ಒಣಗಿದರೆ ತಕ್ಷಣ ಅದನ್ನು ತೆಗೆದುಹಾಕಿ. ಒಣ ಅಥವಾ ಮುಳ್ಳಿನ ಸಸ್ಯವನ್ನು ಮನೆಯಲ್ಲಿ ಇಡುವುದರಿಂದ ಕುಟುಂಬದ ಹಿರಿಯ ಸದಸ್ಯರ ಆರೋಗ್ಯ ಹದಗೆಡುತ್ತದೆ.
5 ಒಡೆದ ಕನ್ನಡಿ – ವಾಸ್ತು ಶಾಸ್ತ್ರದ ಪ್ರಕಾರ, ಮುರಿದ ಕನ್ನಡಿ, ಒಡೆದ ಗಾಜಿನ ಪಾತ್ರೆಗಳು ಅಥವಾ ಮುರಿದ ಗಡಿಯಾರವನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಮನೆಯಲ್ಲಿ ಧರಿಸಲಾರದ ತೀರ ಹಳೆಯ ಬಟ್ಟೆಗಳು ಇದ್ದರೆ, ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಅಂಥ ಈ ಬಟ್ಟೆಗಳನ್ನು ಯಾರಿಗಾದರೂ ತೊಡುವವರಿಗೆ ದಾನ ಮಾಡಿ.
6 ಜೇಡರ ಬಲೆ – ಮನೆಯಲ್ಲಿ ಕಣಜರಗಿ ಗೂಡು ಅಥವಾ ಜೇಡರ ಇರುವುದು ಸರಿಯಲ್ಲ. ಆದ್ದರಿಂದ ನಿಮ್ಮ ಮನೆಯಲ್ಲಿ ಜೇಡ ಇದ್ದರೆ, ತಕ್ಷಣ ಅದನ್ನು ಸ್ವಚ್ಚಗೊಳಿಸಿ. ಮೇಲಿನ ಬಹುತೇಕ ಸಂಗತಿಗಳು ಸ್ವಚ್ಚತೆಗೆ ಸಂಬಂಧಪಟ್ಟಂತೆಯೇ ಇವೆ. ವಾಸ್ತು ಪ್ರಕಾರ ಗಾಳಿ-ಬೆಳಕು-ಸ್ವಚ್ಚತೆ ಇವೇ ಮುಖ್ಯ. ನಂಬಿಕೆಯಿದ್ದವರು ಪಾಲಿಸಿ.
-Team Infotrend